IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Team Udayavani, Nov 18, 2024, 12:58 PM IST
ನವದೆಹಲಿ: ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ (IPL) ನ.24, 25ರಂದು ಸೌದಿ ಅರೆಬಿಯಾದಲ್ಲಿ ನಡೆಯುವ ಮೆಗಾ ಹರಾಜಿಗಾಗಿ (Mega Auction) ನೋಂದಾಯಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐ ಅಂತಿಮಗೊಳಿಸಿದ್ದು, 13 ವರ್ಷದ ವೈಭವ್ ಸೂರ್ಯವಂಶಿ (Vaibhav Suryavamshi), ಹರಾಜು ಪಟ್ಟಿಯಲ್ಲಿರುವ ಅತೀ ಕಿರಿಯ ಆಟಗಾರನಾಗಿ ಗುರುತಿಸಿ ಕೊಂಡಿದ್ದಾರೆ.
ಬಿಹಾರದ ವೈಭವ್ ಸೂರ್ಯವಂಶಿ ಯುಎಇಯಲ್ಲಿ ನಡೆಯಲಿರುವ ಮುಂಬರುವ 2024ರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಂಡರ್-19 ಏಷ್ಯಾಕಪ್ ಗಾಗಿ ಭಾರತ ಅಂಡರ್-19 ಭಾರತ ತಂಡದಲ್ಲಿ ಇತ್ತೀಚೆಗೆ ಸ್ಥಾನ ಪಡೆದಿದ್ದರು. ಐಪಿಎಲ್ ಲೀಗ್‌ನ ಇತಿಹಾಸದಲ್ಲಿ ಹರಾಜಿಗಾಗಿ ತನ್ನನ್ನು ನೋಂದಾಯಿಸಿಕೊಂಡ ಯುವ ಆಟಗಾರ ಎಂಬ ಹೆಗ್ಗಳಿಕೆಗೆ ಸೂರ್ಯವಂಶಿ ಪಾತ್ರರಾಗಿದ್ದಾರೆ.
ಮೆಗಾ ಹರಾಜಿನಲ್ಲಿ 13ರ ಸೂರ್ಯವಂಶಿಗೆ ಯಾವುದೇ ತಂಡ ಬಿಡ್ ಮಾಡುತ್ತದೋ ಇಲ್ಲವೋ, ಇನ್ನೂ ನೋಡಬೇಕಾಗಿದೆ, ಆದರೆ ಅವರು ಈಗಾಗಲೇ ಟಿ 20 ಲೀಗ್‌ನ ಇತಿಹಾಸದ ಭಾಗವಾಗಿದ್ದಾರೆ.
2011 ರಲ್ಲಿ ಜನಿಸಿದ ವೈಭವ್ 4 ನೇ ವಯಸ್ಸಿನಲ್ಲಿ ತಮ್ಮ ಕ್ರಿಕೆಟ್ ಪ್ರತಿಭೆಯನ್ನು ತೋರಿಸಲು ಪ್ರಾರಂಭಿಸಿದ. ವೈಭವ್ ತಂದೆ ಸಂಜೀವ್ ಅವರ ಉತ್ಸಾಹವನ್ನು ಗಮನಿಸಿದರು. ಮನೆಯ ಬಳಿ ಮಗನಿಗಾಗಿ ಸಣ್ಣ ಆಟದ ಮೈದಾನ ನಿರ್ಮಿಸಿದ್ದರು.
9 ನೇ ವಯಸ್ಸಿನಲ್ಲಿ, ವೈಭವ್ ಅವರ ತಂದೆ ಅವರನ್ನು ಹತ್ತಿರದ ಸಮಸ್ತಿಪುರದ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ಕ್ರಿಕೆಟ್ ಪ್ರತಿಭೆಯ ವಿಷಯದಲ್ಲಿ ವೈಭವ್ ತನ್ನ ವಯಸ್ಸಿಗಿಂತ ಸಾಕಷ್ಟು ಮುಂದಿದಿದ್ದರು.
