IPL 2024; ಚೆನ್ನೈ ಸೂಪರ್ ಕಿಂಗ್ಸ್ ಸತತ ಎರಡನೇ ಜಯಭೇರಿ
Team Udayavani, Mar 27, 2024, 12:48 AM IST
ಚೆನ್ನೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪ್ರಸಕ್ತ ಐಪಿಎಲ್‌ನಲ್ಲಿ ಸತತ ಎರಡನೇ ಜಯ ಸಾಧಿಸಿದೆ. ಮಂಗಳವಾರ ತವರಿನಂಗಳದಲ್ಲಿ ಸಾಗಿದ ಮುಖಾಮುಖಿ ಯಲ್ಲಿ ಅದು ಗುಜರಾತ್ ಟೈಟಾನ್ಸ್‌ಗೆ 63 ರನ್ನುಗಳ ಸೋಲುಣಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ 6 ವಿಕೆಟಿಗೆ 206 ರನ್ ಪೇರಿಸಿದರೆ, ಗುಜರಾತ್‌ಗೆ ಗಳಿಸಲು ಸಾಧ್ಯವಾದದ್ದು 8ಕ್ಕೆ 143 ರನ್ ಮಾತ್ರ. ಇದು ಐಪಿಎಲ್‌ನಲ್ಲಿ ಗುಜರಾತ್‌ಗೆ ಎದುರಾದ ರನ್ ಅಂತರದ ಅತೀ ದೊಡ್ಡ ಸೋಲು.
ದೊಡ್ಡ ಮೊತ್ತದ ಚೇಸಿಂಗ್ ವೇಳೆ ಗುಜರಾತ್ ಸರದಿಯಲ್ಲಿ ಯಾರೂ ಸಿಡಿದು ನಿಲ್ಲಲಿಲ್ಲ. ದೊಡ್ಡ ಜತೆಯಾಟವೂ ದಾಖ ಲಾಗ ಲಿಲ್ಲ. 37 ರನ್ ಮಾಡಿದ ಸಾಯಿ ಸುದರ್ಶನ್ ಅವರದೇ ಹೆಚ್ಚಿನ ಗಳಿಕೆ. ಸಾಹಾ ಮತ್ತು ಡೇವಿಡ್ ಮಿಲ್ಲರ್ ತಲಾ 21 ರನ್ ಹೊಡೆದರು.
ಚೆನ್ನೈ ಪರ ದೀಪಕ್ ಚಹರ್, ಮುಸ್ತಫಿ ಜುರ್ ರೆಹಮಾನ್ ಮತ್ತು ತುಷಾರ್ ದೇಶ ಪಾಂಡೆ ತಲಾ 2 ವಿಕೆಟ್ ಉರುಳಿಸಿದರು.
ಚೆನ್ನೈ ಬೃಹತ್ ಮೊತ್ತ
ಆರಂಭಿಕರಾದ ರಚಿನ್ ರವೀಂದ್ರ, ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಶಿವಂ ದುಬೆ ಅವರ ಅಮೋಘ ಬ್ಯಾಟಿಂಗ್ ಸಾಹಸದಿಂದ ಚೆನ್ನೈ ಇನ್ನೂರರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ರಚಿನ್ ರವೀಂದ್ರ ಮತ್ತು ಗಾಯಕ್ವಾಡ್ ಬಿರುಸಿನ ಬ್ಯಾಟಿಂಗ್‌ಗೆ ಇಳಿದರು. ಒಂದು ರನ್ ಮಾಡಿದ್ದಾಗ ಪಡೆದ ಜೀವದಾನದ ಲಾಭ ವನ್ನು ಗಾಯಕ್ವಾಡ್ ಚೆನ್ನಾಗಿಯೇ ಬಳಸಿ ಕೊಂಡರು. ಆರಂಭಿಕ ಜೋಡಿ ಹತ್ತಕ್ಕೂ ಹೆಚ್ಚಿನ ಸರಾ ಸರಿ ಯಲ್ಲಿ ರನ್ ಪೇರಿಸುತ್ತ ಸಾಗಿತು.
