IPL 2024; ಹೈದರಾಬಾದ್-ಮುಂಬೈ: ಸೋತವರ ಸೆಣಸು
Team Udayavani, Mar 27, 2024, 7:30 AM IST
ಹೈದರಾಬಾದ್: ಬುಧವಾರದ ಐಪಿಎಲ್ ಸೋತವರ ಸೆಣಸಾಟವೊಂದಕ್ಕೆ ಸಾಕ್ಷಿಯಾಗಲಿದೆ. ಹೈದರಾಬಾದ್‌ನಲ್ಲಿ ಆತಿಥೇಯ ಸನ್‌ರೈಸರ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ. ಒಂದು ತಂಡ ಗೆಲುವಿನ ಖಾತೆ ತೆರೆದರೆ, ಇನ್ನೊಂದು ತಂಡ ಸತತ ಎರಡನೇ ಸೋಲನ್ನು ಅಪ್ಪಿಕೊಳ್ಳುವುದು ಅನಿವಾರ್ಯ.
ಎರಡೂ ತಂಡಗಳು ಸಣ್ಣ ಅಂತರದ ಸೋಲನುಭವಿಸಿದ್ದವು. ಪ್ಯಾಟ್ ಕಮಿನ್ಸ್ ನೇತೃತ್ವದಲ್ಲಿ ಕಣಕ್ಕಿಳಿದಿರುವ ಹೈದರಾಬಾದ್, ಮೊದಲ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ವಿರುದ್ಧ 4 ರನ್ನುಗಳಿಂದ ಎಡವಿದರೆ, ಮುಂಬೈ ಇಂಡಿಯನ್ಸ್ 6 ರನ್ನುಗಳಿಂದ ಗುಜರಾತ್ ಟೈಟಾನ್ಸ್‌ಗೆ ಶರಣಾಗಿತ್ತು.
ಮುಂಬೈ ನಡೆ ನಿಗೂಢ
5 ಬಾರಿಯ ಚಾಂಪಿಯನ್ ಮುಂಬೈ ಸಾಮಾನ್ಯವಾಗಿ ವಿಳಂಬವಾಗಿ ಗೆಲುವಿನ ಖಾತೆ ತೆರೆಯುವ ತಂಡ. ಈ ಬಾರಿ ಗುಜರಾತ್ ವಿರುದ್ಧದ ಮೊದಲ ಪಂದ್ಯದಲ್ಲಿ ಇನ್ನೇನು ಗೆದ್ದೇ ಬಿಟ್ಟಿತು ಎಂಬ ಸ್ಥಿತಿಯಿಂದ ಪ್ರಪಾತದತ್ತ ಜಾರಿದ್ದು ಅಚ್ಚರಿಯಾಗಿ ಕಾಣುತ್ತದೆ. ಕೊನೆಯ 6 ಓವರ್‌ಗಳಲ್ಲಿ 7 ವಿಕೆಟ್‌ಗಳಿಂದ 48 ರನ್ ಗಳಿಸಲು ಮುಂಬೈಗೆ ಸಾಧ್ಯವಾಗಲಿಲ್ಲ. ಇದು ನಿಜವಾಗಿಯೂ ಮುಂಬೈ ತಂಡದ ವೈಫಲ್ಯವೋ ಅಥವಾ ರೋಹಿತ್ ಶರ್ಮ ಅವರನ್ನು ಮೂಲೆಗುಂಪು ಮಾಡಿ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿದ ಫಲವೋ ಎಂಬುದು ಸದ್ಯಕ್ಕೆ ನಿಗೂಢ.