“ಅಲ್ಲಿ ಎರಡೂವರೆ ವರ್ಷಗಳ ಕಾಲ ಅಭ್ಯಾಸ ಮಾಡಿದ ನಂತರ, ನಾನು ವಿಜಯ್ ಮರ್ಚೆಂಟ್ ಟ್ರೋಫಿಗಾಗಿ ಅಂಡರ್ -16 ಟ್ರಯಲ್ಸ್ ನೀಡಿದ್ದೇನೆ” ಎಂದು ಹೇಳಿದರು. “ನನ್ನ ವಯಸ್ಸಿನ ಕಾರಣ ನಾನು ಸ್ಟ್ಯಾಂಡ್‌ಬೈನಲ್ಲಿದ್ದೆ. ದೇವರ ದಯೆಯಿಂದ ನಾನು ಮಾಜಿ ರಣಜಿ ಆಟಗಾರ ಮನೀಶ್ ಓಜಾ ಸರ್ ಅವರ ಅಡಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದೆ. ಅವರು ನನಗೆ ಬಹಳಷ್ಟು ಕಲಿಸಿದ್ದಾರೆ ಮತ್ತು ನಾನು ಇಂದು ಏನಾಗಿದ್ದರೂ ಅದಕ್ಕೆ ಅವರೇ ಕಾರಣ” ಎನ್ನುತ್ತಾರೆ ವೈಭವ್ ಸೂರ್ಯವಂಶಿ.
ಬಿಹಾರ ಪರ ವಿನೂ ಮಂಕಡ್ ಟ್ರೋಫಿಯಲ್ಲಿ ಆಡಿದಾಗ ವೈಭವ್ ಕೇವಲ 12 ವರ್ಷ. ಕೇವಲ ಐದು ಪಂದ್ಯಗಳಲ್ಲಿ ಸುಮಾರು 400 ರನ್ ಗಳಿಸಿದರು. ಇದರಿಂದ ಬಿಹರ್ ಕ್ರಿಕೆಟ್‌ನಲ್ಲಿ ಬಹುಬೇಗ ಏರಿಕೆ ಕಂಡರು.
ಅವರ ಇತ್ತೀಚಿನ ಸಾಧನೆಯೆಂದರೆ, ಚೆನ್ನೈನಲ್ಲಿ ನಡೆದ ನಾಲ್ಕು ದಿನಗಳ ಪಂದ್ಯದಲ್ಲಿ ಆಸ್ಟ್ರೇಲಿಯಾದ U-19 ತಂಡದ ವಿರುದ್ಧ 58 ಎಸೆತಗಳ ಬಿರುಸಿನ ಶತಕ. ಇಲ್ಲಿ ಅವರು ದೊಡ್ಡ ಹೆಸರು ಮಾಡಿದರು.
ವೈಭವ್ ಅವರು ನವೆಂಬರ್ 2023 ರಲ್ಲಿ ಆಂಧ್ರಪ್ರದೇಶದ ಮುಲಪಾಡುದಲ್ಲಿ ನಡೆದ ಅಂಡರ್-19 ಚತುರ್ಭುಜ ಸರಣಿಗಾಗಿ ಭಾರತ ಬಿ U-19 ತಂಡದ ಭಾಗವಾಗಿದ್ದರು. ಸರಣಿಯಲ್ಲಿ ಅಷ್ಟೇನೂ ಪ್ರದರ್ಶನ ನೀಡಲಿಲ್ಲ.
ವೈಭವ್ ಈ ವರ್ಷದ ಜನವರಿಯಲ್ಲಿ ಪಾಟ್ನಾದಲ್ಲಿ ಮುಂಬೈ ವಿರುದ್ಧ ಬಿಹಾರದ ರಣಜಿ ಟ್ರೋಫಿ 2023-24 ಎಲೈಟ್ ಗ್ರೂಪ್ ಬಿ ಹಣಾಹಣಿಯಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. 12 ವರ್ಷ ಮತ್ತು 284 ದಿನಗಳಲ್ಲಿ, ಅವರು 1986 ರಿಂದ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯವನ್ನು ಮಾಡಿದ ಅತ್ಯಂತ ಕಿರಿಯ ಭಾರತೀಯರಾದರು. ಬಿಹಾರಕ್ಕಾಗಿ ರಣಜಿ ಟ್ರೋಫಿ ಆಟದಲ್ಲಿ ಕಾಣಿಸಿಕೊಂಡ ಎರಡನೇ ಕಿರಿಯ ಆಟಗಾರರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.