ರಂಗಿನ ಐಪಿಎಲ್: ಹೀನಾಯ ಸೋಲುಗಳು, ಅಚ್ಚರಿಗಳು
Team Udayavani, Mar 22, 2019, 4:09 AM IST
ಪ್ರತೀ ವರ್ಷ ಬರುವ ಐಪಿಎಲ್ ಕೇವಲ ಆಟವಾಗಿ ಉಳಿದಿಲ್ಲ. ಅದು ಎಲ್ಲವನ್ನೂ ಮೀರಿ ಉದ್ಯಮವಾಗಿ, ಕೋಟ್ಯಂತರ ಅಭಿಮಾನಿಗಳ ಮನರಂಜನಾ ಕೇಂದ್ರವಾಗಿ, ಕೆಲವೊಮ್ಮೆ ಎದೆ ಬಡಿತ ನಿಲ್ಲಿಸುವ, ಇನ್ನು ಕೆಲವೊಮ್ಮೆ ಎದೆಬಡಿತ ತೀವ್ರಗೊಳಿಸುವ ಒಂದು ರೋಮಾಂಚನ. ನೂರಾರು ಕ್ರಿಕೆಟಿಗರ ಜೀವನದ ಹರಿವನ್ನೇ ಬದಲಿಸುವ ಈ ಕೂಟ ಈ ಬಾರಿ ಮಾ.23ರಿಂದ ಶುರುವಾಗಲಿದೆ.
* ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ 146 ರನ್‌ಗಳಿಂದ ಸೋಲುಂಡಿದ್ದು ಐಪಿಎಲ್‌ನ ದೊಡ್ಡ ಸೋಲು.
* ಗುಜರಾತ್ ಲಯನ್ಸ್, ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ 144 ರನ್‌ಗಳಿಂದ ಸೋಲುಂಡಿದ್ದು ಐಪಿಎಲ್‌ನ 2ನೇ ದೊಡ್ಡ ಸೋಲು
* ಕೋಲ್ಕತ ನೈಟ್ ರೈಡರ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು140 ರನ್‌ಗಳಿಂದ ಸೋಲುಂಡಿತ್ತು.
* ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 138 ರನ್‌ಗಳ ಅಂತರದಿಂದ ಸೋಲು ಕಂಡಿತು.
* ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿಯ ಗೇಲ್ ಪರಾಕ್ರಮದ ಕಾರಣ, ಪುಣೆ 130 ರನ್‌ಗಳ ಸೋಲು ಅನುಭವಿಸಿತ್ತು.
ಅಚ್ಚರಿಗಳು
* ಸರ್ಫ್ರಾಜ್ಗೆ 10 ವರ್ಷ: 2008ರಲ್ಲಿ ಐಪಿಎಲ್ ಆರಂಭವಾದಾಗ ಸಫ್ರಾìಜ್ ಖಾನ್‌ಗೆ ಕೇವಲ 10 ವರ್ಷ. ಅವರು ಐಪಿಎಲ್‌ಗೆ ಆಯ್ಕೆಯಾಗುವಾಗ 17 ವರ್ಷವಾಗಿತ್ತು.
* ಗರಿಷ್ಠ ಸೊನ್ನೆ, ಗರಿಷ್ಠ ಅರ್ಧಶತಕ: ಐಪಿಎಲ್‌ನಲ್ಲಿ ಗರಿಷ್ಠ ಶೂನ್ಯ ಸಂಪಾದನೆ (12) ಮಾಡುವುದ ರೊಂದಿಗೆ, ಗರಿಷ್ಠ ಅರ್ಧಶತಕ (35) ಗಳಿಸಿದ ಆಟ ಗಾರ ಗೌತಮ್ ಗಂಭೀರ್.
* 6 ಬಾರಿ ಫ್ರಾಂಚೈಸಿ ಬದಲಿಸಿದ ಪಾರ್ಥಿವ್: ಪಾರ್ಥಿವ್ ಪಟೇಲ್ 6 ಬೇರೆ ಬೇರೆ ಫ್ರಾಂಚೈಸಿಗಳಲ್ಲಿ ಆಡಿದ್ದಾರೆ. ಅತಿಹೆಚ್ಚು ಬಾರಿ ಫ್ರಾಂಚೈಸಿ ಬದಲಾಯಿಸಿದ ದಾಖಲೆಯಿದು.
*ದುರದೃಷ್ಟವಂತ ಅಶೋಕ್ ದಿಂಡಾ: ವೇಗಿ ಅಶೋಕ್ ದಿಂಡಾ 5 ಬೇರೆ ಬೇರೆ ಫ್ರಾಂಚೈಸಿಗಳಲ್ಲಿ ಆಡಿದ್ದಾರೆ. ಪ್ರಾರಂಭದ 5 ಬಾರಿ ಅವರು ಪ್ರತಿನಿಧಿಸಿದ ತಂಡ ಲೀಗ್‌ನಲ್ಲೇ ಸೋತು ಹೋಗಿದೆ.
