IPL-2023; ಮುಂಬೈ ಇಂಡಿಯನ್ಸ್‌ ಆರು ವಿಕೆಟ್‌ ಜಯಭೇರಿ


Team Udayavani, May 10, 2023, 7:05 AM IST

IPL-2023; ಮುಂಬೈ ಇಂಡಿಯನ್ಸ್‌ ಆರು ವಿಕೆಟ್‌ ಜಯಭೇರಿ

ಮುಂಬಯಿ: “ವಾಂಖೇಡೆ’ಯಲ್ಲಿ ನಡೆದ ಆರ್‌ಸಿಬಿ ಎದುರಿನ ದ್ವಿತೀಯ ಸುತ್ತಿನ ಐಪಿಎಲ್‌ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಆರು ವಿಕೆಟ್‌ಗಳಿಂದ ಜಯಭೇರಿ ಬಾರಿಸಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 6 ವಿಕೆಟಿಗೆ 199 ರನ್‌ ಪೇರಿಸಿ ಸವಾಲೊಡ್ಡಿದರೆ, ಮುಂಬೈ ತಂಡವು 16.3 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟದಲ್ಲಿ ಜಯ ಸಾಧಿಸಿತಲ್ಲದೇ ಮೊದಲ ಮುಖಾಮುಖೀಯಲ್ಲಿ 8 ವಿಕೆಟ್‌ಗಳ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಆರಂಭಿಕ ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌ ಮತ್ತು ನೇಹಲ್‌ ವಧೇರ ಅವರ ಅಮೋಘ ಆಟದಿಂದಾಗಿ ಮುಂಬೈ ಸುಲಭವಾಗಿ ಗೆಲುವು ಕಂಡಿತು. ನಾಯಕ ರೋಹಿತ್‌ ಶರ್ಮ ಈ ಪಂದ್ಯದಲ್ಲೂ ವೈಫ‌ಲ್ಯ ಅನುಭವಿಸಿದರು. ಅವರ ಗಳಿಕೆ ಕೇವಲ 7 ರನ್‌. ಆದರೆ ಅವರು ಮೊದಲ ವಿಕೆಟಿಗೆ ಕಿಶನ್‌ ಜತೆಗೂಡಿ 51 ರನ್‌ ಪೇರಿಸಿದ್ದರು.

ಸೂರ್ಯಕುಮಾರ್‌ ಯಾದವ್‌ ಮತ್ತು ನೇಹಲ್‌ ವಧೇರ ಮೂರನೇ ವಿಕೆಟಿಗೆ 140 ರನ್‌ ಪೇರಿಸಿದ್ದರಿಂದ ಮುಂಬೈ ಗೆಲುವಿನ ಸನಿಹಕ್ಕೆ ಬಂತು. ಸೂರ್ಯಕುಮಾರ್‌ 35 ಎಸೆತಗಳಿಂದ 83 ರನ್‌ ಗಳಿಸಿದರು. 7 ಬೌಂಡರಿ ಮತ್ತು 6 ಸಿಕ್ಸರ್‌ ಬಾರಿಸಿದ್ದರು. ವಧೇರ 34 ಎಸೆತಗಳಿಂದ 52 ರನ್‌ ಗಳಿಸಿ ಅಜೇಯರಾಗಿ ಉಳಿದರು. 4 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದರು.

