IPL; ಇಂದು ರಾಜಸ್ಥಾನ್ ಗೆ ಮುಂಬೈ ಸವಾಲು: ತಿರುಗೇಟು ನೀಡಲು ಸಿದ್ಧತೆ
Team Udayavani, Apr 22, 2024, 6:28 AM IST
ಜೈಪುರ : ಗೆಲುವಿನ ಉತ್ಸಾಹದೊಂದಿಗೆ ಆಡು ತ್ತಿರುವ ಮುಂಬೈ ಇಂಡಿಯನ್ಸ್ ತಂಡವು ಸೋಮವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿ ರಾಜಸ್ಥಾನ್ ರಾಯಲ್ಸ್ ತಂಡದ ಸವಾಲನ್ನು ಎದುರಿಸಲಿದ್ದು ಜಯ ದಾಖಲಿಸುವ ನಿರೀಕ್ಷೆಯಲ್ಲಿದೆ.
ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯಭೇರಿ ಬಾರಿಸಿರುವ ಮುಂಬೈ ತಂಡವು ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ ಸಾಧನೆ ಮಾಡಿದೆ. ಕಳಪೆ ಆಟದೊಂದಿಗೆ ಈ ಋತು ಆರಂಭಿಸಿದ್ದ ಮುಂಬೈ ಇದೀಗ ಚೇತರಿಸಿಕೊಂಡಿದ್ದು ಉತ್ತಮ ಹೋರಾಟ ಸಂಘಟಿಸುತ್ತಿದೆ. ಬೌಲಿಂಗ್ ಪಾಳಯದ ಸಮಸ್ಯೆಯನ್ನು ಬಗೆಹರಿಸಿದರೆ ಮುಂಬೈ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಇದೇ ವೇಳೆ ಪ್ರಚಂಡ ಫಾರ್ಮ್ನಲ್ಲಿರುವ ರಾಜಸ್ಥಾನ ತಂಡವು ಆಡಿದ 7 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಲೀಗ್‌ನ ಮೊದಲ ಸುತ್ತಿನ ಹೋರಾಟದಲ್ಲಿ ರಾಜ ಸ್ಥಾನಕ್ಕೆ 6 ವಿಕೆಟ್‌ಗಳಿಂದ ಸೋತಿದ್ದ ಮುಂಬೈ ಸೋಮ ವಾರದ ರಿವರ್ಸ್ ಪಂದ್ಯದಲ್ಲಿ ತಿರುಗೇಟು ನೀಡಲು ಹಾತೊರೆ ಯುತ್ತಿದೆ. ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡಿದರೆ ಮುಂಬೈ ಗೆಲ್ಲಬಹುದು.
ಮುಂಬೈ ತಂಡವು ಈ ಹಿಂದಿನ ಪಂದ್ಯದಲ್ಲಿ ಪಂಜಾಬ್ ತಂಡವನ್ನು 9 ರನ್ನಿನಿಂದ ಸೋಲಿಸಲು ಯಶಸ್ವಿಯಾಗಿತ್ತು. ಕೊನೆ ಹಂತದಲ್ಲಿ ಅಶುತೋಷ್ ಶರ್ಮ ಸಿಡಿದರೂ ಮುಂಬೈಯ ಬಿಗು ದಾಳಿಯಿಂದಾಗಿ ತಂಡ ಗೆಲುವು ಕಾಣುವಂತಾಯಿತು. ಈ ಗೆಲುವಿಗೆ ಜಸ್‌ಪ್ರೀತ್ ಬುಮ್ರಾ ಕೊಡುಗೆ ಬಹಳಷ್ಟಿತ್ತು. ತಂಡದ ಗೆಲುವಿನ ರೂವಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರು ಈ ಪಂದ್ಯದಲ್ಲಿ ಮೂರು ವಿಕೆಟ್ ಕಿತ್ತು ಗಮನ ಸೆಳೆದಿದ್ದರು.
ರಾಜಸ್ಥಾನ ಬಲಿಷ್ಠ
ರಾಜಸ್ಥಾನ ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ. ಮೊದಲ ಸುತ್ತಿನಲ್ಲಿ ಟ್ರೆಂಟ್ ಬೌಲ್ಟ್, ಆವೇಶ್ ಅವರ ಉತ್ತಮ ನಿರ್ವಹಣೆಯಿಂದ ರಾಜಸ್ಥಾನ ತಂಡವು ಮುಂಬೈ ವಿರುದ್ಧ ಆರು ವಿಕೆಟ್‌ಗಳ ಗೆಲುವು ದಾಖಲಿಸಿತ್ತು.
ಪಿಚ್ ವರದಿ
ಇಲ್ಲಿನ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಉತ್ತಮವಾಗಿದೆ. ಈ ಋತುವಿನಲ್ಲಿ ಇಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ತಂಡಗಳು 180ಕ್ಕಿಂತ ಹೆಚ್ಚಿನ ರನ್ ಗಳಿಸಿವೆ. ಬಿಸಿಲಿನ ವಾತಾವರಣ ಇದ್ದು ಸಂಜೆಯ ವೇಳೆ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಳೆ ಬರುವ ಸಾಧ್ಯತೆಯಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Childhood Days: ಮರಳಿ ಬಾರದ ಬಾಲ್ಯ ಜೀವನ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.