IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Team Udayavani, Apr 27, 2024, 6:20 AM IST

1-qweqewqe

ಹೊಸದಿಲ್ಲಿ: ಕಳೆದ 4 ಪಂದ್ಯಗಳಲ್ಲಿ ಮೂರನ್ನು ಗೆದ್ದು ಚೇತರಿಕೆ ಕಂಡು ಆರಕ್ಕೇರಿರುವ ಡೆಲ್ಲಿ ಕ್ಯಾಪಿಟಲ್ಸ್‌ ಶನಿವಾರ ತವರಿನ “ಕೋಟ್ಲಾ’ ಅಂಗಳದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಣಸಲಿದೆ. ಪಂತ್‌ ಪಡೆಗೆ ಇದು ಸೇಡಿನ ಪಂದ್ಯ. “ವಾಂಖೇಡೆ’ಯಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿ ಮುಗ್ಗರಿಸಿತ್ತು.

ಮುಂಬೈ ಕೂಡ 4 ಪಂದ್ಯಗಳಲ್ಲಿ ಮೂರನ್ನು ಗೆದ್ದಿದೆ. ಈ 3 ಜಯಕ್ಕಾಗಿ ಒಟ್ಟು 8 ಪಂದ್ಯಗಳನ್ನಾಡಿದ್ದು, 8ನೇ ಸ್ಥಾನದಲ್ಲಿದೆ. ಪ್ಲೇ ಆಫ್ ರೇಸ್‌ನಲ್ಲಿ ಕಾಣಿಸಿಕೊಳ್ಳಬೇಕಾದರೆ ಮುಂಬೈಗೂ ಗೆಲುವು ಅಗತ್ಯ.

ರಿಷಭ್‌ ಪಂತ್‌ ಫಾರ್ಮ್
ನಾಯಕ ರಿಷಭ್‌ ಪಂತ್‌ ಅವರ ಬ್ಯಾಟಿಂಗ್‌ ಫಾರ್ಮ್ ಡೆಲ್ಲಿ ಪಾಲಿಗೊಂದು ಪ್ಲಸ್‌ ಪಾಯಿಂಟ್‌. ಅವರು ಪಂದ್ಯದಿಂದ ಪಂದ್ಯಕ್ಕೆ ನೂತನ ಎತ್ತರ ತಲುಪುತ್ತಲೇ ಇದ್ದಾರೆ. ಇದಕ್ಕೆ ಕೋಟ್ಲಾದಲ್ಲೇ ಆಡಲಾದ ಗುಜರಾತ್‌ ಎದುರಿನ ಕಳೆದ ಪಂದ್ಯವೇ ಅತ್ಯುತ್ತಮ ನಿದರ್ಶನ. ಡೆಲ್ಲಿ 4ಕ್ಕೆ 224 ರನ್‌ ಪೇರಿಸಿತ್ತು. ಇದರಲ್ಲಿ ಪಂತ್‌ ಪಾಲು 43 ಎಸೆತಗಳಲ್ಲಿ ಅಜೇಯ 88 ರನ್‌ (5 ಫೋರ್‌, 3 ಸಿಕ್ಸರ್‌). ಭಡ್ತಿ ಪಡೆದು ಬಂದ ಅಕ್ಷರ್‌ ಪಟೇಲ್‌, ಟ್ರಿಸ್ಟನ್‌ ಸ್ಟಬ್ಸ್ ಕೂಡ ಚೇತೋಹಾರಿ ಆಟವಾಡಿದ್ದರು.

ಸಮಸ್ಯೆ ಇರುವುದು ಓಪನಿಂಗ್‌ನಲ್ಲಿ. ಡೇವಿಡ್‌ ವಾರ್ನರ್‌ ಬದಲು ಆರಂಭಿಕನಾಗಿ ಇಳಿಯುತ್ತಿರುವ ಜಾಕ್‌ ಫ್ರೆàಸರ್‌ ಮೆಕ್‌ಗರ್ಕ್‌ ಸಿಡಿಯು ತ್ತಿದ್ದರೂ ಪೃಥ್ವಿ ಶಾ ಪರದಾಡುತ್ತಿದ್ದಾರೆ. ಶೈ ಹೋಪ್‌ ಕೂಡ ಭರವಸೆ ಮೂಡಿ ಸಿಲ್ಲ. ಹೋಪ್‌ ಬದಲು ವಾರ್ನರ್‌ ಮರಳುವ ಸಾಧ್ಯತೆ ಇದೆ.
ಕುಲದೀಪ್‌ ಯಾದವ್‌-ಅಕ್ಷರ್‌ ಪಟೇಲ್‌ ಜೋಡಿಯ ಸ್ಪಿನ್‌ ಹೊರತು ಪಡಿಸಿದರೆ, ಡೆಲ್ಲಿ ಬೌಲಿಂಗ್‌ ಅಷ್ಟೇನೂ ಘಾತಕವಲ್ಲ. ನೋರ್ಜೆ ಅವರಂತೂ ಧಾರಾಳಿ ಆಗುತ್ತಿದ್ದಾರೆ. ಮೊನ್ನೆ ಗುಜರಾತ್‌ 8ಕ್ಕೆ 220 ರನ್‌ ಬಾರಿಸಿ ಭೀತಿ ಹುಟ್ಟಿಸಿತ್ತು. ಡೆಲ್ಲಿ ಗೆಲುವಿನ ಅಂತರ 4 ರನ್‌ ಮಾತ್ರ.