ಫಾ ಡು ಪ್ಲೆಸಿಸ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಅಬ್ಬರದ ಆಟ ಆರ್‌ಸಿಬಿಗೆ ವರವಾಗಿ ಪರಿಣಮಿಸಿತು. ಇವರು 3ನೇ ವಿಕೆಟಿಗೆ 10.1 ಓವರ್‌ಗಳಿಂದ 120 ರನ್‌ ಪೇರಿಸಿ ಮುಂಬೈ ಬೌಲರ್‌ಗಳನ್ನು ಸತಾಯಿಸಿದರು. ಇದರೊಂದಿಗೆ ಡು ಪ್ಲೆಸಿಸ್‌ ಈ ಬಾರಿಯ ಐಪಿಎಲ್‌ ಋತುವಿನಲ್ಲಿ 6ನೇ ಶತಕದ ಜತೆಯಾಟದಲ್ಲಿ ಭಾಗಿಯಾದಂತಾಯಿತು.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಸಿ ಇಶಾನ್‌ ಬಿ ಬೆಹ್ರೆಂಡಾರ್ಫ್ 1
ಫಾ ಡು ಪ್ಲೆಸಿಸ್‌ ಸಿ ವಿಷ್ಣು ವಿನೋದ್‌ ಬಿ ಗ್ರೀನ್‌ 65
ಅನುಜ್‌ ರಾವತ್‌ ಸಿ ಗ್ರೀನ್‌ ಬಿ ಬೆಹ್ರೆಂಡಾರ್ಫ್ 6
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ನೇಹಲ್‌ ಬಿ ಬೆಹ್ರೆಂಡಾರ್ಫ್ 68
ಎಂ. ಲೊನ್ರೋರ್‌ ಬಿ ಕಾರ್ತಿಕೇಯ 1
ದಿನೇಶ್‌ ಕಾರ್ತಿಕ್‌ ಸಿ ನೇಹಲ್‌ ಬಿ ಜೋರ್ಡನ್‌ 30
ಕೇದಾರ್‌ ಜಾಧವ್‌ ಔಟಾಗದೆ 12
ವನಿಂದು ಹಸರಂಗ ಔಟಾಗದೆ 12
ಇತರ 4
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 199
ವಿಕೆಟ್‌ ಪತನ: 1-2, 2-16, 3-136, 4-146, 5-146, 6-185.
ಬೌಲಿಂಗ್‌:
ಬೆಹ್ರೆಂಡಾರ್ಫ್ 4-0-36-3; ಪೀಯೂಷ್‌ ಚಾವ್ಲಾ 4-0-41-0; ಕ್ಯಾಮರಾನ್‌ ಗ್ರೀನ್‌ 2-0-15-1; ಕ್ರಿಸ್‌ ಜೋರ್ಡನ್‌ 4-0-48-1; ಕುಮಾರ ಕಾರ್ತಿಕೇಯ 4-0-35-1; ಆಕಾಶ್‌ ಮಧ್ವಾಲ್‌ 2-0-23-0

ಮುಂಬೈ ಇಂಡಿಯನ್ಸ್‌
ಇಶಾನ್‌ ಕಿಶನ್‌ ಸಿ ರಾವತ್‌ ಬಿ ಹಸರಂಗ 42
ರೋಹಿತ್‌ ಶರ್ಮ ಎಲ್‌ಬಿಡಬ್ಲ್ಯು ಹಸರಂಗ 7
ಸೂರ್ಯಕುಮಾರ್‌ ಸಿ ಜಾಧವ್‌ ಬಿ ವೈಶಾಖ್‌ 83
ನೇಹಲ್‌ ವಧೇರ ಔಟಾಗದೆ 52
ಟಿಮ್‌ ಡೇವಿಡ್‌ ಸಿ ಮ್ಯಾಕ್ಸ್‌ವೆಲ್‌ ಬಿ ವೈಶಾಖ್‌ 0
ಕ್ಯಾಮರಾನ್‌ ಗ್ರೀನ್‌ ಔಟಾಗದೆ 2
ಇತರ 14
ಒಟ್ಟು (16.3 ಓವರ್‌ಗಳಲ್ಲಿ ನಾಲ್ಕು ವಿಕೆಟಿಗೆ) 200
ವಿಕೆಟ್‌ ಪತನ: 1-51, 2-52, 3-192, 4-192
ಬೌಲಿಂಗ್‌:
ಮೊಹಮ್ಮದ್‌ ಸಿರಾಜ್‌ 3-0-31-0; ಜೋಶ್‌ ಹೇಝಲ್‌ವುಡ್‌ 3-0-32-0; ವನಿಂದು ಹಸರಂಗ 4-0-53-2; ವೈಶಾಖ್‌ ವಿಜಯ್‌ಕುಮಾರ್‌ 3-0-37-2; ಹರ್ಷಲ್‌ ಪಟೇಲ್‌ 3.3-0-41-0

 

ಟಾಪ್ ನ್ಯೂಸ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.