IPL 2025: ಮುಂದಿನ ಐಪಿಎಲ್‌ ಸೀಸನ್ ಆಡುತ್ತಾರಾ..? ದೊಡ್ಡ ಸುಳಿವು ನೀಡಿದ ಧೋನಿ

Team Udayavani, Oct 26, 2024, 12:12 PM IST

ಮುಂದಿನ ಸೀಸನ್ ಐಪಿಎಲ್‌ ಆಡುತ್ತಾರಾ..? ದೊಡ್ಡ ಸುಳಿವು ನೀಡಿದ ಧೋನಿ

ಮುಂಬೈ: ಐಪಿಎಲ್‌ ಮೆಗಾ ಹರಾಜಿಗೆ (IPL Mega Auction) ಇನ್ನು ಕೇವಲ ಒಂದು ತಿಂಗಳು ಬಾಕಿ ಉಳಿದಿದೆ. ಎಲ್ಲಾ ಫ್ರಾಂಚೈಸಿಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಹಿರಂಗ ಮಾಡಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಅದರ ನಡುವೆ ಹೆಚ್ಚು ಕುತೂಹಲಕ್ಕೆ ಕಾರಣವಾಗಿರುವುದು 43 ವರ್ಷದ ಮಹೇಂದ್ರ ಸಿಂಗ್‌ ಧೋನಿ (Mahendra Singh Dhoni) ಮುಂದಿನ ಸೀಸನ್‌ ಆಡುತ್ತಾರಾ ಎನ್ನುವ ಬಗ್ಗೆ.

ಇತ್ತೀಚೆಗೆ ಈ ಬಗ್ಗೆ ಮಾತನಾಡಿದ್ದ ಸಿಎಸ್‌ ಕೆ ಸಿಎಓ ವಿಶ್ವನಾಥನ್‌ ಅವರು, “ಮಹೇಂದ್ರ ಸಿಂಗ್‌ ಧೋನಿ ಅವರು ಮುಂದುವರಿಯುವ ಬಗ್ಗೆ ಇನ್ನೂ ಖಚಿತ ಮಾಹಿತಿ ನೀಡಿಲ್ಲ” ಎಂದಿದ್ದರು.

ಇದರ ಮಧ್ಯೆ ಸಾಫ್ಟ್‌ವೇರ್ ಬ್ರಾಂಡ್ ರಿಗಿಯ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಧೋನಿ, “ಉಳಿದಿರುವ ಕೆಲವು ವರ್ಷಗಳ ಕ್ರಿಕೆಟನ್ನು ಆನಂದಿಸಲು ನಾನು ಬಯಸುತ್ತೇನೆ” ಎಂದು ಹೇಳಿದ್ದು ಮತ್ತೆ ಕುತೂಹಲಕ್ಕೆ ಕಾರಣವಾಗಿದೆ.

“ನೀವು ಕ್ರಿಕೆಟ್ ಅನ್ನು ವೃತ್ತಿಪರ ಕ್ರೀಡೆಯಂತೆ ಆಡಿದಾಗ, ಅದನ್ನು ಕೇವಲ ಆಟದಂತೆ ಆನಂದಿಸುವುದು ಕಷ್ಟವಾಗುತ್ತದೆ. ಅದನ್ನೇ ನಾನು ಮಾಡಲು ಬಯಸುತ್ತೇನೆ. ಇದು ಸುಲಭವಲ್ಲ. ಭಾವನೆಗಳು ಬರುತ್ತಲೇ ಇರುತ್ತವೆ, ಬದ್ಧತೆಗಳು ಇವೆ. ಮುಂದಿನ ಕೆಲವು ವರ್ಷಗಳ ಕಾಲ ನಾನು ಆಟವನ್ನು ಆನಂದಿಸಲು ಬಯಸುತ್ತೇನೆ” ಎಂದು ಧೋನಿ ಹೇಳಿದರು.

ಧೋನಿ ಅವರ ಮುಂದಿನ ಮಾತುಗಳು ಐಪಿಎಲ್ ಆಟ ಖಂಡಿತವಾಗಿಯೂ ಅವರ ಮನಸ್ಸಿನಲ್ಲಿದೆ ಎಂಬುದನ್ನು ಇನ್ನಷ್ಟು ಸ್ಪಷ್ಟಪಡಿಸಿದೆ.

“ನಾನು ಒಂಬತ್ತು ತಿಂಗಳ ಕಾಲ ನನ್ನನ್ನು ಫಿಟ್ ಆಗಿಟ್ಟುಕೊಳ್ಳಬೇಕು, ಇದರಿಂದ ನಾನು ಎರಡೂವರೆ ತಿಂಗಳ ಐಪಿಎಲ್‌ನಲ್ಲಿ ಆಡಬಹುದು. ನೀವು ಅದರ ಬಗ್ಗೆ ಯೋಜನೆ ಹಾಕಿಕೊಂಡಿರಬೇಕಾಗುತ್ತದೆ” ಎಂದು ಧೋನಿ ಹೇಳಿದರು.

