ಐಪಿಎಲ್: ವಿದೇಶಿ ಆಟಗಾರರು ಅನುಮಾನ?
Team Udayavani, Mar 14, 2020, 10:46 PM IST
ಮುಂಬಯಿ: ಐಪಿಎಲ್ ವರ್ಚಸ್ಸು ವೃದ್ಧಿಸಲು ವಿದೇಶಿ ಆಟಗಾರರ ಪಾತ್ರ ಗಣನೀಯವಾಗಿದೆ. ಅಮೋಘ ಪ್ರದರ್ಶನದ ಮೂಲಕ ಇವರು ಐಪಿಎಲ್ ಮಹತ್ವವನ್ನು ಹೆಚ್ಚಿಸಿದ್ದಾರೆ.
ವಿದೇಶಿಯರ ಆಗಮನದಿಂದ ಬೌಲಿಂಗ್, ಬ್ಯಾಟಿಂಗ್, ಕ್ಷೇತ್ರರಕ್ಷಣೆಯ ಗುಣಮಟ್ಟದಲ್ಲಿ ಭಾರೀ ಪ್ರಗತಿಯಾಗಿದೆ. ಆದರೆ ಎ. 15ರ ವರೆಗೆ ಯಾವುದೇ ವಿದೇಶಿ ಕ್ರಿಕೆಟಿಗರು ಐಪಿಎಲ್ ಆಡಲು ಭಾರತಕ್ಕೆ ಬರುವುದಿಲ್ಲ. ಕೇಂದ್ರ ಸರಕಾರ ಎಲ್ಲ ರೀತಿಯ ವಿದೇಶಿ ವೀಸಾಗಳನ್ನು ರದ್ದು ಮಾಡಿದ್ದೇ ಇದಕ್ಕೆ ಕಾರಣ. ಅನಂತರವಾದರೂ ಅವರು ಬರುತ್ತಾರಾ? ಇದಿನ್ನೂ ಖಚಿತವಾಗಿಲ್ಲ.
ಎಲ್ಲ ಕಡೆ ಕೊರೊನಾ ಹಾವಳಿ ಇರುವುದರಿಂದ, ವಿದೇಶಿ ಆಟಗಾರರು ಈ ಸಹವಾಸವೇ ಬೇಡವೆಂದು ತಮ್ಮ ದೇಶದಲ್ಲೇ ಉಳಿದುಕೊಳ್ಳಲು ಯತ್ನಿಸಿದರೆ ಬಿಸಿಸಿಐ ಖಂಡಿತ ಸಂಕಷ್ಟಕ್ಕೆ ಸಿಲುಕುತ್ತದೆ. ವಿದೇಶಿ ಆಟಗಾರರಿಲ್ಲದೆ ನಡೆಯುವ ಕೂಟ ಪೂರ್ಣ ಜನಪ್ರಿಯತೆ ಕಳೆದುಕೊಳ್ಳುವುದು ಸಹಜ. ಅಂತಹ ಹೊತ್ತಿನಲ್ಲಿ ಬಿಸಿಸಿಐ ಕೂಡ ಐಪಿಎಲ್ ನಡೆಸಲು ಮನಸ್ಸು ಮಾಡಲಾರದು.
ಸುರಕ್ಷತೆಯೇ ಮುಖ್ಯ, ಹಣವಲ್ಲ
ಶನಿವಾರದ ಸಭೆಯ ಅನಂತರ ಪ್ರತಿಕ್ರಿಯಿಸಿರುವ ಪಂಜಾಬ್ ತಂಡದ ಮಾಲಕ ನೆಸ್ ವಾಡಿಯಾ, “ಬಿಸಿಸಿಐ ಗಾಗಲೀ, ಫ್ರಾಂಚೈಸಿಗಾಗಲೀ, ನೇರಪ್ರಸಾರ ಮಾಡುವ ಸ್ಟಾರ್ ನ್ಪೋರ್ಟ್ಸ್ ವಾಹಿನಿಗಾಗಲೀ ಆರ್ಥಿಕ ನಷ್ಟ ದೊಡ್ಡ ವಿಷಯವಲ್ಲ. ಜನರ ಸುರಕ್ಷತೆಯೇ ಮುಖ್ಯ’ ಎಂದಿದ್ದಾರೆ. ಆದರೂ ಕೂಟ ಯಾವಾಗ ಶುರುವಾಗುತ್ತದೆ, ವಿದೇಶಿ ಆಟಗಾರರು ಪಾಲ್ಗೊಳ್ಳುವರೋ, ಇಲ್ಲವೋ ಎನ್ನುವುದು ಖಚಿತವಾಗಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.