IPL; ಚಂಡೀಗಢದಲ್ಲಿ ಬ್ಯಾಟಿಂಗ್ ಮೇಲಾಟ?ಅಬ್ಬರಿಸೀತೇ ಎಸ್‌ಆರ್‌ಎಚ್?
Team Udayavani, Apr 9, 2024, 8:20 AM IST
ಮುಲ್ಲಾನ್‌ಪುರ್ (ಚಂಡೀಗಢ): ಎರಡು ಗೆಲುವು, ಎರಡು ಸೋಲುಗಳ ಸಮಾನ ಸಾಧನೆಯೊಂದಿಗೆ ಅಂಕಪಟ್ಟಿಯ ನಡು ಭಾಗದಲ್ಲಿ ನೆಲೆಸಿರುವ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ ಹೈದರಾಬಾದ್ ಯುಗಾದಿ ದಿನದಂದು ಐಪಿಎಲ್ ಅಖಾಡಕ್ಕೆ ಇಳಿಯಲಿವೆ. ಇದು ಮುಲ್ಲಾನ್‌ಪುರದಲ್ಲಿ ನಡೆಯುವ ಪಂದ್ಯವಾಗಿದ್ದು, ಪಂಜಾಬ್‌ಗ ತವರು ಅಂಗಳವಾಗಿದೆ. ಈ ಕಾರಣಕ್ಕಾಗಿ ಗೆಲುವಿನ ಸಾಧ್ಯತೆ ತುಸು ಹೆಚ್ಚು ಎನ್ನಲಡ್ಡಿಯಿಲ್ಲ.
ಈ ನೂತನ ಸ್ಟೇಡಿಯಂನಲ್ಲಿ ಈವರೆಗೆ ನಡೆದದ್ದು ಒಂದು ಐಪಿಎಲ್ ಪಂದ್ಯ ಮಾತ್ರ. ಡೆಲ್ಲಿ ವಿರುದ್ಧದ ಈ ಮುಖಾಮುಖೀಯಲ್ಲಿ ಪಂಜಾಬ್ 4 ವಿಕೆಟ್‌ಗಳ ಜಯ ಸಾಧಿಸಿತ್ತು. 63 ರನ್ ಬಾರಿಸಿದ ಸ್ಯಾಮ್ ಕರನ್ ಗೆಲುವಿನ ರೂವಾರಿಯಾಗಿದ್ದರು. ಡೆಲ್ಲಿ 9ಕ್ಕೆ 174, ಪಂಜಾಬ್ 6ಕ್ಕೆ 177 ರನ್ ಬಾರಿಸಿತ್ತು.
ಹೊಸಬರ ಮಿಂಚು
ಅನಂತರದ 2 ಪಂದ್ಯಗಳಲ್ಲಿ ಪಲ್ಟಿ ಹೊಡೆದ ಪಂಜಾಬ್, ಅಹ್ಮದಾಬಾದ್‌ನಲ್ಲಿ ಗುಜರಾತ್‌ಗೆ 3 ವಿಕೆಟ್‌ಗಳ ಆಘಾತವಿಕ್ಕುವ ಮೂಲಕ ಗೆಲುವಿನ ಹಳಿ ಏರಿದೆ. ಇಲ್ಲಿ 200 ರನ್ ಟಾರ್ಗೆಟ್ ವೇಳೆ ಮಿಂಚಿದ ಕ್ರಿಕೆಟಿಗರಿಬ್ಬರೂ ಹೊಸಬರೆಂಬುದನ್ನು ಮರೆಯುವಂತಿಲ್ಲ. ಇವರೆಂದರೆ ಕೆಳ ಕ್ರಮಾಂಕದ ಆಟಗಾರರಾದ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮ. ಪಂಜಾಬ್‌ನ ಅಗ್ರ ಸರದಿಯ ಬ್ಯಾಟರ್‌ಗಳಾದ ಧವನ್, ಬೇರ್‌ಸ್ಟೊ, ಪ್ರಭ್‌ಸಿಮ್ರಾನ್, ಲಿವಿಂಗ್‌ಸ್ಟೋನ್, ಕರನ್, ಜಿತೇಶ್, ರಝ ಅವರೆಲ್ಲ ದೊಡ್ಡ ಮೊತ್ತ ಪೇರಿಸಬೇಕಾದ ಅಗತ್ಯವಿದೆ.
