IPL ಹರಾಜು: ಮೊದಲ ಸಲ ವಿದೇಶದಲ್ಲಿ ಕ್ರಿಕೆಟಿಗರ ಏಲಂ
Team Udayavani, Dec 4, 2023, 6:20 AM IST
ಹೊಸದಿಲ್ಲಿ: ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ಸಾಗರದಾಚೆ ನಡೆ ಯಲಿದೆ. ಇದಕ್ಕಾಗಿ ಬಿಸಿಸಿಐ ಆಯ್ಕೆ ಮಾಡಿರುವ ಕೇಂದ್ರ ದುಬಾೖ. ಡಿ. 19ರಂದು ಇಲ್ಲಿನ “ಕೊಕಾ ಕೋಲಾ ಅರೇನಾ’ ದಲ್ಲಿ ಕ್ರಿಕೆಟಿಗರ ಏಲಂ ನಡೆಯ ಲಿದೆ. ಇದು ವಿದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಐಪಿಎಲ್ ಹರಾಜು ಎಂಬುದು ವಿಶೇಷ.
ಮುಂದಿನ ವರ್ಷದ ಮೆಗಾ ಹರಾ ಜಿಗೂ ಮೊದಲು ನಡೆಯುವ ಕೊನೆಯ ಮಿನಿ ಹರಾಜು ಇದಾಗಿದ್ದು, 1,166 ಕ್ರಿಕೆಟಿಗರು ನೋಂದಾಯಿಸಲ್ಪಟ್ಟಿದ್ದಾರೆ. 77 ಆಟಗಾರರ ಅಗತ್ಯವಿದೆ. ಇವುಗಳಲ್ಲಿ 30 ಸ್ಥಾನ ವಿದೇಶಿಗರಿಗೆ ಮೀಸಲು. ಫ್ರಾಂಚೈಸಿಗಳ ಬಳಿ ಮಿರುವ ಒಟ್ಟು ಮೊತ್ತ 262.95 ಕೋಟಿ ರೂ.
ವಿಶ್ವಕಪ್ ವಿಜೇತ ಆಸ್ಟ್ರೇಲಿಯ ತಂಡದ ಟ್ರ್ಯಾವಿಸ್ ಹೆಡ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮೊದಲಾದವರು ಈ ಹರಾಜಿನ ಪ್ರಮುಖ ಆಕರ್ಷಣೆ ಆಗಿದ್ದಾರೆ. ಈ ಮೂವರ ಮೂಲಬೆಲೆಯೇ 2 ಕೋಟಿ ರೂ. ಆಗಿದೆ. ವಿಶ್ವಕಪ್ ಹೀರೋ, ನ್ಯೂಜಿಲ್ಯಾಂಡ್‌ನ ರಚಿನ್ ರವೀಂದ್ರ ಕೂಡ ರೇಸ್‌ನಲ್ಲಿದ್ದಾರೆ. ಆದರೆ ಇವರ ಮೂಲಬೆಲೆ ಕೇವಲ 50 ಲಕ್ಷ ರೂ. ಆಗಿದೆ. ಬಹುತೇಕ ಎಲ್ಲ ಫ್ರಾಂಚೈಸಿಗಳೂ ಇವರ ಮೇಲೆ ಕಣ್ಣಿಟ್ಟಿವೆ.
ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಯಾದಿಯನ್ನು ಈಗಾಗಲೇ ಐಪಿಎಲ್ ಆಡಳಿತ ಮಂಡಳಿಗೆ ನೀಡಿವೆ. ನ. 26ರ ಗಡುವಿನ ತನಕ ಒಟ್ಟು 173 ಕ್ರಿಕೆಟಿಗರು ತಮ್ಮ ತಮ್ಮ ತಂಡಗಳಲ್ಲಿ ಉಳಿದುಕೊಂಡಿದ್ದಾರೆ. ತಂಡಗಳು ಬಹುತೇಕ ಆಟಗಾರರನ್ನು ಬಿಡುಗಡೆ ಮಾಡಿವೆ. ಆದರೆ “ಟ್ರೇಡ್ ವಿಂಡೋ’ ಡಿ. 12ರ ತನಕ ತೆರೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Zimbabwe : ಪಾದಾರ್ಪಣೆಯಲ್ಲೇ ಅಲಿಸ್ಟರ್ ಪುತ್ರ ಜೋನಾಥನ್‌ಗೆ ನಾಯಕತ್ವ
ICC Champions Trophy; ದಾಖಲೆ ಸಮಯದಲ್ಲಿ ಗದ್ದಾಫಿ ಕ್ರೀಡಾಂಗಣ ಸಿದ್ಧ
38th National Games; ಸೈಕ್ಲಿಂಗ್ ನಲ್ಲಿ ಕೀರ್ತಿ ರಂಗಸ್ವಾಮಿಗೆ 2 ಚಿನ್ನ
AKFI; ಚುನಾಯಿತ ಮಂಡಳಿಗೆ ಕಬಡ್ಡಿ ಒಕ್ಕೂಟದ ಅಧಿಕಾರ ಹಸ್ತಾಂತರಿಸಲು ಸುಪ್ರೀಂ ಸೂಚನೆ
2nd Test: ಆಸ್ಟ್ರೇಲಿಯ ವಿರುದ್ಧ ಶ್ರೀಲಂಕಾ 9 ವಿಕೆಟಿಗೆ 229 ರನ್