ಚೆನ್ನೈ ಜಯಕ್ಕೆ ಕಾದಿರುವ ಧೋನಿ ಫ್ಯಾನ್ಸ್
Team Udayavani, Apr 2, 2021, 7:00 AM IST
ಚೆನ್ನೈ ತಂಡವೆಂದರೆ ಅದು ಧೋನಿ ಟೀಮ್. ಧೋನಿ ಅಭಿಮಾನಿಗಳೆಲ್ಲ ಚೆನ್ನೈ ತಂಡದ ಕಟ್ಟಾ ಅಭಿಮಾನಿಗಳು. ಧೋನಿ “ಟೀಮ್ ಇಂಡಿಯಾ’ ನಾಯಕನಾಗಿ ಉಚ್ಛಾ†ಯ ಕಾಲದಲ್ಲಿದ್ದಾಗ ಅತ್ತ ಐಪಿಎಲ್‌ನಲ್ಲೂ ಚೆನ್ನೈ ಹವಾ ಜೋರಾಗಿಯೇ ಬೀಸುತ್ತಿತ್ತು. 2011ರಲ್ಲಿ ಭಾರತ ಎರಡನೇ ಸಲ ಧೋನಿ ಸಾರಥ್ಯದಲ್ಲಿ ವಿಶ್ವಕಪ್ ಎತ್ತಿದ ವರ್ಷವೇ ಚೆನ್ನೈ ಕೂಡ ಎರಡನೇ ಸಲ ಐಪಿಎಲ್ ಚಾಂಪಿಯನ್ ಎನಿಸಿದ್ದು ಕಾಕತಾಳೀಯ.
ಮುಂಬೈ ಹೊರತುಪಡಿಸಿದರೆ ಅತೀ ಹೆಚ್ಚು 3 ಸಲ ಕಪ್ ಎತ್ತಿದ ತಂಡವೆಂದರೆ ಚೆನ್ನೈ. ಆದರೆ ಅತೀ ಹೆಚ್ಚು 8 ಸಲ ಫೈನಲ್‌ಗೆ ಲಗ್ಗೆ ಹಾಕಿದ ಛಾತಿ ಈ ತಂಡದ್ದು. 2018ರಲ್ಲಿ ಕೊನೆಯ ಸಲ ಚಾಂಪಿಯನ್ ಎನಿಸಿದಾಗ ಚೆನ್ನೈ “ಅಪ್ಪಂದಿರ ತಂಡ’ವಾಗಿತ್ತು. ಕಿರಿಯರೇ ಮಿಂಚುವ ಟಿ20 ಆಟದಲ್ಲಿ ಹಿರಿಯರು ಮೆರೆದಾಡಿ ತಂಡವನ್ನು ಚಾಂಪಿಯನ್ ಪಟ್ಟದಲ್ಲಿ ಕೂರಿಸಿದ್ದೊಂದು ವಿಸ್ಮಯವೇ ಸೈ. ದುರಂತವೆಂದರೆ, ಇಷ್ಟೊಂದು ಖ್ಯಾತಿ ಪಡೆದ ತಂಡವೂ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ಎರಡು ವರ್ಷ ನಿಷೇಧಕ್ಕೊಳಗಾದದ್ದು!
ರೈನಾ ಪುನರಾಗಮನದ ಬಲ :
ಕಳೆದ ವರ್ಷ ಐಪಿಎಲ್ ಇತಿಹಾಸದಲ್ಲೇ ಮೊದಲ ಸಲ ಪ್ಲೇ-ಆಫ್ ತಲುಪಲು ವಿಫಲವಾಗಿದ್ದ ಧೋನಿ ಪಡೆ, ಈ ಬಾರಿ ಸಂಘಟಿತ ಶಕ್ತಿಯೊಂದಿಗೆ ಹೋರಾಡುವ ಉಮೇದಿನಲ್ಲಿದೆ. ಹಳೆಯ ಚಾರ್ಮ್ ಗಳಿಸುವುದು ತಂಡದ ಏಕೈಕ ಗುರಿ.
ಸುರೇಶ್ ರೈನಾ ಮರಳಿದ್ದರಿಂದ ಬ್ಯಾಟಿಂಗ್ ವಿಭಾಗ ಹೆಚ್ಚು ಬಲಿಷ್ಠಗೊಂಡಿದೆ. ಡು ಪ್ಲೆಸಿಸ್, ಗಾಯಕ್ವಾಡ್, ರಾಯುಡು, ಸ್ಯಾಮ್ ಕರನ್, ಮೊಯಿನ್ ಅಲಿ, ಬ್ರಾವೊ ಅವರೆಲ್ಲ ಬ್ಯಾಟಿಂಗ್ ವಿಭಾಗದ ಪ್ರಮುಖರು. ಸ್ವತಃ ಧೋನಿ ಫಾರ್ಮ್ ಮತ್ತು ಆಲ್‌ರೌಂಡರ್ ಜಡೇಜ ಅವರ ಫಿಟ್‌ನೆಸ್ ಹೇಗಿದೆ ಎಂಬುದನ್ನು ಕಾದುನೋಡಬೇಕಿದೆ.