ಪಂಜಾಬ್ ಬೌಲಿಂಗ್ ವಿಪರೀತ ಘಾತಕವೇನಲ್ಲ. ಬ್ರಾರ್, ಅರ್ಷದೀಪ್ ಸಿಂಗ್, ರಬಾಡ, ಕರನ್, ಹರ್ಷಲ್ ಪಟೇಲ್ ಅವರೆಲ್ಲ ಸೇರಿ ಬಲಾಡ್ಯ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ಹೈದರಾಬಾದ್‌ಗೆ ಎಷ್ಟರ ಮಟ್ಟಿಗೆ ಕಡಿವಾಣ ಹಾಕುತ್ತಾರೆಂಬುದು ಮುಖ್ಯ.
ಅಬ್ಬರಿಸೀತೇ ಎಸ್‌ಆರ್‌ಎಚ್?
ಈ ಕೂಟದಲ್ಲಿ ಸರ್ವಾಧಿಕ ಮೊತ್ತದ ಐಪಿಎಲ್ ದಾಖಲೆ ಬರೆದಿರುವ ಹೈದರಾಬಾದ್ ಅನಂತರ ಇದೇ ಮಟ್ಟದ ಬ್ಯಾಟಿಂಗ್ ಅಬ್ಬರ ತೋರ್ಪಡಿಸಿಲ್ಲ. ಆದರೆ ಇದೊಂದು ಅತ್ಯಂತ ಅಪಾಯಕಾರಿ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಹೆಡ್, ಅಭಿಷೇಕ್ ಶರ್ಮ, ಮಾರ್ಕ್‌ರಮ್, ಶಾಬಾಜ್, ನಿತೀಶ್ ರೆಡ್ಡಿ, ಇವರೆಲ್ಲರಿಗಿಂತ ಮಿಗಿಲಾಗಿ ಕೀಪರ್ ಹೆನ್ರಿಚ್ ಕ್ಲಾಸೆನ್ ಎಸ್‌ಆರ್‌ಎಚ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ.
ಪಂಜಾಬ್‌ನಂತೆ ಹೈದರಾಬಾದ್ ಬೌಲಿಂಗ್ ಕೂಡ ಘಾತಕವಲ್ಲ. ಅನುಭವಿ ಭುವನೇಶ್ವರ್ ಮುಮಾರ್ ಹೊಸ ಚೆಂಡಿನಲ್ಲಿ ಲಯ ಕಂಡುಕೊಳ್ಳಲು ಪರದಾಡು ತ್ತಿದ್ದಾರೆ. ಉನಾದ್ಕತ್, ಮಾಯಾಂಕ್ ಮಾರ್ಕಂಡೆ ಸಾಕಷ್ಟು ರನ್ ಬಿಟ್ಟುಕೊಟ್ಟಿದ್ದಾರೆ. ನಾಯಕ ಪ್ಯಾಟ್ ಕಮಿನ್ಸ್ ಕೂಡ ಪರಿಣಾಮ ಬೀರಿಲ್ಲ. ಟಿ. ನಟ ರಾಜನ್ ಮೊದಲಿನ ಫಾರ್ಮನಲ್ಲಿಲ್ಲ. ಇದನ್ನೆಲ್ಲ ಗಮನಿ ಸುವಾಗ ಇದೊಂದು ಬ್ಯಾಟಿಂಗ್ ಮೇಲಾಟವಾಗಿ ಪರಿಣಮಿಸುವ ಸಾಧ್ಯತೆಯೇ ಹೆಚ್ಚು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.