ನಾಲ್ವರನ್ನು ಬಿಡುಗಡೆ ಮಾಡಿದ ಆರ್‌ಸಿಬಿ: ಮುಂಬೈಗೆ ಬೇಡವಾದ ಕೈರನ್ ಪೊಲಾರ್ಡ್
Team Udayavani, Nov 14, 2022, 8:05 AM IST
ಹೊಸದಿಲ್ಲಿ: ಟೀಮ್ ಇಂಡಿಯಾ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಿಂದ ಹೊರಬಿದ್ದ ಬೆನ್ನಲ್ಲೇ 16ನೇ ಆವೃತ್ತಿಯ ಐಪಿಎಲ್ ಸಿದ್ಧತೆ ಚುರುಕುಗೊಂಡಿದೆ.
ನ. 15ರ ಒಳಗಾಗಿ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಹಾಗೂ ಬಿಡುಗಡೆ ಮಾಡಲಿರುವ ಆಟಗಾರರ ಯಾದಿಯನ್ನು ಪ್ರಕಟಿಸುವಂತೆ ಸೂಚಿಸಲಾಗಿದೆ. ಇದರಂತೆ ಆರ್‌ಸಿಬಿ ನಾಲ್ವರು ಆಟಗಾರರನ್ನು ಕೈಬಿಟ್ಟ ಬಗ್ಗೆ ಮಾಹಿತಿ ಲಭಿಸಿದೆ.
ಈಗಾಗಲೇ ಆಸೀಸ್ ವೇಗಿ ಜೇಸನ್ ಬೆಹ್ರೆಂಡೋರ್ಫ್ ಟ್ರೇಡಿಂಗ್ ಮೂಲಕ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ. ಅವರು ಕಳೆದ ಋತುವಿನಲ್ಲಷ್ಟೇ ಆರ್‌ಸಿಬಿ ಸೇರಿಕೊಂಡಿದ್ದರು. ಇದೀಗ ಕಳೆದ ಸಾಲಲ್ಲಿ ಮಿಂಚದ ಸಿದ್ಧಾರ್ಥ್ ಕೌಲ್, ಕರ್ಣ್ ಶರ್ಮ, ಡೇವಿಡ್ ವಿಲ್ಲಿ ಮತ್ತು ಆಕಾಶ್‌ದೀಪ್ ಅವರನ್ನೂ ಆರ್‌ಸಿಬಿ ಕೈಬಿಟ್ಟಿದೆ.
ಆರ್‌ಸಿಬಿಯಲ್ಲಿ ಉಳಿದ ಪ್ರಮುಖ ಆಟಗಾರರೆಂದರೆ ವಿರಾಟ್ ಕೊಹ್ಲಿ, ಫಾ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಶಾಬಾಜ್ ಅಹ್ಮದ್ ಮತ್ತು ರಜತ್ ಪಾಟೀದಾರ್.
ಮುಂಬೈಯಿಂದ ಪೊಲಾರ್ಡ್ ಔಟ್
ವೆಸ್ಟ್ ಇಂಡೀಸ್‌ನ ಬಿಗ್ ಹಿಟ್ಟರ್ ಕೈರನ್ ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿರುವುದು ಅಚ್ಚರಿ ಎನಿಸಿದೆ. ಇವರ ಜತೆಯಲ್ಲೇ ಫ್ಯಾಬಿಯನ್ ಅಲೆನ್, ಟೈಮಲ್ ಮಿಲ್ಸ್, ಮಾಯಾಂಕ್ ಮಾರ್ಕಂಡೆ, ಹೃತಿಕ್ ಶೋಕಿನ್ ಕೂಡ ಮುಂಬೈ ತಂಡದಿಂದ ಬೇರ್ಪಟ್ಟಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಬಿಡುಗಡೆಗೊಂಡ ಕ್ರಿಕೆಟಿಗರೆಂದರೆ ಶಾರ್ದೂಲ್ ಠಾಕೂರ್, ಟಿಮ್ ಸೀಫರ್ಟ್, ಕೆ.ಎಸ್. ಭರತ್, ಮನ್‌ದೀಪ್ ಸಿಂಗ್ ಮತ್ತು ಅಶ್ವಿನ್ ಹೆಬ್ಟಾರ್.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಾದಿ ಕೂಡ ಪ್ರಕಟಗೊಂಡಿದೆ. ಟಿ20 ವಿಶ್ವಕಪ್‌ನಲ್ಲಿ ಮಿಂಚಿದ ಕ್ರಿಸ್ ಜೋರ್ಡನ್ ಅವರನ್ನು ಕೈಬಿಟ್ಟಿರುವುದೊಂದು ಅಚ್ಚರಿ. ಆ್ಯಡಂ ಮಿಲೆ°, ಎನ್. ಜಗದೀಶನ್, ಮಿಚೆಲ್ ಸ್ಯಾಂಟ್ನರ್ ಅವರೆಲ್ಲ ಚೆನ್ನೈ ತಂಡ ತೊರೆಯಲಿರುವ ಇತರರು.
ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡದಿಂದ ವಿಜಯ್ ಶಂಕರ್, ಮ್ಯಾಥ್ಯೂ ವೇಡ್, ಗುರುಕೀರತ್ ಸಿಂಗ್ ಮಾನ್, ಜಯಂತ್ ಯಾದವ್, ಪ್ರದೀಪ್ ಸಂಗ್ವಾನ್, ಸಾಯಿ ಕಿಶೋರ್, ನೂರ್ ಅಹ್ಮದ್ ಮತ್ತು ವರುಣ್ ಆರೋನ್ ಬೇರ್ಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.