ರಚಿನ್ ರವೀಂದ್ರ ಆರ್‌ಸಿಬಿ ಎದುರಿನ ಬ್ಯಾಟಿಂಗ್ ವೈಭವವನ್ನೇ ಮುಂದುವರಿ ಸಿ ದರು. ಗುಜರಾತ್ ಬೌಲರ್‌ಗಳನ್ನು ನಿರ್ದಯ ವಾಗಿ ದಂಡಿಸತೊಡಗಿದರು. ಆರಂಭಿಕ ವಿಕೆಟಿಗೆ 5.2 ಓವರ್‌ಗಳಿಂದ 62 ರನ್ ಒಟ್ಟು ಗೂಡಿತು. ಇದು ಗುಜರಾತ್ ವಿರುದ್ಧ ಚೆನ್ನೈ ಮೊದಲ ವಿಕೆಟಿಗೆ ದಾಖ ಲಿ ಸಿದ ಸತತ 3ನೇ 50 ಪ್ಲಸ್ ರನ್ ಜತೆಯಾಟ.
ರಚಿನ್ ಕೇವಲ 20 ಎಸೆತಗಳಿಂದ 46 ರನ್ ಬಾರಿಸಿದರು. ಈ ಸ್ಫೋಟಕ ಆಟದ ವೇಳೆ 6 ಫೋರ್ ಹಾಗೂ 3 ಸಿಕ್ಸರ್ ಸಿಡಿಯಿತು. ರಶೀದ್ ಖಾನ್ ತಮ್ಮ ಮೊದಲ ಓವರ್‌ನಲ್ಲೇ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಮುನ್ನುಗ್ಗಿ ಬಾರಿಸಲು ಹೋದ ರಚಿನ್ ಸ್ಟಂಪ್ಡ್ ಔಟ್ ಆದರು. ಪವರ್ ಪ್ಲೇಯಲ್ಲಿ ಚೆನ್ನೈ ಸ್ಕೋರ್ ಒಂದು ವಿಕೆಟಿಗೆ 69 ರನ್ ಆಗಿತ್ತು. 10 ಓವರ್ ಮುಗಿ ಯುವಷ್ಟರಲ್ಲಿ ಸ್ಕೋರ್ 104ಕ್ಕೆ ಏರಿತ್ತು.
ಈ ನಡುವೆ ಸ್ಪೆನ್ಸರ್ ಜಾನ್ಸನ್ ಅವರಿಗೆ ಅಜಿಂಕ್ಯ ರಹಾನೆ ಸಿಕ್ಸರ್ ಮೂಲಕ ಸ್ವಾಗತ ಕೋರಿದರು. ಇದರೊಂದಿಗೆ ಜಾನ್ಸನ್ ಎರಡೂ ಪಂದ್ಯಗಳಲ್ಲಿ ಜಾನ್ಸನ್ ಅವರ ಮೊದಲ ಎಸೆತ ಸಿಕ್ಸರ್‌ಗೆ ರವಾನಿಸಲ್ಪಟ್ಟಿತು. ಮುಂಬೈ ಎದುರಿನ ಪಂದ್ಯದ ವೇಳೆ ಡಿವಾಲ್ಡ್ ಬ್ರೇವಿಸ್ ಸಿಕ್ಸರ್ ಸಿಡಿಸಿದ್ದರು. ರಹಾನೆ ಗಳಿಕೆ 12 ರನ್ ಮಾತ್ರ. ಅವರೂ ಸ್ಟಂಪ್ಡ್ ಔಟ್ ಆಗಿ ವಾಪಸಾದರು. ಗಾಯಕ್ವಾಡ್-ರಹಾನೆ 2ನೇ ವಿಕೆಟಿಗೆ 42 ರನ್ ಒಟ್ಟುಗೂಡಿಸಿದರು.
ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದ ಗಾಯಕ್ವಾಡ್ ಅವರಿಗೆ ಶಿವಂ ದುಬೆ ಜತೆಯಾದರು. ರನ್‌ಗತಿಯಲ್ಲಿ ಇನ್ನಷ್ಟು ವೇಗ ಕಂಡುಬಂತು. ಆದರೆ ರಚಿನ್ ಅವರಂತೆ ಗಾಯಕ್ವಾಡ್‌ಗೂ 4 ರನ್ನಿನಿಂದ ಅರ್ಧ ಶತಕ ವಂಚಿತರಾದರು. ಅವರ 46 ರನ್ 36 ಎಸೆತಗಳಿಂದ ಬಂತು (5 ಫೋರ್, 1 ಸಿಕ್ಸರ್).
ಶಿವಂ ದುಬೆ ಪಂದ್ಯಶ್ರೇಷ್ಠ
ಪ್ರಚಂಡ ಫಾರ್ಮ್ ನಲ್ಲಿರುವ ಶಿವಂ ದುಬೆ ಅರ್ಧ ಶತಕ ಬಾರಿಸಿ ಮಿಂಚಿದರು. ಕೇವಲ 23 ಎಸೆತ ಎದುರಿಸಿದ ಅವರು 5 ಪ್ರಚಂಡ ಸಿಕ್ಸರ್, 2 ಬೌಂಡರಿ ನೆರವಿನಿಂದ 51 ರನ್ ಬಾರಿಸಿದರು. ಈ ಸಾಹಸಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.
