IPL-2024: ಮುಂಬೈಗೆ ಮರಳಿ ರೋಹಿತ್ ನಾಯಕ? ಅಥವಾ ಬುಮ್ರಾ?
ಹಾರ್ದಿಕ್ ಚೇತರಿಕೆಗೆ ಬೇಕಿದೆ ಸುದೀರ್ಘ ಸಮಯ...ತಂಡದಲ್ಲಿ ಅಸಮಾಧಾನ
Team Udayavani, Dec 24, 2023, 6:00 AM IST
ಮುಂಬಯಿ: ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ತಂಡ ದಿಂದ ಮರಳಿ ಮುಂಬೈ ಇಂಡಿಯನ್ಸ್‌ಗೆ ಕರೆತಂದದ್ದು, ರೋಹಿತ್ ಶರ್ಮ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್‌ಗೆ ಮುಂಬೈ ನಾಯಕತ್ವ ವಹಿಸಿದ್ದೆಲ್ಲ 2024ರ ಐಪಿಎಲ್ ಸೀಸನ್‌ನ “ಬಿಗ್ ಬ್ರೇಕಿಂಗ್ ನ್ಯೂಸ್’ ಆಗಿತ್ತು. ಇದೀಗ ಇದಕ್ಕೂ ಮಿಗಿಲಾದ ಸುದ್ದಿಯೊಂದು ಸ್ಫೋಟಗೊಂಡಿದೆ. ಪಾದದ ಗಾಯದಿಂದ ಚೇತರಿಸಿಕೊಳ್ಳಲಾಗದ ಕಾರಣ ಪಾಂಡ್ಯ ಮುಂದಿನ ಐಪಿಎಲ್‌ನಲ್ಲಿ ಆಡುವುದು ಅನುಮಾನವಂತೆ! ಕಳೆದ ವಿಶ್ವಕಪ್ ಕೂಟದ ಬಾಂಗ್ಲಾ ದೇಶ ವಿರುದ್ಧದ ಪುಣೆ ಪಂದ್ಯದ ಕ್ಷೇತ್ರರಕ್ಷಣೆ ವೇಳೆ ಹಾರ್ದಿಕ್ ಪಾಂಡ್ಯ ಅವರ ಪಾದಕ್ಕೆ ಗಂಭೀರ ಏಟಾಗಿತ್ತು. ಹೀಗಾಗಿ ಅವರು ವಿಶ್ವಕಪ್‌ನ ಮುಂದಿನ ಪಂದ್ಯಗಳಿಂದ ಹೊರಗುಳಿಯುವುದು ಅನಿವಾರ್ಯ ವಾಯಿತು. ಆಸ್ಟ್ರೇಲಿಯ ಸರಣಿಗೆ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಆಯ್ಕೆ ಆಗಲಿಲ್ಲ. ಮುಂದಿನ ತಿಂಗಳು ಅಫ್ಘಾನಿಸ್ಥಾನ ವಿರುದ್ಧ ಏರ್ಪಡುವ ಟಿ20 ಸರಣಿಯಿಂದಲೂ ದೂರ ಉಳಿಯಬೇಕಾದೀತು.
ಆದರೆ ಶನಿವಾರ ಬಿಸಿಸಿಐ ಮೂಲ ವೊಂದರಿಂದ ಹೊರಬಿದ್ದ ಸುದ್ದಿಯಂತೆ, ಹಾರ್ದಿಕ್ ಪಾಂಡ್ಯ 2024ರ ಐಪಿಎಲ್‌ನಲ್ಲೂ ಆಡುವ ಸಾಧ್ಯತೆ ಇಲ್ಲ! ಐಪಿಎಲ್ ಆರಂಭಕ್ಕೆ 3 ತಿಂಗಳಿರುವಾಗಲೇ ಪಾಂಡ್ಯ ಗೈರಿನ ಕುರಿತು ನಿಖರವಾಗಿ ಹೇಳಲು ಹೇಗೆ ಸಾಧ್ಯ? ಈ ಸುದೀರ್ಘ ಅವಧಿಯಲ್ಲೂ ಪಾಂಡ್ಯ ಅವರ ಚೇತರಿಕೆ ಅಸಾಧ್ಯವೇ? ಅವರಿಗೆ ಪಾದದ ಶಸ್ತ್ರಚಿಕಿತ್ಸೆಯ ಅಗತ್ಯ ವಿದೆಯೇ? ಎಂಬುದೆಲ್ಲ ಇಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು ಕಾಡುವ ಪ್ರಶ್ನೆಗಳು. ಆದರೆ ಅವರು ಸಂಪೂರ್ಣ ಫಿಟ್‌ನೆಸ್‌ಗೆ ಮರಳಲು ಎರಡರಿಂದ 3 ತಿಂಗಳ ಅಗತ್ಯ ವಿದೆ ಎಂದು ವರದಿಯೊಂದು ತಿಳಿಸಿದೆ.