*10 ಬಾರಿ ಪಾಂಡೆ, ಉತ್ತಪ್ಪ ಒಂದಾಗಿ ಆಟ
ಆರಂಭದ ಹತ್ತು ಐಪಿಎಲ್‌ಗಳಲ್ಲಿ ಕರ್ನಾಟಕದ ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ ಒಂದಾಗಿ ಆಡಿದ್ದರು. ಕಳೆದ ಆವೃತ್ತಿ ಇಬ್ಬರೂ ಬೇರಾಗಿದ್ದಾರೆ.
* ರನ್ ನೀಡದೇ ಕಾಡಿದ ಸ್ಟೇನ್: 2013ರಲ್ಲಿ ಹೈದರಾಬಾದ್ ಪರ ಆಡಿದ ಆಫ್ರಿಕಾ ವೇಗಿ ಡೇಲ್ ಸ್ಟೇನ್ 407 ಎಸೆತ ಎಸೆದಿದ್ದರು. ಈ ಪೈಕಿ 212 ಎಸೆತಗಳಿಗೆ ರನ್ ನೀಡಿರಲಿಲ್ಲ.
* ಚೆನ್ನೈ ಆಡಿದ ಎಲ್ಲ ಪಂದ್ಯಗಳಲ್ಲಿ ರೈನಾ: ಒಂದು ಫ್ರಾಂಚೈಸಿ ಭಾಗವಹಿಸಿದ ಎಲ್ಲ ಪಂದ್ಯಗಳಲ್ಲಿ ಆಡಿದ ಖ್ಯಾತಿ ಸುರೇಶ್ ರೈನಾ ಅವರದ್ದು. ಅವರು ಚೆನ್ನೈ ಕಿಂಗ್ಸ್ ಪರ ಆರಂಭದ 8 ಆವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದರು.
*ಎಂದೂ ಫೈನಲ್‌ಗೇರದ ಡೆಲ್ಲಿ : ಒಮ್ಮೆಯೂ ಐಪಿಎಲ್ ಫೈನಲ್‌ನಲ್ಲಿ ಆಡದ ತಂಡ ಡೆಲ್ಲಿ ಡೇರ್ ಡೆವಿಲ್ಸ್. 11 ಆವೃತ್ತಿಗಳಲ್ಲಿ ಆಡಿಯೂ ಫೈನಲ್ ಪ್ರವೇಶಿಸಲು ವಿಫಲವಾದ ದುರದೃಷ್ಟ ತಂಡ ಅದು.
*4 ಬಾರಿ ಕಿರೀಟ ಗೆದ್ದ ರೋಹಿತ್: 4 ಬಾರಿ ಐಪಿಎಲ್ ಗೆದ್ದ ಖ್ಯಾತಿ ರೋಹಿತ್ ಶರ್ಮ ಅವರದ್ದು. ಮುಂಬೈ ನಾಯಕರಾಗಿ 3 ಬಾರಿ, ಡೆಕ್ಕನ್ ಚಾರ್ಜರ್ಸ್ ಆಟಗಾರರಾಗಿ ಒಮ್ಮೆ ಗೆದ್ದಿದ್ದಾರೆ.
ಶತಕ ಸಾಮ್ರಾಟರು
ಅಂತಾರಾಷ್ಟ್ರೀಯ ಪಂದ್ಯಗಳೂ ಸೇರಿ, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ 21 ಶತಕ ಬಾರಿಸಿದ ವಿಶ್ವದಾಖಲೆ ಕ್ರಿಸ್‌ಗೇಲ್ ಹೆಸರಿನಲ್ಲಿದೆ. ಐಪಿಎಲ್‌ನಲ್ಲೂ ಅವರದ್ದೇ ಮೇಲುಗೈ. ಅವರು 6 ಶತಕದ ಮೂಲಕ ಅಗ್ರಸ್ಥಾನ ಪಡೆದಿದ್ದರೆ, 4 ಶತಕ ಬಾರಿಸಿರುವ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ.
ಕ್ರಿಸ್ ಗೇಲ್, ಪಂಜಾಬ್ 6
ವಿರಾಟ್ ಕೊಹ್ಲಿ, ಆರ್‌ಸಿಬಿ 4
ಡಿ ವಿಲಿಯರ್, ಆರ್‌ಸಿಬಿ 3
ಡೇವಿಡ್ ವಾರ್ನರ್, ಹೈದ್ರಾಬಾದ್ 3
ಶೇನ್ ವಾಟ್ಸನ್, ಚೆನ್ನೈ 4
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.