ಗೆಲ್ಲುವ ಕುದುರೆ ಹಿಂದೆ ಫ್ರಾಂಚೈಸಿಗಳ ಓಟ
Team Udayavani, Feb 21, 2017, 11:00 AM IST
ಬೆಂಗಳೂರು: 2017ನೇ ಐಪಿಎಲ್ ಆವೃತ್ತಿಗಾಗಿ ನಡೆದ ಒಂದು ದಿನದ ಹರಾಜು ಸೋಮವಾರ ಬೆಂಗಳೂರಿನಲ್ಲಿ ಮುಕ್ತಾಯವಾಗಿದೆ. ಎಂದಿನಂತೆ ಹರಾಜು ಪ್ರಕ್ರಿಯೆ ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಹೆಸರೇ ಕೇಳರಿಯದ, ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟನ್ನೇ ಆಡದ ಹಲವು ಆಟಗಾರರನ್ನು ಕೊಳ್ಳಲು ಫ್ರಾಂಚೈಸಿಗಳು ಮುಗಿಬಿದ್ದರು. ಬ್ಯಾಟ್ಸ್‌ಮನ್‌ಗಳ ಆಟವೆಂದು ಹೆಸರಾದ ಐಪಿಎಲ್‌ನಲ್ಲಿ ಬೌಲರ್‌ಗಳನ್ನು ಕೊಳ್ಳಲು ಸ್ಪರ್ಧೆ ಏರ್ಪಟ್ಟಿದ್ದು ಬೌಲರ್‌ಗಳ ಮಹತ್ವ ಅರಿವಾಗಿರುವುದಕ್ಕೆ ಸಾಕ್ಷಿ. ಇಂಗ್ಲೆಂಡ್‌ನ ಇಬ್ಬರು ಆಟಗಾರರಾದ ಬೆಂಜಮಿನ್ ಸ್ಟೋಕ್ಸ್, ಟೈಮಲ್ ಮಿಲ್ಸ್ ಕ್ರಮವಾಗಿ 14.5, 12 ಕೋಟಿ ರೂ.ಗಳಿಗೆ ಮಾರಾಟವಾಗುವ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಮಾರಾಟವಾದ ವಿದೇಶೀಯರೆಂಬ ಖ್ಯಾತಿ ಗಳಿಸಿದರು. ಅಲ್ಲದೇ ಈ ಬಾರಿ ಐಪಿಎಲ್‌ನ ಗರಿಷ್ಠ ಮೊತ್ತವೂ ಅವರಿಗೇ ಲಭಿಸಿತು.
ಒಟ್ಟು 357 ಆಟಗಾರರು ಹರಾಜು ಪಟ್ಟಿ ಯಲ್ಲಿದ್ದರು. ಮಾರಾಟವಾಗಿದ್ದು 66 ಮಂದಿ ಮಾತ್ರ. ಇದರಲ್ಲಿ 27 ವಿದೇಶಿ ಆಟಗಾರರಿದ್ದರೆ, 39 ಮಂದಿ ಭಾರತೀಯರಿದ್ದರು. ಇವರನ್ನು ಕೊಳ್ಳಲು 8 ಫ್ರಾಂಚೈಸಿಗಳು ಒಟ್ಟಾರೆಯಾಗಿ 91.15 ಕೋಟಿ ರೂ. ವ್ಯಯಿಸಿದವು.
ಆಫ^ನ್ನರನ್ನು ಜಿದ್ದಾಜಿದ್ದಿ: ಇದೇ ಮೊದಲ ಬಾರಿ ಐಪಿಎಲ್ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದ ಆಫ್ಘಾನಿಸ್ಥಾನದ ಆಟಗಾರರನ್ನು ಕೊಳ್ಳಲು ಫ್ರಾಂಚೈಸಿಗಳು ಸ್ಪರ್ಧೆ ನಡೆಸಿದವು ಅಂದರೆ ನೀವು ನಂಬಲೇಬೇಕು! ಅಂತಾರಾಷ್ಟ್ರೀಯ ಕ್ರಿಕೆಟನ್ನೇ ಆಡದ ಲೆಗ್‌ಸ್ಪಿನ್ನರ್ ರಶೀದ್ ಖಾನ್‌ಗಾಗಿ ತೀವ್ರ ಸ್ಪರ್ಧೆ ಇದ್ದ ಪರಿಣಾಮ 50 ಲಕ್ಷ ರೂ. ಮೂಲಬೆಲೆ ಇದ್ದ ಅವರು 4 ಕೋಟಿ ರೂ.ಗೆ ಮಾರಾಟವಾದರು. ಸನ್‌ರೈಸರ್ಸ್ ಹೈದ್ರಾಬಾದ್ ಅವರನ್ನು ಖರೀದಿಸಿತು.
ಈ ಪೈಪೋಟಿಯಲ್ಲಿ ಭಾರತೀಯ ಆಟಗಾರರೂ ಹಿಂದುಳಿಯಲಿಲ್ಲ. ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಕರ್ನಾಟಕದ ಕೆ.ಗೌತಮ್, ಟಿ.ನಟರಾಜನ್, ಅಂಕಿತ್ ಚೌಧರಿ, ಮೊಹಮ್ಮದ್ ಸಿರಾಜ್, ಮುರುಗನ್ ಅಶ್ವಿನ್ ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಮಾರಾಟವಾದರು. ಇವರಲ್ಲಿ ನಟರಾಜನ್ 3 ಕೋಟಿ ರೂ. ಗಳಿಸಿ ಅಗ್ರಸ್ಥಾನಿಯಾದರು.