ತಂಡದಲ್ಲಿ ಅಸಮಾಧಾನ
ಪಾಂಡ್ಯ ಆಗಮನದಿಂದ ಮುಂಬೈ ಪಾಳೆಯದಲ್ಲಿ ಅಸಮಾಧಾನ ಹೊಗೆಯಾ ಡಿದ್ದು ರಹಸ್ಯವೇನಲ್ಲ. ರೋಹಿತ್ ಅವ ರನ್ನು ನಾಯಕತ್ವದಿಂದ ಕೆಳಗಿಳಿಸಿದ ಕಾರಣ ಮುಂಬೈ ಅಭಿಮಾನಿಗಳೂ ಗರಂ ಆಗಿದ್ದಾರೆ. ಇದೀಗ ಪಾಂಡ್ಯ ಅನ್‌ಫಿಟ್ ಎಂಬ ಸುದ್ದಿ ಮುಂಬೈ ಇಂಡಿಯನ್ಸ್‌ಗೆ ಹೇಗೆ ಟ್ವಿಸ್ಟ್ ಕೊಟ್ಟಿàತು ಎಂಬುದು ತೀವ್ರ ಕುತೂಹಲದ ಸಂಗತಿ.
ನಾಯಕ ಯಾರು?
ಒಂದು ವೇಳೆ ಹಾರ್ದಿಕ್ ಪಾಂಡ್ಯ ಐಪಿಎಲ್ ಆಡದೇ ಹೋದರೆ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವವರು ಯಾರು ಎಂಬುದು ಮುಖ್ಯ ಪ್ರಶ್ನೆ. ಮರಳಿ ರೋಹಿತ್ ಶರ್ಮ ಅವರಿಗೆ ನಾಯಕತ್ವ ನೀಡಬಹುದೇ? ಒಮ್ಮೆ ಕೆಳಗಿಳಿಸಿದ ಕಾರಣ ರೋಹಿತ್ ಪುನಃ ಜವಾಬ್ದಾರಿ ವಹಿಸಲು ಒಪ್ಪುವರೇ? ಗೊಂದಲ ಸಹಜ. ಇಲ್ಲವೇ ನಾಯಕತ್ವದ ಉಮೇದಿನಲ್ಲಿದ್ದ ಜಸ್‌ಪ್ರೀತ್ ಬುಮ್ರಾಗೆ ಈ ಜವಾಬ್ದಾರಿ ಲಭಿಸೀತು.
ಕಳೆದೆರಡು ಋತುಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಕೆ ಹಾರ್ದಿಕ್ ಪಾಂಡ್ಯ ಅವರದು. ಅನಿರೀಕ್ಷಿತ ಹಾಗೂ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅವರನ್ನು 15 ಕೋಟಿ ರೂ. ಮೊತ್ತಕ್ಕೆ ಮುಂಬೈಗೆ ಟ್ರೇಡ್ ಮಾಡಲಾಯಿತು. ಇಷ್ಟೊಂದು ಹಣ ಸುರಿದ ಮೇಲೆ ಆಡಲು ಸಾಧ್ಯವಿಲ್ಲ ಎಂದಾದರೆ ಇದರಿಂದ ಮುಂಬೈಗೆ ಹಿನ್ನಡೆ ಖಚಿತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.