Rajasthan Royal-Punjab Kings; ಗುವಾಹಟಿಯಲ್ಲಿ ಪಂಜಾಬ್ ಜಯಭೇರಿ
ರಾಜಸ್ಥಾನ್‌ಗೆ 5 ರನ್ ಸೋಲು
Team Udayavani, Apr 6, 2023, 6:57 AM IST
ಗುವಾಹಟಿ: ಗುವಾಹಟಿಯಲ್ಲಿ ನಡೆದ ಪ್ರಥಮ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು 5 ರನ್ನಿನಿಂದ ರೋಮಾಂಚಕವಾಗಿ ಸೋಲಿಸಿದೆ. ಇದು ಈ ಕೂಟದಲ್ಲಿ ಪಂಜಾಬ್ ದಾಖಲಿಸಿದ ಸತತ ಎರಡನೇ ಗೆಲುವು ಆಗಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ 4 ವಿಕೆಟಿಗೆ 197 ರನ್ ಗಳಿಸಿದರೆ, ರಾಜಸ್ಥಾನ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟಿಗೆ 192 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಚೇಸಿಂಗ್ ವೇಳೆ ಯಶಸ್ವಿ ಜೈಸ್ವಾಲ್ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿದರು. ಇವರೊಂದಿಗೆ ಆರ್. ಅಶ್ವಿನ್ ಇನ್ನಿಂಗ್ಸ್ ಆರಂಭಿಸಿದ್ದೊಂದು ಅಚ್ಚರಿ. ಆದರೆ ಇಬ್ಬರನ್ನೂ ಅರ್ಷದೀಪ್ 4 ಓವರ್‌ಗಳಲ್ಲಿ ಪೆವಿಲಿಯನ್‌ಗೆ ಅಟ್ಟಿದರು. ಜಾಸ್ ಬಟ್ಲರ್ ಕೂಡ ಯಶಸ್ಸು ಕಾಣಲಿಲ್ಲ. ಆಬಳಿಕ ನಾಯಕ ಸಂಜು ಸ್ಯಾಮ್ಸನ್, ಹಿಮ್ರಾನ್ ಹೆಟ್‌ಮೈರ್ ಅವರ ಉಪಯುಕ್ತ ಆಟದಿಂದಾಗಿ ತಂಡ ಗೆಲುವು ದಾಖಲಿಸಲು ಪ್ರಯತ್ನಿಸಿತು. ಆದರೆ ಅಂತಿಮ ಹಂತದಲ್ಲಿ ವಿಕೆಟ್ ಬಿದ್ದ ಕಾರಣ ರಾಜಸ್ಥಾನ್ ರಾಯಲ್ಸ್‌ಗೆ ಸೋಲಾಯಿತು. ನಥನ್ ಎಲ್ಲಿಸ್ ಅವರ ನಿಖರ ದಾಳಿಯೂ ರಾಜಸ್ಥಾನ್ ಕುಸಿಯಲು ಕಾರಣವಾಯಿತು. ಅವರು 30 ರನ್ನಿಗೆ 4 ವಿಕೆಟ್ ಕಿತ್ತರು.
ಪಂಜಾಬ್ ಭರ್ಜರಿ ಆರಂಭ
ಪಂಜಾಬ್‌ಗ ಪ್ರಭ್‌ಸಿಮ್ರಾನ್ ಮತ್ತು ಶಿಖರ್ ಧವನ್ ಭರ್ಜರಿ ಆರಂಭ ಒದಗಿಸಿದರು. ಹತ್ತರ ಸರಾಸರಿಯಲ್ಲಿ ರನ್ ಹರಿದು ಬರತೊಡಗಿತು. ಪವರ್ ಪ್ಲೇಯಲ್ಲಿ 63 ರನ್ ಒಟ್ಟುಗೂಡಿತು. 9.4 ಓವರ್‌ಗಳ ಜತೆಯಾಟ ನಡೆಸಿದ ಇವರು 90 ರನ್ನುಗಳ ಭದ್ರ ಬುನಾದಿ ನಿರ್ಮಿಸಿದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ಜೇಸನ್ ಹೋಲ್ಡರ್ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು.
ಪ್ರಭ್‌ಸಿಮ್ರಾನ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ 60 ರನ್ ಬಾರಿಸಿದರು. ಇದು ಅವರ ಚೊಚ್ಚಲ ಐಪಿಎಲ್ ಅರ್ಧ ಶತಕ. 34 ಎಸೆತಗಳ ಈ ಆಟ 7 ಬೌಂಡರಿ ಹಾಗೂ 3 ಸಿಕ್ಸರ್‌ಗಳಿಂದ ರಂಗೇರಿಸಿಕೊಂಡಿತು.
ಶಿಖರ್ ಧವನ್ ಕೊನೆಯ ತನಕ ಕ್ರೀಸ್ ಆಕ್ರಮಿಸಿಕೊಂಡು ಅಜೇಯ 86 ರನ್ ಹೊಡೆದರು. ಆದರೆ ತಂಡದ ಮೊತ್ತವನ್ನು ಇನ್ನೂರಕ್ಕೆ ಏರಿಸಲು ಇವರಿಂದ ಸಾಧ್ಯವಾಗಲಿಲ್ಲ. 56 ಎಸೆತಗಳ ಕಪ್ತಾನನ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ, 3 ಸಿಕ್ಸರ್ ಸೇರಿತ್ತು.
ಕಳೆದ ಪಂದ್ಯದಲ್ಲಿ ಅಮೋಘ ಆಟವಾಡಿದ ಶ್ರೀಲಂಕಾದ ಬಿಗ್ ಹಿಟ್ಟರ್ ಭನುಕ ರಾಜಪಕ್ಸ ಇಲ್ಲಿ ಒಂದೇ ರನ್ ಮಾಡಿ ಕೈಗೆ ಏಟು ಅನುಭವಿಸಿ ಹೊರನಡೆದರು.