ಮಾರಾಟವಾಗದ ತಾರೆಗಳು: ವಿಡಂಬನೆ ಯೆಂದರೆ ಹಲವು ಬಹುನಿರೀಕ್ಷಿತ ಹೆಸರುಗಳು ಮಾರಾಟವಾಗದೇ ಉಳಿದಿದ್ದು. ವಿಶ್ವ ನಂ.1 ಟಿ20 ಬೌಲರ್ ಎಂಬ ಖ್ಯಾತಿ ಹೊಂದಿರುವ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್‌ರನ್ನು ಯಾರಿಗೂ ಬೇಡವಾಗಿದ್ದು. ಯಾವ ಫ್ರಾಂಚೈಸಿಗಳೂ ಅವರನ್ನು ಆಸಕ್ತಿಯಿಂದ ಗಮನಿಸಲಿಲ್ಲ. ಕೇವಲ ಬೌಲರ್, ಬ್ಯಾಟಿಂಗ್‌ಗೆ ಉಪಯೋಗಕ್ಕೆ ಬರುವುದಿಲ್ಲವೆಂಬುದು ಫ್ರಾಂಚೈಸಿಗಳ ಲೆಕ್ಕಾಚಾರವಾಗಿತ್ತು. ಭಾರತೀಯರ ಮಟ್ಟಿಗೆ ಇಶಾಂತ್ ಶರ್ಮಾ 2 ಕೋಟಿ ರೂ., ಚೇತೇಶ್ವರ ಪೂಜಾರಾ, ಇರ್ಫಾನ್ ಪಠಾಣ್ ತಲಾ 50 ಲಕ್ಷ ರೂ. ಮೂಲಬೆಲೆ ಹೊಂದಿದ್ದು ಖ್ಯಾತನಾಮರೆಂದು ಹೆಸರುವಾಸಿಯಾಗಿದ್ದರೂ ಕೊಳ್ಳುವವರಿಲ್ಲದೇ ಮುಜುಗರಕ್ಕೊಳಗಾದರು.
ಕುಸಿದ ಮೊತ್ತ: ಇನ್ನೂ ಒಂದು ಸ್ವಾರಸ್ಯವೆಂದರೆ ಕಳೆದ ಬಾರಿ 8.5 ಕೋಟಿ ರೂ.ಗೆ ಡೆಲ್ಲಿ ಪಾಲಾಗಿದ್ದ ಪವನ್ ನೇಗಿ ಈ ಬಾರಿ 7.5 ಕೋಟಿ ರೂ. ಮೊತ್ತವನ್ನು ಕಳೆದುಕೊಂಡರು. 30 ಲಕ್ಷ ರೂ. ಮೂಲಬೆಲೆ ಹೊಂದಿದ್ದ ಅವರನ್ನು ಕಡೆಗೂ ಆರ್‌ಸಿಬಿ 1 ಕೋಟಿ ರೂ.ಗೆ ಖರೀದಿಸಿತು. ಹಿಂದಿನ ಐಪಿಎಲ್‌ನಲ್ಲಿ ನೇಗಿಗೆ ತಿರುಗಿದ್ದ ಈ ಬಾರಿ ಕೈಕೊಟ್ಟಿದ್ದು ದುರದೃಷ್ಟ. ಫ್ರಾಂಚೈಸಿಗಳು ಗೆಲ್ಲುವ ಕುದುರೆ ಹಿಂದೆ ಓಡುತ್ತವೆ ಎನ್ನುವುದಕ್ಕೆ ಇದು ಸಾಕ್ಷಿಯಾಯಿತು.
ಬಿಕರಿಯಾಗದ ಭಾರತೀಯರು
1. ಹೆಸರು: ಇಶಾಂತ್ ಶರ್ಮಾ
ರಾಜ್ಯ: ದಿಲ್ಲಿ
ಮೂಲ ಬೆಲೆ: 2 ಕೋಟಿ ರೂ.
2. ಹೆಸರು: ಚೇತೇಶ್ವರ ಪೂಜಾರ
ರಾಜ್ಯ: ಸೌರಾಷ್ಟ್ರ
ಮೂಲ ಬೆಲೆ: 50 ಲಕ್ಷ ರೂ.
3. ಹೆಸರು: ಇರ್ಫಾನ್ ಪಠಾಣ್
ರಾಜ್ಯ: ಬರೋಡ
ಮೂಲ ಬೆಲೆ: 50 ಲಕ್ಷ ರೂ.
ಬಿಕರಿಯಾಗದ ವಿದೇಶೀಯರು
1. ಹೆಸರು: ಜಾಸನ್ ಹೋಲ್ಡರ್
ದೇಶ: ವೆಸ್ಟ್ ಇಂಡೀಸ್
ಮೂಲ ಬೆಲೆ: 1.50 ಕೋಟಿ ರೂ.
2. ಹೆಸರು: ಬ್ರ್ಯಾಡ್ ಹ್ಯಾಡಿನ್
ದೇಶ: ಆಸ್ಟ್ರೇಲಿಯ
ಮೂಲ ಬೆಲೆ: 1.50 ಕೋ.ರೂ.
3. ಹೆಸರು: ಕೈಲ್ ಅಬೋಟ್
ದೇಶ: ದಕ್ಷಿಣ ಆಫ್ರಿಕಾ
ಮೂಲ ಬೆಲೆ: 1.50 ಕೋ. ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.