ಪಂಜಾಬ್ ವರ್ಸಸ್ ಗುಜರಾತ್ : ಅಗರ್ವಾಲ್-ಪಾಂಡ್ಯ ತಂಡಗಳ ಮೇಲಾಟ
Team Udayavani, Apr 8, 2022, 6:40 AM IST
ಮುಂಬಯಿ: ಅಗ್ರ ನಾಲ್ಕರಲ್ಲಿರುವ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡ ಗಳು ಶುಕ್ರವಾರದ ಜಿದ್ದಾಜಿದ್ದಿ ಸ್ಪರ್ಧೆ ಯೊಂದಕ್ಕೆ ಸಾಕ್ಷಿಯಾಗುವ ಸಾಧ್ಯತೆ ದಟ್ಟವಾಗಿದೆ. ಹಾರ್ದಿಕ್ ಪಾಂಡ್ಯ- ಮಾಯಾಂಕ್ ಅಗರ್ವಾಲ್ ನಾಯ ಕತ್ವದ ಪ್ರತಿಷ್ಠೆಗೆ ಇದೊಂದು ಸವಾ ಲಾಗಿರುವುದರಲ್ಲಿ ಅನುಮಾನವಿಲ್ಲ.
ನೂತನ ತಂಡವಾದರೂ ಗುಜ ರಾತ್ ಟೈಟಾನ್ಸ್ ತಾನಾಡಿದ ಎರಡೂ ಪಂದ್ಯಗಳನ್ನು ಗೆದ್ದು ಬೀಗಿದೆ. ಇನ್ನೊಂದೆಡೆ ಪಂಜಾಬ್ 3 ಪಂದ್ಯಗಳಲ್ಲಿ ಎರಡನ್ನು ಗೆದ್ದು ಭರವಸೆ ಮೂಡಿಸಿದೆ. ಪಂಜಾಬ್‌ನ ದುಬಾರಿ ಬ್ಯಾಟರ್-ಆಲ್‌ರೌಂಡರ್ ಲಿಯಮ್ ಲಿವಿಂಗ್‌ಸ್ಟೋನ್ ಮತ್ತು ಗುಜರಾತ್‌ನ ಕಿವೀಸ್ ಸ್ಪೀಡ್‌ಸ್ಟರ್ ಲಾಕಿ ಫರ್ಗ್ಯುಸನ್ ನಡುವಿನ ಮುಖಾಮುಖೀ ಈ ಪಂದ್ಯದ ಆಕರ್ಷಣೆ ಆಗಿರುವ ಸಾಧ್ಯತೆ ಇದೆ. ಪಂದ್ಯ “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ನಡೆಯುವ ಕಾರಣ ರನ್ ಪ್ರವಾಹ ಹರಿದು ಬಂದರೆ ಅಚ್ಚರಿಯೇನಿಲ್ಲ.
ಅಪಾಯಕಾರಿ ಲಿವಿಂಗ್‌ಸ್ಟೋನ್ :
ಆರ್‌ಸಿಬಿಯನ್ನು 5 ವಿಕೆಟ್‌ಗಳಿಂದ ಮಣಿಸಿ ಅಭಿಯಾನ ಆರಂಭಿಸಿದ ಪಂಜಾಬ್ ಕಿಂಗ್ಸ್, ಬಳಿಕ ಕೆಕೆಆರ್ ಕೈಯಲ್ಲಿ 6 ವಿಕೆಟ್‌ಗಳ ಸೋಲನುಭವಿ ಸಿತು. 3ನೇ ಮುಖಾಮುಖೀಯಲ್ಲಿ ಚೆನ್ನೈಗೆ 54 ರನ್ನುಗಳ ಸೋಲುಣಿಸಿ ಟ್ರ್ಯಾಕ್ ಏರಿತು.