ಜಿತೇಶ್ ಶರ್ಮ ಅವರನ್ನು ಕೂಡಿಕೊಂಡ ಧವನ್ ಮತ್ತೆ ಇನ್ನಿಂಗ್ಸ್ ಬೆಳೆಸತೊಡಗಿದರು. ಸ್ಕೋರ್ ಒಂದೇ ವಿಕೆಟಿಗೆ 158ಕ್ಕೆ ಏರಿತು. ಜಿತೇಶ್ ಗಳಿಕೆ 16 ಎಸೆತಗಳಿಂದ 27 ರನ್ (2 ಬೌಂಡರಿ, 1 ಸಿಕ್ಸರ್). ಆದರೆ ಸಿಕಂದರ್ ರಝ (1) ಮತ್ತು ಶಾರೂಖ್ ಖಾನ್ (11) ಯಶಸ್ವಿಯಾಗಲಿಲ್ಲ. ಸ್ಯಾಮ್ ಕರನ್‌ಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ರಾಜಸ್ಥಾನ್ ಬೌಲಿಂಗ್ ಸರದಿಯಲ್ಲಿ ಮಿಂಚಿದವರು ಜೇಸನ್ ಹೋಲ್ಡರ್ ಮತ್ತು ಅಶ್ವಿನ್. ಇಬ್ಬರೂ ಉತ್ತಮ ನಿಯಂತ್ರಣ ಸಾಧಿಸಿದರು.
ಸ್ಕೋರ್ ಪಟ್ಟಿ
ಪಂಜಾಬ್ ಕಿಂಗ್ಸ್
ಪ್ರಭ್‌ಸಿಮ್ರಾನ್ ಸಿಂಗ್ ಸಿ ಬಟ್ಲರ್ ಬಿ ಹೋಲ್ಡರ್ 60
ಶಿಖರ್ ಧವನ್ ಔಟಾಗದೆ 86
ಭನುಕ ರಾಜಪಕ್ಸ ಗಾಯಾಳು 1
ಜಿತೇಶ್ ಶರ್ಮ ಸಿ ಪರಾಗ್ ಬಿ ಚಹಲ್ 27
ಸಿಕಂದರ್ ರಝ ಬಿ ಅಶ್ವಿನ್ 1
ಶಾರೂಖ್ ಖಾನ್ ಸಿ ಬಟ್ಲರ್ ಬಿ ಹೋಲ್ಡರ್ 11
ಸ್ಯಾಮ್ ಕರನ್ ಔಟಾಗದೆ 1
ಇತರ 10
ಒಟ್ಟು (20 ಓವರ್‌ಗಳಲ್ಲಿ 4 ವಿಕೆಟಿಗೆ) 197
ವಿಕೆಟ್ ಪತನ: 1-90, 2-158, 3-159, 4-196.
ಬೌಲಿಂಗ್: ಟ್ರೆಂಟ್ ಬೌಲ್ಟ್ 4-0-38-0
ಕೆ.ಎಂ. ಆಸಿಫ್ 4-0-54-0
ಆರ್. ಅಶ್ವಿನ್ 4-0-25-1
ಜೇಸನ್ ಹೋಲ್ಡರ್ 4-0-29-2
ಯಜುವೇಂದ್ರ ಚಹಲ್ 4-0-50-1
ರಾಜಸ್ಥಾನ್ ರಾಯಲ್ಸ್
ಯಶಸ್ವಿ ಜೈಸ್ವಾಲ್ ಸಿ ಶಾರ್ಟ್ ಬಿ ಅರ್ಷದೀಪ್ 11
ಆರ್. ಅಶ್ವಿನ್ ಸಿ ಧವನ್ ಬಿ ಅರ್ಷದೀಪ್ 0
ಜಾಸ್ ಬಟ್ಲರ್ ಸಿ ಮತ್ತು ಬಿ ಎಲ್ಲಿಸ್ 19
ಸಂಜು ಸ್ಯಾಮ್ಸನ್ ಸಿ ಬದಲಿಗ ಬಿ ಎಲ್ಲಿಸ್ 42
ದೇವದತ್ತ ಪಡಿಕ್ಕಲ್ ಬಿ ಎಲ್ಲಿಸ್ 21
ರಿಯಾನ್ ಪರಾಗ್ ಸಿ ಶಾರೂಖ್ ಬಿ ಎಲ್ಲಿಸ್ 20
ಶಿಮ್ರಾನ್ ಹೆಟ್‌ಮೈರ್ ರನೌಟ್ 36 ದ್ರುವ್ ಜುರೆಲ್ ಔಟಾಗದೆ 32
ಜೇಸನ್ ಹೋಲ್ಡರ್ ಔಟಾಗದೆ 1 ಇತರ 10
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 192
ವಿಕೆಟ್ ಪತನ: 1-13, 2-26, 3-57, 4-91, 5-121, 6-124, 7-196
ಬೌಲಿಂಗ್: ಸ್ಯಾಮ್ ಕರನ್ 4-0-44-0
ಅರ್ಷದೀಪ್ ಸಿಂಗ್ 4-0-47-2
ಹರ್‌ಪ್ರೀತ್ ಬ್ರಾರ್ 2-0-15-0
ನಥನ್ ಎಲ್ಲಿಸ್ 4-0-30-4
ರಾಹುಲ್ ಚಾಹರ್ 4-0-31-0
ಸಿಕಂದರ್ ರಾಜ 2-0-24-0
ಪಂದ್ಯಶ್ರೇಷ್ಠ: ನಥನ್ ಎಲ್ಲಿಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.