IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Team Udayavani, Nov 25, 2024, 10:57 AM IST
ಜೆಡ್ಡಾ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಮೆಗಾ ಹರಾಜು ಸೌದಿ ಆರೇಬಿಯಾದ ಜೆಡ್ಡಾದಲ್ಲಿ ಆರಂಭವಾಗಿದೆ. ರವಿವಾರ (ನ.25) ಮೊದಲ ದಿನದ ಹರಾಜು ಮುಗಿದಿದ್ದು, ದಾಖಲೆಗಳು ಮುರಿದವು.
ಮೊದಲ ದಿನದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಲೆಕ್ಕಾಚಾರದ ಬಿಡ್ಡಿಂಗ್ ನಡೆಸಿತು. ಆರಂಭದಲ್ಲಿ ದೊಡ್ಡ ಹೆಸರುಗಳಿಗೆ ಬಿಡ್ ಮಾಡುವ ಗೋಜಿಗೆ ಹೋಗದ ಆರ್ ಸಿಬಿ ಬಳಿಕ ಕೆಲವರನ್ನು ಖರೀದಿಸಿತು.
ಕನ್ನಡಿಗ ಕೆಎಲ್ ರಾಹುಲ್ ಅವರು ಮತ್ತೆ ಆರ್ ಸಿಬಿ ಸೇರಬೇಕು ಎಂದು ಅಭಿಮಾನಿಗಳ ಕೂಗಾಗಿತ್ತು. ಆರಂಭದಲ್ಲಿ ಬಿಡ್ ಮಾಡಿದ ಆರ್ ಸಿಬಿ ಬಳಿಕ ಹಿಂದೆ ಸರಿಯಿತು. ಹೀಗಾಗಿ ರಾಹುಲ್ 14 ಕೋಟಿ ರೂ ಗೆ ಡೆಲ್ಲಿ ಪಾಲಾದರು.
ಮೊದಲ ದಿನದ ಹರಾಜಿನಲ್ಲಿ ಆರ್ ಸಿಬಿ ಕೇವಲ ಆರು ಆಟಗಾರರನ್ನು ಖರೀದಿ ಮಾಡಿದೆ. ಮೂವರು ಭಾರತೀಯ ಮತ್ತು ಮೂರು ಮೂವರು ವಿದೇಶಿ ಆಟಗಾರರನ್ನು ಖರೀದಿಸಲಾಗಿದೆ. ಇನ್ನೂ 16 ಸ್ಥಾನಗಳು ಬಾಕಿಯಿದ್ದು, ಅದರಲ್ಲಿ ಐದು ವಿದೇಶಿ ಆಟಗಾರರನ್ನು ಖರೀದಿ ಮಾಡಬಹುದು. ಆರ್ ಸಿಬಿ ಪರ್ಸ್ ನಲ್ಲಿ ಇನ್ನೂ 30.65 ಕೋಟಿ ರೂ ಹಣವಿದೆ.
“Let’s be honest. RCB has never won the IPL and we’ve always gone with a strategy of spending a large amount of money on a small number of players. And we wanted to change that to build a more balanced squad this year.”
Mo Bobat talks about our approach on Day 1 of the Tata IPL… pic.twitter.com/uwtx8ftWmR
— Royal Challengers Bengaluru (@RCBTweets) November 24, 2024
ಹರಾಜಿಗೂ ಮೊದಲು ಅರ್ ಸಿಬಿ ಮೂವರನ್ನು ತನ್ನಲ್ಲಿ ಉಳಿಸಿಕೊಂಡಿತ್ತು. ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ಯಶ್ ದಯಾಳ್ ಅವರನ್ನು ಉಳಿಸಿಕೊಳ್ಳಲಾಗಿತ್ತು.
ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ.
ವಿರಾಟ್ ಕೊಹ್ಲಿ
ರಜತ್ ಪಟಿದಾರ್
ಯಶ್ ದಯಾಳ್
ಲಿಯಾಮ್ ಲಿವಿಂಗ್ ಸ್ಟೋನ್ (ವಿ)
ಜಿತೇಶ್ ಶರ್ಮಾ
ಜೋಶ್ ಹೇಜಲ್‌ವುಡ್ (ವಿ)
ಫಿಲಿಪ್ ಸಾಲ್ಟ್ (ವಿ)
ಸುಯಾಶ್ ಶರ್ಮಾ
ರಸಿಕ್ ದರ್ ಸಲಾಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.