ಬೌಲಿಂಗ್ ವಿಭಾಗದಲ್ಲಿ 9.25 ಕೋಟಿ ರೂ. ಬೆಲೆಬಾಳುವ ಕರ್ನಾಟಕದ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ತಂಡದ ಕೇಂದ್ರಬಿಂದುವಾಗಿದ್ದಾರೆ. ಎನ್‌ಗಿಡಿ, ಠಾಕೂರ್, ಕರನ್, ಚಹರ್, ತಾಹಿರ್, ಸ್ಯಾಂಟ್ನರ್ ಅವರನ್ನೊಳಗೊಂಡ ಬೌಲಿಂಗ್ ವಿಭಾಗ ವೈವಿಧ್ಯಮಯ.
ತಂಡದ ದೌರ್ಬಲ್ಯ :
ಕಳೆದ ಸಲ ಕಳಪೆ ಬ್ಯಾಟಿಂಗ್ ಚೆನ್ನೈಗೆ ದೊಡ್ಡ ಹೊಡೆತವಾಗಿ ಪರಿಣಮಿಸಿತ್ತು. ಈ ಸಲ ಬ್ಯಾಟಿಂಗ್ ಕ್ಲಿಕ್ ಆದರಷ್ಟೇ ಧೋನಿ ಪಡೆಗೆ ಉಳಿಗಾಲ. “ಸ್ಲೋ ಸ್ಟಾರ್ಟರ್’ ಎನಿಸಿಕೊಳ್ಳದೆ ಆರಂಭದಿಂದಲೇ ಗೆಲ್ಲುತ್ತ ಹೋದರೆ ಚೆನ್ನೈ ಹಾದಿ ಸ್ಪಷ್ಟಗೊಳ್ಳಲಿದೆ. ಕೀ ಆಲ್‌ರೌಂಡರ್ ಈಗಷ್ಟೇ ಬ್ರಾವೊ ಗಾಯದಿಂದ ಚೇತರಿಸಿಕೊಂಡಿದ್ದು, ಮ್ಯಾಚ್ ವಿನ್ನರ್ ಆಗಬಲ್ಲರೇ ಎಂಬ ಪ್ರಶ್ನೆಯೊಂದಿದೆ. ಹಿರಿಯ ಸವ್ಯಸಾಚಿ ವಾಟ್ಸನ್ ನಿವೃತ್ತಿಯಾಗಿರುವುದೂ ಹಿನ್ನಡೆಯಾದೀತು.
ತಂಡದ ಅಚ್ಚರಿ :
ಅನುಮಾನವೇ ಇಲ್ಲ. ಅದು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ! 2014ರ ಬಳಿಕ ಪೂಜಾರ ಮೊದಲ ಸಲ ಐಪಿಎಲ್ ಆಡಲಿದ್ದಾರೆ. ಪಂಜಾಬ್, ಆರ್‌ಸಿಬಿ, ಕೆಕೆಆರ್ ತಂಡಗಳನ್ನು ಪ್ರತಿನಿಧಿಸಿರುವ ಪೂಜಾರ ಹೊಡಿಬಡಿ ಆಟಕ್ಕೆ ಎಷ್ಟರ ಮಟ್ಟಿಗೆ ಸೂಕ್ತರಾಗಬಲ್ಲರು? ಈ ಸಲದ ಟಿ20 ವಿಶ್ವಕಪ್ ರೇಸ್‌ನಲ್ಲಿ ತಾನೂ ಇದ್ದೇನೆ ಎಂದು ಸವಾಲು ಹಾಕಿರುವ ಪೂಜಾರ ಅವರಿಗೆ ಐಪಿಎಲ್ ವೇದಿಕೆಯಾದೀತೇ? ಕುತೂಹಲ ಸಹಜ.
ಚಾಂಪಿಯನ್: 03
2010 ಮುಂಬೈ ವಿರುದ್ಧ 22 ರನ್ ಜಯ
2011 ಆರ್‌ಸಿಬಿ ವಿರುದ್ಧ 58 ರನ್ ಜಯ
2018 ಹೈದರಾಬಾದ್ ವಿರುದ್ಧ 8 ವಿಕೆಟ್ ಜಯ
ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ), ಸುರೇಶ್ ರೈನಾ, ಅಂಬಾಟಿ ರಾಯುಡು, ಕೆ.ಎಂ. ಆಸಿಫ್, ದೀಪಕ್ ಚಹರ್, ಡ್ವೇನ್ ಬ್ರಾವೊ, ಫಾ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಎನ್. ಜಗದೀಶನ್, ಕಣ್ì ಶರ್ಮ, ಲುಂಗಿ ಎನ್‌ಗಿಡಿ, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜ, ಋತುರಾಜ್ ಗಾಯಕ್ವಾಡ್, ಶಾದೂìಲ್ ಠಾಕೂರ್, ಸ್ಯಾಮ್ ಕರನ್, ಆರ್. ಸಾಯಿ ಕಿಶೋರ್, ಮೊಯಿನ್ ಅಲಿ, ಕೃಷ್ಣಪ್ಪ ಗೌತಮ್, ಚೇತೇಶ್ವರ್ ಪೂಜಾರ, ಹರಿಶಂಕರ್ ರೆಡ್ಡಿ, ಭಗತ್ ವರ್ಮ, ಸಿ. ಹರಿ ನಿಶಾಂತ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.