ಮಾಯಾಂಕ್ ಅಗರ್ವಾಲ್, ಶಿಖರ್ ಧವನ್, ಭನುಕ ರಾಜಪಕ್ಸ, ಲಿಯಮ್ ಲಿವಿಂಗ್‌ಸ್ಟೋನ್, ಶಾರೂಖ್ ಖಾನ್, ಒಡೀನ್ ಸ್ಮಿತ್ ಅವರನ್ನೊಳಗೊಂಡ ಪಂಜಾಬ್ ಬ್ಯಾಟಿಂಗ್ ಸರದಿ ಅತ್ಯಂತ ಬಲಿಷ್ಠವಾಗಿಯೇ ಗೋಚರಿಸುತ್ತಿದೆ. ಆದರೆ ಚೆನ್ನೈ ಎದುರಿನ ಕೊನೆಯ ಪಂದ್ಯದಲ್ಲಿ ಲಿವಿಂಗ್‌ಸ್ಟೋನ್ ಏಕಾಂಗಿ ಯಾಗಿ ಬ್ಯಾಟಿಂಗ್ ಹೋರಾಟ ಸಂಘಟಿಸಿದ್ದರು (60). ಜಾನಿ ಬೇರ್‌ಸ್ಟೊ ಕೂಡ ರೇಸ್‌ನಲ್ಲಿರುವುದನ್ನು ಮರೆಯುವಂತಿಲ್ಲ. ಎಲ್ಲರೂ ಕ್ಲಿಕ್ ಆದರೆ ಇದೊಂದು ಬಿಗ್ ಸ್ಕೋರಿಂಗ್ ಮ್ಯಾಚ್ ಆಗುವುದು ಖಂಡಿತ.
ಪಂಜಾಬ್ ಬೌಲಿಂಗ್ ಕಾಗಿಸೊ ರಬಾಡ, ರಾಹುಲ್ ಚಹರ್, ಲಿವಿಂಗ್‌ಸ್ಟೋನ್, ಆರ್ಷದೀಪ್, ವೈಭವ್ ಅರೋರಾ ಅವರನ್ನು ನೆಚ್ಚಿಕೊಂಡಿದೆ. ಇವರೆಲ್ಲರೂ ಚೆನ್ನೈ ವಿರುದ್ಧ ವಿಕೆಟ್ ಕೀಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಗುಜರಾತ್ ಸವಾಲು ಹೆಚ್ಚು ಕಠಿನ. ಬ್ರೆಬೋರ್ನ್ನಲ್ಲೂ ಬೌಲಿಂಗ್ ಕ್ಲಿಕ್ ಆಗಲಿದೆ ಎಂದು ಹೇಳಲು ಧೈರ್ಯ ಸಾಲದು.
ಗುಜರಾತ್ ಬೌಲಿಂಗ್ ಬಲಿಷ್ಠ :
ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಪಾಲಿಗೆ ಪ್ರತಿಯೊಂದೂ ಪ್ರತಿಷ್ಠೆಯ ಪಂದ್ಯವಾಗಿದೆ. ಇಲ್ಲಿ ಯಶಸ್ಸು ಸಾಧಿಸುವ ಮೂಲಕ ಟೀಮ್ ಇಂಡಿಯಾಕ್ಕೆ ಮರಳುವುದು ಅವರ ಉದ್ದೇಶ. ಹೀಗಾಗಿ ಬ್ಯಾಟಿಂಗ್, ಬೌಲಿಂಗ್ ಜತೆಗೆ ಅವರ ನಾಯಕತ್ವವೂ ಇಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ಮತ್ತೂಂದು ನೂತನ ತಂಡವಾದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿ ಗುಜರಾತ್ ತನ್ನ ಅಭಿಯಾನ ಆರಂಭಿಸಿತ್ತು. ಇಲ್ಲಿ ಚೇಸಿಂಗ್‌ಗೆ ಲಭಿಸಿದ್ದು 159 ರನ್ ಮಾತ್ರ. ಬಲಿಷ್ಠ ಡೆಲ್ಲಿ ವಿರುದ್ಧ 171 ರನ್ ಪೇರಿಸಿ ಇದನ್ನು 14 ರನ್ನುಗಳಿಂದ ರೋಚಕವಾಗಿ ಗೆದ್ದು ಬಂದಿತು. ಪೃಥ್ವಿ ಶಾ, ಟಿಮ್ ಸೀಫರ್ಟ್, ಮನ್‌ದೀಪ್ ಸಿಂಗ್ ಅವರನ್ನು ಫರ್ಗ್ಯುಸನ್-ಪಾಂಡ್ಯ ಜೋಡಿ ಅಗ್ಗಕ್ಕೆ ಉರುಳಿಸಿ ತಂಡಕ್ಕೆ ಮೇಲುಗೈ ಒದಗಿಸಿತ್ತು. ಮೊಹಮ್ಮದ್ ಶಮಿ ಮತ್ತು ರಶೀದ್ ಖಾನ್ ಬೌಲಿಂಗ್ ಸಾಮರ್ಥ್ಯ ಏನೆಂಬುದು ತಿಳಿದಿದೆ. ವರುಣ್ ಆರೋನ್, ವಿಜಯ್ ಶಂಕರ್ ಬೌಲಿಂಗ್ ಸರದಿಯ ಮತ್ತಿಬ್ಬರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.