ಸ್ಕೋರ್ ಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್
ಋತುರಾಜ್ ಗಾಯಕ್ವಾಡ್ ಸಿ ಸಾಹಾ ಬಿ ಜಾನ್ಸನ್ 46
ರಚಿನ್ ರವೀಂದ್ರ ಸ್ಟಂಪ್ಡ್ ಸಾಹಾ ಬಿ ರಶೀದ್ 46
ಅಜಿಂಕ್ಯ ರಹಾನೆ ಸ್ಟಂಪ್ಡ್ ಸಾಹಾ ಬಿ ಸಾಯಿ ಕಿಶೋರ್ 12
ಶಿವಂ ದುಬೆ ಸಿ ಶಂಕರ್ ಬಿ ರಶೀದ್ 51
ಡ್ಯಾರಿಲ್ ಮಿಚೆಲ್ ರನೌಟ್ 24
ಸಮೀರ್ ರಿಝಿÌ ಸಿ ಮಿಲ್ಲರ್ ಬಿ ಮೋಹಿತ್ 14
ರವೀಂದ್ರ ಜಡೇಜ ಔಟಾಗದೆ 7
ಇತರ 6
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ)206
ವಿಕೆಟ್ ಪತನ: 1-62, 2-104, 3-127, 4-184, 5-199, 6-206.
ಬೌಲಿಂಗ್: ಅಜ್ಮತುಲ್ಲ ಒಮರ್‌ಜಾಯ್ 3-0-30-0
ಉಮೇಶ್ ಯಾದವ್ 2-0-27-0
ರಶೀದ್ ಖಾನ್ 4-0-49-2
ಆರ್. ಸಾಯಿ ಕಿಶೋರ್ 3-0-28-1
ಸ್ಪೆನ್ಸರ್ ಜಾನ್ಸನ್ 4-0-35-1
ಮೋಹಿತ್ ಶರ್ಮ 4-0-36-1
ಗುಜರಾತ್ ಟೈಟಾನ್ಸ್
ವೃದ್ಧಿಮಾನ್ ಸಾಹಾ ಸಿ ತುಷಾರ್ ಬಿ ಚಹರ್ 21
ಶುಭಮನ್ ಗಿಲ್ ಎಲ್‌ಬಿಡಬ್ಲ್ಯು ಚಹರ್ 8
ಸಾಯಿ ಸುದರ್ಶನ್ ಸಿ ರಿಝಿÌ ಬಿ ಪತಿರಣ 37
ವಿಜಯ್ ಶಂಕರ್ ಸಿ ಧೋನಿ ಬಿ ಮಿಚೆಲ್ 12
ಡೇವಿಡ್ ಮಿಲ್ಲರ್ ಸಿ ರಹಾನೆ ಬಿ ದೇಶಪಾಂಡೆ 21
ಎ. ಒಮರ್‌ಜಾಯ್ ಸಿ ರಚಿನ್ ಬಿ ತುಷಾರ್ 11
ರಾಹುಲ್ ತೆವಾಟಿಯ ಸಿ ರಚಿನ್ ಬಿ ಮುಸ್ತಫಿಜುರ್ 6
ರಶೀದ್ ಖಾನ್ ಸಿ ರಚಿನ್ ಬಿ ಮುಸ್ತಫಿಜುರ್ 1
ಉಮೇಶ್ ಯಾದವ್ ಔಟಾಗದೆ 10
ಸ್ಪೆನ್ಸರ್ ಜಾನ್ಸನ್ ಔಟಾಗದೆ 5
ಇತರ 11
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 143
ವಿಕೆಟ್ ಪತನ: 1-28, 2-34, 3-55, 4-96, 5-114, 6-118, 7-121, 8-129.
ಬೌಲಿಂಗ್: ದೀಪಕ್ ಚಹರ್ 4-0-28-2
ಮುಸ್ತಫಿಜುರ್ ರೆಹಮಾನ್ 4-0-30-2
ತುಷಾರ್ ದೇಶಪಾಂಡೆ 4-0-21-2
ರವೀಂದ್ರ ಜಡೇಜ 2-0-15-0
ಡ್ಯಾರಿಲ್ ಮಿಚೆಲ್ 2-0-18-1
ಮತೀಶ ಪತಿರಣ 4-0-29-1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.