IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್ ಕಿಂಗ್ ಸವಾಲು
ಪಂಜಾಬ್ ವಿರುದ್ದ ಗೆದ್ದು ಹಾದಿ ಸಲೀಸು ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಚೆನ್ನೈ
Team Udayavani, May 1, 2024, 7:46 AM IST
ಚೆನ್ನೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತನ್ನ 3ನೇ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುವ ಅಥವಾ ಇನ್ನೊಂದು ಮೆಟ್ಟಿಲು ಮೇಲೇರುವ ಯೋಜನೆಯೊಂದಿಗೆ ಬುಧವಾರ ತವರಲ್ಲಿ ಪಂಜಾಬ್ ಕಿಂಗ್ಸ್‌ಗೆ ಸವಾಲೊಡ್ಡಲಿದೆ.
ಪಂಜಾಬ್ ವಿಶ್ವದಾಖಲೆಯ ಚೇಸಿಂಗ್ ಮೂಲಕ ಒಮ್ಮೆಲೇ ಸುದ್ದಿಗೆ ಬಂದ ತಂಡ. ಕಳೆದ ಈಡನ್ ಗಾರ್ಡನ್ ಹಣಾಹಣಿಯಲ್ಲಿ ಆತಿಥೇಯ ಕೋಲ್ಕತ್ತಾ ವಿರುದ್ಧ ಚೇಸಿಂಗ್ ವೇಳೆ ಎರಡೇ ವಿಕೆಟಿಗೆ 262 ರನ್ ಬಾರಿಸಿ ಗೆದ್ದ ಅಸಾಮಾನ್ಯ ಸಾಹಸ ಪಂಜಾಬ್‌ನದ್ದಾಗಿದೆ. ಆದರೆ ಇದೂ ಸೇರಿದಂತೆ 9 ಪಂದ್ಯಗಳಲ್ಲಿ ಪಂಜಾಬ್ ಗೆದ್ದದ್ದು 3 ಮಾತ್ರ. ಸದ್ಯ ಪಂಜಾಬ್ 8ನೇ ಸ್ಥಾನದಲ್ಲಿದೆ. ಇಲ್ಲಿಂದ ಮೇಲೇರಬೇಕಾದರೆ ಚೆನ್ನೈ ವಿರುದ್ಧವೂ ಇಂಥದೇ ಪ್ರದರ್ಶವನ್ನು ಪುನರಾವರ್ತಿಸಬೇಕಾದುದು ಅನಿವಾರ್ಯ.
ಇತ್ತ ಚೆನ್ನೈ ಕೂಡ ತವರಿನಂಗಳದಲ್ಲಿ ಗೆಲುವಿನ ಹಳಿ ಏರಿದೆ. ಕಳೆದ ಪಂದ್ಯದಲ್ಲಿ ಬಲಿಷ್ಠ ಸನ್‌ರೈಸರ್ ಹೈದರಾಬಾದ್ ವಿರುದ್ಧ 78 ರನ್ನುಗಳ ಅಧಿಕಾರಯುತ ಜಯ ಸಾಧಿಸಿದೆ. ನಾಯಕ ಋತುರಾಜ್ ಗಾಯಕ್ವಾಡ್ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಕಳೆದೆರಡು ಪಂದ್ಯಗಳಲ್ಲಿ 108 ಮತ್ತು 98 ರನ್ ಬಾರಿಸಿದ ಪರಾಕ್ರಮ ಇವರದು. ಆದರೆ ಇವರ ಜತೆಗಾರ ಅಜಿಂಕ್ಯ ರಹಾನೆ ಫಾರ್ಮ್ನಲ್ಲಿಲ್ಲ. ಹೀಗಾಗಿ ರಚಿನ್ ರವೀಂದ್ರ ಮರಳಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೊಂದಿದೆ. ಡ್ಯಾರಿಲ್ ಮಿಚೆಲ್, ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಖುಷಿಯಲ್ಲಿರುವ ಶಿವಂ ದುಬೆ ಮೇಲೆ ನಂಬಿಕೆ ಇಡಬಹುದಾಗಿದೆ.
ಅಂಕಣಗುಟ್ಟು
ಚೆನ್ನೈನ ಎಂ.ಎ.ಚಿದಂಬರಂ ಮೈದಾನ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ಪಿಚ್. ಆದರೆ ಬ್ಯಾಟರ್‌ಗಳೂ ಇಲ್ಲಿ ಅನುಕೂಲ ಪಡೆಯಬಹುದು. ಇಲ್ಲಿ ಮೊದಲ ಇನಿಂಗ್ಸ್ ಸರಾಸರಿ ಸ್ಕೋರ್ 174 ಇದ್ದರೆ, ದ್ವಿತೀಯ ಇನಿಂಗ್ಸ್ ಸರಾಸರಿ ರನ್ 149 ಇದೆ. ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವುದು ಉತ್ತಮ ಎಂದು ವಿಶ್ಲೇಷಿಸಲಾಗಿದೆ. ಈ ಮೈದಾನದಲ್ಲಿನ ಹಿಂದಿನ ಪಂದ್ಯದಲ್ಲಿ 212 ರನ್ ಬಾರಿಸಿದ್ದ ಚೆನ್ನೈ, ಹೈದ್ರಾಬಾದ್ ವಿರುದ್ಧ 78 ರನ್‌ಗಳಿಂದ ಗೆದ್ದಿತ್ತು.
ಸಂಭಾವ್ಯ ತಂಡಗಳು
ಚೆನ್ನೈ: ರಹಾನೆ, ಋತುರಾಜ್, ಮಿಚೆಲ್, ದುಬೆ, ಜಡೇಜ, ಮೊಯೀನ್, ಧೋನಿ, ದೀಪಕ್, ತುಷಾರ್, ಮುಸ್ತಫಿಜುರ್, ಮತೀಶ.
ಪಂಜಾಬ್: ಬೇರ್‌ಸ್ಟೋ, ಪ್ರಭ್‌ಸಿಮ್ರನ್, ರಾಸ್ಸೋ, ಕರನ್, ಜಿತೇಶ್, ಶಶಾಂಕ್, ಆಶುತೋಷ್, ರಾಹುಲ್, ಹರಪ್ರೀತ್, ಹರ್ಷಲ್, ರಬಾಡ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.