ಐಪಿಎಲ್ ನಲ್ಲಿ ಬೆಳಕಿಗೆ ಬಂದ ಹೊಸ ಪ್ರತಿಭೆ: ವೆಂಕಟೇಶ್ ಅಯ್ಯರ್ ಎಂಬ ಅಚ್ಚರಿ
Team Udayavani, Sep 25, 2021, 9:25 AM IST
ನವದೆಹಲಿ: ಐಷಾರಾಮಿ ಟಿ20 ಲೀಗ್ ಟೂರ್ನಿಯಾಗಿರುವ ಐಪಿಎಲ್ ಅನೇಕ ಹೊಸ ಪ್ರತಿಭೆಗಳನ್ನು ಬೆಳಕಿಗೆ ತಂದ ಹೆಗ್ಗಳಿಕೆ ಹೊಂದಿದೆ. ಯುಎಇ ಆವೃತ್ತಿಯ ಸೇರ್ಪಡೆ ವೆಂಕಟೇಶ್ ಅಯ್ಯರ್.
ಕೆಕೆಆರ್‌ನ ಎಡಗೈ ಓಪನರ್ ವೆಂಕ ಟೇಶ್ ಅಯ್ಯರ್ ತಮ್ಮ ಹಾರ್ಡ್ ಹಿಟ್ಟಿಂಗ್ ಬ್ಯಾಟಿಂಗ್ ಮೂಲಕ ಕೇವಲ ಎರಡೇ ಪಂದ್ಯಗಳಲ್ಲಿ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿದ್ದಾರೆ. ಘಟಾನುಘಟಿ ಬೌಲರ್‌ಗಳ ಎಸೆತಗಳನ್ನೂ ನಿರ್ಭೀತಿಯಿಂದ ಬಡಿದಟ್ಟುವ ಮೂಲಕ ಭಾರೀ ಸಂಚಲನ ಮೂಡಿಸುತ್ತಿದ್ದಾರೆ.
“ನನಗೆ ಗಂಗೂಲಿಯೇ ಮಾದರಿ ಆಟಗಾರ. ಅವರು ಮೊದಲ ಸಲ ನಾಯಕನಾದ ತಂಡ ವನ್ನು ಪ್ರತಿನಿಧಿಸುವುದಕ್ಕೆ ಹೆಮ್ಮೆ ಆಗುತ್ತಿದೆ. ಬಲಗೈ ಆಟಗಾರನಾಗಿದ್ದ ನಾನು ಗಂಗೂಲಿಯಿಂದ ಸ್ಫೂರ್ತಿ ಪಡೆದು ಎಡಗೈ ಬ್ಯಾಟ್ಸ್‌ಮನ್ ಆದೆ’ ಎಂದು ಹೇಳುವ ಐಯ್ಯರ್‌ಗೆ ಈ ಐಪಿಎಲ್ ಕ್ರಿಕೆಟ್ ಭವಿಷ್ಯದ ಹೆಬ್ಟಾಗಿಲಾಗಿದೆ.
ನಿರ್ಭೀತ ಬ್ಯಾಟಿಂಗ್: ಆರ್‌ಸಿಬಿ ವಿರುದ್ಧ ಐಪಿಎಲ್ ಪದಾರ್ಪಣೆ ಮಾಡಿದಾಗ ಯಾರಪ್ಪ ಈ ವೆಂಕಟೇಶ್ ಐಯ್ಯರ್ ಎಂದು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದು ಸಹಜ. ಕೇವಲ 27 ಎಸೆತಗಳಲ್ಲಿ ಅಜೇಯ 41 ರನ್ ಬಾರಿಸಿದಾಗ ಎಲ್ಲರೂ ಇವರನ್ನು ಬೆರಗು ಗಣ್ಣಿನಿಂದ ನೋಡಿದರು. ಬಳಿಕ ಮುಂಬೈ ವಿರುದ್ಧವೂ ಕೇವಲ 30 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 53 ರನ್ ಬಾರಿಸಿ ಕೆಕೆಆರ್ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
ಇದನ್ನೂ ಓದಿ:ಬೆತ್ ಮೂನಿ ಅಜೇಯ ಸೆಂಚುರಿ; ಆಸ್ಟ್ರೇಲಿಯ ಸರಣಿ ಜಯಭೇರಿ
ವೆಂಕಟೇಶ್ ಮಧ್ಯಪ್ರದೇಶ ಮೂಲದ 25 ವರ್ಷದ ಎಡಗೈ ಬ್ಯಾಟ್ಸ್‌ಮನ್ ಹಾಗೂ ಬೌಲಗೈ ಮಧ್ಯಮ ವೇಗಿ. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪಂಜಾಬ್ ಎದುರು 198 ರನ್ ಸಿಡಿಸಿದಾಗ ಇವರ ಹೆಸರು ರಾರಾಜಿಸತೊಡಗಿತು.
ರಜನೀಕಾಂತ್ ಅಭಿಮಾನಿ: ಐಯ್ಯರ್ ಕ್ರಿಕೆಟಿಗನಾದದ್ದೇ ಆಕಸ್ಮಿಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಡುತ್ತಿದ್ದರೂ ಇದರಲ್ಲಿಯೇ ಮುಂದುವರಿಯುವ ಕನಸು ಕಂಡಿರಲಿಲ್ಲ. ಬದಲಾಗಿ ಬಿಕಾಂ ಮುಗಿಸಿ ಎಂಬಿಎ ಪದವಿ ಗಳಿಸಿದ್ದಾರೆ. ಇಂದೋರ್ ತಮಿಳು ಭಾಷಿಕ ಕುಟುಂಬದಲ್ಲಿ ಜನಿಸಿರುವ ಐಯ್ಯರ್ ರಜನೀಕಾಂತ್ ಅವರ ಅಪ್ಪಟ ಅಭಿಮಾನಿ. ತನ್ನ ಕ್ರಿಕೆಟ್ ಆಲೋಚನೆಗಳನ್ನು ಪ್ರೋತ್ಸಾಹಿಸಿದ್ದು ತಾಯಿ ಎಂದು ವೆಂಕಟೇಶ್ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.