ಚೇಸಿಂಗ್ ವೇಳೆ ನಾಯಕ ಹಾರ್ದಿಕ್ ಪಾಂಡ್ಯ 7ರಷ್ಟು ಕೆಳ ಕ್ರಮಾಂಕದಲ್ಲಿ ಆಡಲಿಳಿದರೂ ತಂಡವನ್ನು ದಡ ಸೇರಿಸುವಲ್ಲಿ ವಿಫಲರಾದರು. ದೊಡ್ಡದೊಂದು ಬ್ರೇಕ್ ಬಳಿಕ ಆಡಲಿಳಿದ ಇಶಾನ್ ಕಿಶನ್ ಖಾತೆಯನ್ನೇ ತೆರೆಯಲಿಲ್ಲ. ಮಾಜಿ ನಾಯಕ ರೋಹಿತ್ ಶರ್ಮ 43, ಡಿವಾಲ್ಡ್ ಬ್ರೇವಿಸ್ 46 ರನ್ ಮಾಡಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಆದರೆ ಫಿನಿಶಿಂಗ್ ವೈಫಲ್ಯ ಎದ್ದು ಕಂಡಿದೆ.
ಬೌಲಿಂಗ್‌ನಲ್ಲಿ ಬುಮ್ರಾ ಬ್ರಿಲಿಯಂಟ್ ಸ್ಪೆಲ್ ನಡೆಸಿದ್ದರು. ಸ್ಪಿನ್ನರ್‌ಗಳಾದ ಶಮ್ಸ್ ಮುಲಾನಿ, ಪೀಯೂಷ್ ಚಾವ್ಲಾ ಇನ್ನಷ್ಟು ಸುಧಾರಿಸಬೇಕಿದೆ.
ಹೈದರಾಬಾದ್ ಫೇವರಿಟ್
ಹೈದರಾಬಾದ್ ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ತಂಡ. ಕೆಕೆಆರ್ ವಿರುದ್ಧ ಕೀಪರ್ ಹೆನ್ರಿಚ್ ಕ್ಲಾಸೆನ್ ಸಿಡಿದು ನಿಂತ ಪರಿ ಎಲ್ಲ ತಂಡಗಳಿಗೂ ಎಚ್ಚರಿಕೆಯ ಗಂಟೆ. ಅಂತಿಮ ಓವರ್‌ನ 5ನೇ ಎಸೆತದಲ್ಲಿ ಅವರು ಔಟಾಗದೆ ಹೋಗಿದ್ದರೆ ಸಂಭ್ರ ಮಿಸುವ ಸರದಿ ಹೈದರಾಬಾದ್‌ನದ್ದಾ ಗುತ್ತಿತ್ತು. ಆದರೆ ತಂಡದ ಬೌಲಿಂಗ್ ಘಾತಕವಲ್ಲ. ಭುವನೇಶ್ವರ್, ಜಾನ್ಸೆನ್, ಶಾಬಾಜ್ ಅತ್ಯಂತ ದುಬಾರಿಯಾಗಿ ಗೋಚರಿಸಿದ್ದರು. ಹೀಗಾಗಿ ತಂಡದ ಮೊತ್ತ ಇನ್ನೂರರ ಗಡಿ ದಾಟಿತ್ತು. ಹೈದರಾಬಾದ್ ತವರಿನ ಅಂಗಳದಲ್ಲಿ ಆಡುತ್ತಿರುವ ಕಾರಣ ನೆಚ್ಚಿನ ತಂಡವಾಗಿ ಕಂಡುಬರುತ್ತಿದೆ.
ಪಿಚ್ ರಿಪೋರ್ಟ್
ಇದು ಬ್ಯಾಟಿಂಗ್‌ಗೆ ಪ್ರಶಸ್ತವಾದ ಟ್ರ್ಯಾಕ್. ಬೌಲರ್‌ಗಳಿಗೂ ನೆರವು ನೀಡುತ್ತದೆ. ಪೇಸರ್‌ಗಳಿಗೆ ಆರಂಭದಲ್ಲೇ ಸ್ವಿಂಗ್, ಸ್ಪಿನ್ನರ್‌ಗಳಿಗೆ ತಿರುವನ್ನೂ ನೀಡುವ ಸಾಧ್ಯತೆ ಇದೆ. ಆದರೆ ಚೆಂಡು ನೇರವಾಗಿ ಬ್ಯಾಟ್‌ಗೆà ಬರುವುದರಿಂದ ಬ್ಯಾಟಿಂಗ್ ಎಂಜಾಯ್ ಮಾಡಬಹುದು. ಅಂದಹಾಗೆ ಮಂಜಿನ ಪ್ರಭಾವ ಇದ್ದೇ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.