ಮುಂಬೈ ಬ್ಯಾಟಿಂಗ್‌ 50-50
ಮುಂಬೈ ಬ್ಯಾಟಿಂಗ್‌ ಸರದಿ 50-50 ಫಾರ್ಮ್ನಲ್ಲಿದೆ. ರೋಹಿತ್‌, ಸೂರ್ಯ, ತಿಲಕ್‌ ವರ್ಮ ಓಕೆ. ಆದರೆ ಸ್ಥಿರತೆ ಇಲ್ಲ. ಹಾಗೆಯೇ ಟಿಮ್‌ ಡೇವಿಡ್‌, ಇಶಾನ್‌ ಕಿಶನ್‌, ನಾಯಕ ಹಾರ್ದಿಕ್‌ ಪಾಂಡ್ಯ ಅವರ ಕೊಡುಗೆ ಏನೂ ಸಾಲದು.

ಮುಂಬೈ ಬೌಲಿಂಗ್‌ ವಿಭಾಗ ನಿಜಕ್ಕೂ ದುರ್ಬಲ. 13 ವಿಕೆಟ್‌ ಉರುಳಿಸಿರುವ ಬುಮ್ರಾ ಮಾತ್ರ ಭರವಸೆ ಮೂಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಗೆರಾಲ್ಡ್‌ ಕೋಟ್ಜಿ, ತುಷಾರ, ನಬಿ ಪ್ರಯತ್ನ ಏನೂ ಸಾಲದು. ಕಳೆದ ಪಂದ್ಯದಲ್ಲಿ ರಾಜಸ್ಥಾನ್‌ ಒಂದೇ ವಿಕೆಟಿಗೆ 183 ರನ್‌ ಬಾರಿಸಿ ಗೆದ್ದದ್ದು ಮುಂಬಯಿ ಬೌಲಿಂಗ್‌ ದೌರ್ಬಲ್ಯದ ಕತೆಯನ್ನು ಹೇಳುತ್ತದೆ!

ಮೊದಲ ಸುತ್ತಿನಲ್ಲಿ…
ಎ. 7ರಂದು “ವಾಂಖೇಡೆ’ ಯಲ್ಲಿ ನಡೆದ ಪಂದ್ಯ ದೊಡ್ಡ ಮೊತ್ತದ ಮೇಲಾಟವಾಗಿತ್ತು. ಮುಂಬೈ 5ಕ್ಕೆ 234 ರನ್‌ ಪೇರಿಸಿ ದರೆ, ಬೆನ್ನಟ್ಟಿ ಬಂದ ಡೆಲ್ಲಿ 8ಕ್ಕೆ 205 ರನ್‌ ಗಳಿಸಿತ್ತು. ಮುಂಬೈ ಯಾವುದೇ ಅರ್ಧ ಶತಕದಕ ನೆರವೂ ಇಲ್ಲದೆ ಇನ್ನೂರರ ಗಡಿ ದಾಟಿದ್ದರೆ, ಡೆಲ್ಲಿ ಪರ ಟ್ರಿಸ್ಟನ್‌ ಸ್ಟಬ್ಸ್ (71) ಮತ್ತು ಪೃಥ್ವಿ ಶಾ (66) ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದರು.

ಮಿಚೆಲ್‌ ಮಾರ್ಷ್‌ ಬದಲು ಗುಲ್ಬದಿನ್‌ ನೈಬ್‌
ಗಾಯಾಳು ಮಿಚೆಲ್‌ ಮಾರ್ಷ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಿಂದ ಬೇರ್ಪಟ್ಟಿದ್ದು, ಇವರ ಸ್ಥಾನಕ್ಕೆ ಅಫ್ಘಾನಿಸ್ಥಾನದ ಆಲ್‌ರೌಂಡರ್‌ ಗುಲ್ಬದಿನ್‌ ನೈಬ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

ಮೀಡಿಯಂ ಪೇಸ್‌ ಬೌಲಿಂಗ್‌ ಆಲ್‌ರೌಂಡರ್‌ ಆಗಿರುವ ಗುಲ್ಬದಿನ್‌ ನೈಬ್‌ ಅಫ್ಘಾನ್‌ ಪರ 82 ಏಕದಿನ ಹಾಗೂ 62 ಟಿ20 ಪಂದ್ಯಗಳನ್ನಾಡಿದ್ದಾರೆ. 50 ಲಕ್ಷ ರೂ. ಮೂಲ ಬೆಲೆಗೆ ಇವರನ್ನು ಡೆಲ್ಲಿ ಫ್ರಾಂಚೈಸಿ ಖರೀದಿಸಿತು.

ಈ ವರ್ಷಾರಂಭದ ಭಾರತ ಪ್ರವಾಸದ ಟಿ20 ಸರಣಿ ವೇಳೆ ಗುಲ್ಬದಿನ್‌ ನೈಬ್‌ ಇಂದೋರ್‌ ಮತ್ತು ಬೆಂಗಳೂರು ಪಂದ್ಯಗಳಲ್ಲಿ ಅರ್ಧ ಶತಕ ಸಿಡಿಸಿ ಗಮನ ಸೆಳೆದಿದ್ದರು.

ಮಿಚೆಲ್‌ ಮಾರ್ಷ್‌ ಸ್ನಾಯು ಸೆಳೆತಕ್ಕೆ ಸಿಲುಕಿದ್ದು, ಡೆಲ್ಲಿ ಪರ ಮೊದಲ 4 ಪಂದ್ಯಗಳನ್ನಾಡಿದ್ದರು. ಆದರೆ ಪ್ರಭಾವಶಾಲಿ ಪ್ರದರ್ಶವನ್ನೇನೂ ನೀಡಿರಲಿಲ್ಲ.

ಟಾಪ್ ನ್ಯೂಸ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

M Chinnaswamy Stadium

M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?

ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.