ಐದು ವರ್ಷಗಳ ಹಿಂದೆ ಟೀಮ್ ಇಂಡಿಯಾಗೆ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರಿಂದ, ಧೋನಿಯನ್ನು ಕೇವಲ 4 ಕೋಟಿ ರೂಪಾಯಿಗೆ ಸಿಎಸ್‌ಕೆ ಅನ್‌ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಳ್ಳಬಹುದು.

ಟಾಪ್ ನ್ಯೂಸ್

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

delhi

ಮದುವೆಯಾಗು ಎಂದು ಬೆನ್ನು ಬಿದ್ದ ಗರ್ಭಿಣಿ ಪ್ರೇಯಸಿಯನ್ನೇ ಹತ್ಯೆಗೈದು ಹೂತು ಹಾಕಿದ ಪ್ರಿಯಕರ

yashasvi jaiswal

INDvsNZ: ಒಂದು ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್‌ ಬಾರಿಸಿದ ದಾಖಲೆ ಮಾಡಿದ ಜೈಸ್ವಾಲ್

14-katapady

Katapady:ಸೂರ್ಯನ ಶಾಖದಿಂದ ಮರದ ಹಲಗೆಯಲ್ಲಿ ರಚಿಸಿದ ಕಲಾಕೃತಿಗೆ ರಾಷ್ಟ್ರಪತಿಗಳಿಂದ ಮೆಚ್ಚುಗೆ

Hardik Pandya

Hardik Pandya: ಶೀಘ್ರ ದೊಡ್ಡ ವಿಷಯ ಪ್ರಕಟ: ಹಾರ್ದಿಕ್‌ ಪೋಸ್ಟ್‌ ಕುತೂಹಲ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Maharashtra Assembly Elections: Congress released list of 23 candidates

Maharashtra Assembly Elections: 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yashasvi jaiswal

INDvsNZ: ಒಂದು ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್‌ ಬಾರಿಸಿದ ದಾಖಲೆ ಮಾಡಿದ ಜೈಸ್ವಾಲ್

Hardik Pandya

Hardik Pandya: ಶೀಘ್ರ ದೊಡ್ಡ ವಿಷಯ ಪ್ರಕಟ: ಹಾರ್ದಿಕ್‌ ಪೋಸ್ಟ್‌ ಕುತೂಹಲ

INDvsNZ: ಭಾರತಕ್ಕೆ ಬೃಹತ್‌ ಗುರಿ ನೀಡಿದ ಕಿವೀಸ್; ಸ್ಪಿನ್‌ ಜಾಲದಲ್ಲಿ ಗೆಲ್ಲುತ್ತಾ ಭಾರತ

INDvsNZ: ಭಾರತಕ್ಕೆ ಬೃಹತ್‌ ಗುರಿ ನೀಡಿದ ಕಿವೀಸ್; ಸ್ಪಿನ್‌ ಜಾಲದಲ್ಲಿ ಗೆಲ್ಲುತ್ತಾ ಭಾರತ

1-qwqewew

T20; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕರ್ನಾಟಕದ ವೈಶಾಖ್‌ ವಿಜಯ್‌ಕುಮಾರ್‌ ಆಯ್ಕೆ

1-a-kho-kho

Kho Kho; ಹೊಸದಿಲ್ಲಿಯಲ್ಲಿ ಚೊಚ್ಚಲ ಖೋ ಖೋ ವಿಶ್ವಕಪ್‌

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

delhi

ಮದುವೆಯಾಗು ಎಂದು ಬೆನ್ನು ಬಿದ್ದ ಗರ್ಭಿಣಿ ಪ್ರೇಯಸಿಯನ್ನೇ ಹತ್ಯೆಗೈದು ಹೂತು ಹಾಕಿದ ಪ್ರಿಯಕರ

yashasvi jaiswal

INDvsNZ: ಒಂದು ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್‌ ಬಾರಿಸಿದ ದಾಖಲೆ ಮಾಡಿದ ಜೈಸ್ವಾಲ್

14-katapady

Katapady:ಸೂರ್ಯನ ಶಾಖದಿಂದ ಮರದ ಹಲಗೆಯಲ್ಲಿ ರಚಿಸಿದ ಕಲಾಕೃತಿಗೆ ರಾಷ್ಟ್ರಪತಿಗಳಿಂದ ಮೆಚ್ಚುಗೆ

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.