ಸ್ಥಗಿತಗೊಂಡಿದ್ದ ಐಪಿಎಲ್ ಪುನಾರಂಭ: ಅರಬ್ಬರ ನಾಡಿನಲ್ಲಿ ಮತ್ತೆ ನಡೆಯಲಿದೆ ಕ್ರಿಕೆಟ್ ಹಬ್ಬ
Team Udayavani, May 25, 2021, 6:25 PM IST
ನವಹೆದೆಲಿ : ಆಟಗಾರರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದರಿಂದ ಸ್ಥಗಿತಗೊಂಡಿದ್ದ ಈ ಬಾರಿಯ ಐಪಿಎಲ್ ನ ಉಳಿದ ಪಂದ್ಯಗಳು ದುಬೈಗೆ ಸ್ಥಳಾಂತರಗೊಂಡಿವೆ ಎಂದು ವರದಿಯಾಗಿದೆ.
ಈ ಬಾರಿಯ ಐಪಿಎಲ್ ನ್ನು ಕೋವಿಡ್ ಬಗ್ಗೆ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿಕೊಂಡು ಆರಂಭಿಸಿಲಾಗಿತ್ತು. ಪ್ರಾರಂಭದಲ್ಲಿ ಯಶಸ್ಸಾಗಿದ್ದ ಟೂರ್ನಿ, ಮಧ್ಯಭಾಗದಲ್ಲಿ ಇಬ್ಬರು ಆಟಗಾರರಿಗೆ ಕೋವಿಡ್ ಕಾಣಿಸಿಕೊಂಡ ಪರಿಣಾಮ ಅರ್ಧದಲ್ಲಿ ಸ್ಥಗಿತಗೊಳಿಸಿ ಬಿಸಿಸಿಐ ಸುರಕ್ಷಿತವಾಗಿ ವಿದೇಶಿ ಆಟಗಾರರನ್ನು ತವರಿಗೆ ಕಳುಹಿಸಿಕೊಟ್ಟಿತ್ತು.
ಆದರೀಗ ಐಪಿಎಲ್ 14 ರ ಉಳಿದ 31 ಪಂದ್ಯಗಳು ದುಬೈಗೆ ಸ್ಥಳಾಂತರಗೊಂಡು ಐಪಿಎಲ್ ಪುನಾರಂಭಗೊಳ್ಳಲಿದೆ ಎಂದು ವರದಿಯಾಗಿದೆ. ಬಿಸಿಸಿಐ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಸೆಟ್ಟಂಬರ್ 3 ನೇ ವಾರದಲ್ಲಿ ಐಪಿಎಲ್ ಪುನಾರಂಭಗೊಳ್ಳಲಿದೆ ಎನ್ನಲಾಗಿದೆ.
ಇದನ್ನೂ ಓದಿ : ಭಾರತವಿಲ್ಲದ ಕ್ರಿಕೆಟ್ ತುಂಬಾ ಕಷ್ಟ, ಕ್ರಿಕೆಟ್ ಗೆ ಭಾರತದ ಅಗತ್ಯವಿದೆ: ರಿಚರ್ಡ್ ಹ್ಯಾಡ್ಲಿ
ಐಪಿಎಲ್ ಪುನಾರಂಭಗೊಂಡರೆ ಯಾವೆಲ್ಲಾ ದೇಶದ ಆಟಗಾರರು ಮತ್ತೆ ಸೇರಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಈ ಹಿಂದೆ ಕೋವಿಡ್ ಸಮಯದಲ್ಲಿ ಐಪಿಎಲ್ ಟೂರ್ನಿಯನ್ನು ಯುಎಇ ಯಶಸ್ವಿಗಾಗಿ ನಡೆಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.