ಮುಂದಿನ ವರ್ಷದ ಐಪಿಎಲ್ ಮಾ. 29ರಿಂದ?
Team Udayavani, Jun 2, 2018, 6:00 AM IST
ಮುಂಬಯಿ: ಲೋಕಸಭಾ ಚುನಾವಣೆ, ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ 2019ರಲ್ಲಿ ಬೆನ್ನು ಬೆನ್ನಲ್ಲೇ ನಡೆಯುವುದರಿಂದ 12ನೇ ಆವೃತ್ತಿ ಐಪಿಎಲ್ ಮಾ. 29ರಿಂದ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಲೋಧಾ ಶಿಫಾರಸು ಪಾಲನೆ
ಪ್ರತಿ ವರ್ಷ ಐಪಿಎಲ್ ವೇಳಾಪಟ್ಟಿ ಎ. 7ರ ಬಳಿಕ ಅಥವಾ ಎ. 5ರೊಳಗೆ ನಿಗದಿಯಾಗುತ್ತಿತ್ತು. ಆದರೆ ವಿಶ್ವಕಪ್ ಮೇ 30ಕ್ಕೆ ಆರಂಭವಾಗಲಿದೆ. ಜತೆಗೆ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಟಗಳ ನಡುವೆ 15 ದಿನದ ಅಂತರವಿರಬೇಕು ಎನ್ನುವ ಲೋಧಾ ಸಮಿತಿ ಶಿಫಾರಸನ್ನು ಕೂಡ ಬಿಸಿಸಿಐ ಪಾಲಿಸಬೇಕಿದೆ. ಅಲ್ಲದೆ ಲೋಕಸಭಾ ಚುನಾವಣೆ ದಿನಾಂಕ ಕೂಡ ಪ್ರಕಟವಾಗುವ ಸಾಧ್ಯತೆ ಇದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಿಸಿಸಿಐ ಮಾರ್ಚ್‌ನಲ್ಲೇ ಐಪಿಎಲ್ ಆರಂಭಿಸಿ ಮೇ ಮಧ್ಯ ಭಾಗದಲ್ಲಿ ಫೈನಲ್ ಆಯೋಜಿಸುವ ಸಾಧ್ಯತೆ ಇದೆ.
ಷೇರುದಾರರ ಒತ್ತಾಯ
ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಕೂಟ ಆಯೋಜಿಸಿದ್ದಾಗ ಷೇರುದಾರರು ಸಾಕಷ್ಟು ನಷ್ಟ ಅನುಭವಿಸಿದ್ದರು ಎನ್ನಲಾಗಿದೆ. ಈ ಕಾರಣದಿಂದಾಗಿ ವಿದೇಶದಲ್ಲಿ ಬೇಡ, ಭಾರತದಲ್ಲೇ ಐಪಿಎಲ್ ಪಂದ್ಯ ನಡೆಸಲು ಷೇರುದಾರರು ಒತ್ತಾಯ ಮಾಡಿದ್ದಾರೆ ಎಂದು ಹೇಳಲಾಗಿದೆ.
ವಿದೇಶಕ್ಕೆ ಶಿಫ್ಟ್ ಆಗದು
ಕಳೆದ 3 ಲೋಕಸಭಾ ಚುನಾವಣೆಗಳು ಎಪ್ರಿಲ್, ಮೇನಲ್ಲಿ ನಡೆದಿದ್ದವು. ಇದೇ ವೇಳೆ ಐಪಿಎಲ್ ವೇಳಾಪಟ್ಟಿಗಳೂ ನಿಗದಿ ಯಾಗಿದ್ದವು. 2009ರಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಡೀ ಕೂಟವನ್ನೇ ಬಿಸಿಸಿಐ ದಕ್ಷಿಣ ಆಫ್ರಿಕಾಕ್ಕೆ ವರ್ಗಾಯಿಸಿತ್ತು. 2014ರಲ್ಲಿ ಲೋಕಸಭಾ ಚುನಾವಣೆ ನಡೆದಾಗ 19 ಐಪಿಎಲ್ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು. ಈ ಸಲವೂ ಇಂಥದೊಂದು ಸಾಧ್ಯತೆ ಕಂಡು ಬರುತ್ತಿದೆ ಯಾದರೂ ಬಿಸಿಸಿಐ ಇದನ್ನು ತಪ್ಪಿಸಿ ಪೂರ್ತಿ ಐಪಿಎಲ್ ಪಂದ್ಯಾವಳಿಯನ್ನು ಭಾರತದಲ್ಲೇ ನಡೆಸಲು ಚಿಂತಿಸಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.