ಐಪಿಎಲ್: ಡೆಲ್ಲಿ ತಂಡಕ್ಕೆ ಗಂಗೂಲಿ ಸಲಹೆಗಾರ
Team Udayavani, Mar 15, 2019, 12:30 AM IST
ಹೊಸದಿಲ್ಲಿ: ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮುಂಬರುವ ಐಪಿಎಲ್‌ನಲ್ಲಿ “ಡೆಲ್ಲಿ ಕ್ಯಾಪಿಟಲ್’ ತಂಡದ ಸಲಹೆಗಾರನಾಗಿ ಆಯ್ಕೆಯಾಗಿದ್ದಾರೆ. ಅವರು ಡೆಲ್ಲಿ ತಂಡ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಜತೆ ಕಾರ್ಯ ನಿರ್ವಹಿಸಲಿದ್ದಾರೆ.
“ಗಂಗೂಲಿಯವರ ಅನುಭವ, ಮಾರ್ಗದರ್ಶನ ಹಾಗೂ ಸಲಹೆಯಿಂದ ತಂಡಕ್ಕೆ ಪ್ರಯೋಜನವಾಗಲಿದೆ. ಗಂಗೂಲಿ ನಮ್ಮ ಪಾಲಿಗೆ ಕುಟುಂಬದ ಸದಸ್ಯನಂತೆ. ಅವರನ್ನು ಸಲಹೆಗಾರನಾಗಿರುವುದು ಸಂತಸದ ಸಂಗತಿ’ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಧ್ಯಕ್ಷ ಪಾರ್ಥ್ ಜಿಂದಾಲ್ ಹೇಳಿದ್ದಾರೆ.”ಡೆಲ್ಲಿ ಪರ ಕೆಲಸ ಮಾಡುವುದು ಖುಷಿಯ ಸಂಗತಿ.ತಂಡದ ಎಲ್ಲ ಆಟಗಾರರಿಗೆ, ಫ್ರಾಂಚೈಸಿಯ ಸದಸ್ಯರಿಗೆ ಸರ್ವರೀತಿಯ ಸಹಕಾರ ನೀಡುತ್ತೇನೆ. ಡೆಲ್ಲಿ ತಂಡ ಈ ಬಾರಿ ಚಾಂಪಿಯನ್ ಆಗುವಲ್ಲಿ ಶ್ರಮಿಸುತ್ತೇನೆ’ ಎಂದು ಗಂಗೂಲಿ ಹೇಳಿದ್ದಾರೆ.
ಗಂಗೂಲಿ ಇದಕ್ಕೂ ಮೊದಲು ಕೋಲ್ಕತಾ ನೈಟ್‌ರೈಡರ್ ಪರ ಆಡಿದ್ದರು.ಕೆಕೆಆರ್ ಸಲಹೆಗಾರನಾಗಿಯೂ ಕೆಲಸ ನಿರ್ವಹಿಸಿದ್ದರು.
ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ತಂಡ ಮಾರ್ಚ್ 24ರಿಂದ ತನ್ನ ಐಪಿಎಲ್ ಪಯಣ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ತಂಡವನ್ನು, ಮಾ. 26ರ ತವರಿನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.