IPL; ಪುನರಾಗಮನ ಸಾರಿದ ಪಂತ್: ಚೆನ್ನೈ ವಿರುದ್ಧ ಡೆಲ್ಲಿಗೆ 20 ರನ್ ಜಯ
Team Udayavani, Mar 31, 2024, 11:21 PM IST
ವಿಶಾಖಪಟ್ಟಣ: ರವಿವಾರದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 20 ರನ್ ಗಳ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಲು ನಿರ್ಧರಿಸಿದ ಡೆಲ್ಲಿ ತಂಡ 5 ವಿಕೆಟಿಗೆ 191 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಚೆನ್ನೈ 6 ವಿಕೆಟ್ ನಷ್ಟಕ್ಕೆ 171 ರನ್ ಮಾತ್ರ ಗಳಿಸಿತು. ಚೆನ್ನೈ 7 ರನ್ ಆಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ರುತುರಾಜ್ ಗಾಯಕ್ವಾಡ್ 1, ರಚಿನ್ 2 ರನ್ ಗಳಿಸಿ ನಿರ್ಗಮಿಸಿದರು. ಅಜಿಂಕ್ಯ ರಹಾನೆ 45, ಡ್ಯಾರಿಲ್ ಮಿಚೆಲ್ 34, ಶಿವಂ ದುಬೆ 18, ಕೊನೆಯಲ್ಲಿ ಧೋನಿ 37 ಮತ್ತು ಜಡೇಜ 21 ರನ್ ಗಳಿಸಿದರು. ಧೋನಿ16 ಎಸೆತಗಳಲ್ಲಿ 37 ರನ್ ಗಳಿಸಿದರು.4 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿ ಕೊನೆಯಲ್ಲಿ ಅಭಿಮಾನಿಗಳನ್ನು ರಂಜಿಸಿದರು.
ಬಿಗು ದಾಳಿ ಸಂಘಟಿಸಿದ ಮುಖೇಶ್ ಕುಮಾರ್ 3 ವಿಕೆಟ್ ಕಿತ್ತು ಗಮನ ಸೆಳೆದರು. ಅವರು ಎಸೆದ 19 ನೇ ಓವರ್ ನಲ್ಲಿ 5 ರನ್ ಮಾತ್ರ ಬಿಟ್ಟು ಕೊಟ್ಟು ಪಂದ್ಯದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಪುನರಾಗಮನ ಸಾರಿದ ಪಂತ್
ಕಾರು ಅಪಘಾತದಿಂದ ಗಂಭೀರ ಗಾಯಗೊಂಡು ಪೂರ್ಣ ರೀತಿಯಲ್ಲಿ ಚೇತರಿಸಿ ಐಪಿಎಲ್‌ನಲ್ಲಿ ಆಡಲು ಇಳಿದ ರಿಷಬ್ ಪಂತ್ ಅಮೋಘ ಅರ್ಧಶತಕ ದಾಖಲಿಸಿ ಯಶಸ್ವಿಯಾಗಿ ತನ್ನ ಪುನರಾಗಮನವನ್ನು ಸಾರಿದರು. ವಾರ್ನರ್ ಮತ್ತು ಪೃಥ್ವಿ ಶಾ ಮೊದಲ ವಿಕೆಟಿಗೆ 93 ರನ್ನುಗಳ ಜತೆಯಾಟ ನಡೆಸಿ ತಂಡ ಉತ್ತಮ ಮೊತ್ತ ಪೇರಿಸುವ ಸೂಚನೆಯಿತ್ತರು. ಆಬಳಿಕ ಬಂದ ರಿಷಬ್ ಪಂತ್ 32 ಎಸೆತಗಳಿಂದ 51 ರನ್ ಗಳಿಸಿದರು. ವಾರ್ನರ್ 35 ಎಸೆತಗಳಿಂದ 52 ರನ್ ಹೊಡೆದರೆ ಶಾ 27 ಎಸೆತಗಳಿಂದ 43 ರನ್ ಹೊಡೆದರು.
2022ರ ಡಿಸೆಂಬರ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ರಿಷಬ್ ಪಂತ್ ಸದ್ಯ ಪೂರ್ಣ ಚೇತರಿಸಿಕೊಂಡಿದ್ದು ಮೊದಲ ಬಾರಿ ಆಡಲು ಇಳಿದರು. 32 ಎಸೆತ ಎದುರಿಸಿದ ಅವರು 4 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು. ಬಿಗು ದಾಳಿ ಸಂಘಟಿಸಿದ ಮತೀಶ ಪತಿರಣ 31 ರನ್ನಿಗೆ ಮೂರು ವಿಕೆಟ್ ಕಿತ್ತು ಗಮನ ಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ
INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್
Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್ ಒತ್ತಡ
BGT 2024: ಆಸೀಸ್ ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿ
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
MUST WATCH
ಹೊಸ ಸೇರ್ಪಡೆ
Mangaluru: ಬಸ್‌ಗಳ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕಣ್ಮರೆ!
15 ದಿನ ಮೊದಲು ನೋಟಿಸ್…ಕಟ್ಟಡ ಧ್ವಂಸಕ್ಕೆ ಮಾರ್ಗಸೂಚಿ ಪ್ರಕಟಿಸಿದ ಸುಪ್ರೀಂಕೋರ್ಟ್
Karkala: ಈದುವಿಗೆ ಬೇಕು ಸರಕಾರಿ ಕಾಲೇಜು
Maharashtra; ಉದ್ಧವ್ ಮಾತ್ರವಲ್ಲ ಫಡ್ನವಿಸ್ ಬ್ಯಾಗ್ ಕೂಡ ಚೆಕ್: ಬಿಜೆಪಿಯಿಂದ ವಿಡಿಯೋ
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.