IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

ಧೋನಿಗಾಗಿ ನಿಯಮ ಬದಲಾವಣೆ ಮಾಡಿತಾ ಬಿಸಿಸಿಐ?

Team Udayavani, Sep 29, 2024, 8:21 AM IST

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

ಮುಂಬೈ: ಐಪಿಎಲ್‌ (IPL) ಸಭೆಯಲ್ಲಿ ಇನ್ನೂ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.ಅತ್ಯಂತ ಕುತೂಹಲಕ್ಕೆ ಕಾರಣವಾಗಿದ್ದ ಆಟಗಾರರ ಉಳಿಕೆ ನಿಯಮದ ಬಗ್ಗೆ ಇದ್ದ ಪ್ರಶ್ನೆಗಳು ಇತ್ಯರ್ಥಗೊಂಡಿವೆ. ಫ್ರಾಂಚೈಸಿಗಳ ಆಗ್ರಹದಂತೆ ಬಿಸಿಸಿಐ (BCCI) 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ.

ಐವರನ್ನು ನೇರವಾಗಿ ಉಳಿಸಿಕೊಳ್ಳಬಹುದು. ಇನ್ನೊಬ್ಬರನ್ನು ಹರಾಜಿನಲ್ಲಿ ಆರ್‌ಟಿಎಂ (Right to Match) ಕಾರ್ಡ್‌ ಮೂಲಕ ಉಳಿಸಿಕೊಳ್ಳಬಹುದು. ಈ ಹಿಂದೆ ನಾಲ್ವರನ್ನು ಉಳಿಸಿಕೊಳ್ಳಲು ಅವಕಾಶವಿತ್ತು. ಹಾಗಂತ ಇದು ಹೇಳಿಕೊಳ್ಳುವಷ್ಟು ಸುಲಭವಿಲ್ಲ.

ಫ್ರಾಂಚೈಸಿಗಳಿಗೆ ಒಟ್ಟು ವೇತನ ಮೊತ್ತ 120 ಕೋಟಿ ಇರಲಿದ್ದು, ಇದರಲ್ಲಿ ಉಳಿಸಿಕೊಳ್ಳುವ ಆಟಗಾರರಿಗಾಗಿಯೇ 75 ಕೋಟಿ ರೂ. ವೆಚ್ಚವಾಗಲಿದೆ. 1, 2 ಮತ್ತು 3ನೇ ಆದ್ಯತೆ ಆಟಗಾರರಿಗೆ ಕ್ರಮವಾಗಿ 18, 14, 11 ಕೋಟಿ ರೂ.ಗಳನ್ನು ನೀಡಬೇಕಾಗುತ್ತದೆ. 4 ಮತ್ತು 5ನೇ ಆಟಗಾರರನ್ನು ಉಳಿಸಿಕೊಳ್ಳಬೇಕಾದರೆ ಮತ್ತೆ 18 ಮತ್ತು 14 ಕೋಟಿ ರೂ.ಗಳನ್ನು ನೀಡಬೇಕಾಗುತ್ತದೆ! ಹೀಗಾಗಿ ಫ್ರಾಂಚೈಸಿಗಳಿಗೆ ಹರಾಜಿನ ವೇಳೆ ಕಡಿಮೆ ಮೊತ್ತ ಉಳಿಯಲಿದ್ದು, ಇತರೆ ಆಟಗಾರರ ಖರೀದಿಗೆ ಹೊರೆಯಾಗಲಿದೆ.

ಉಳಿಕೆಗೆ ದೇಶ, ವಿದೇಶ ಮಿತಿಯಿಲ್ಲ

ಫ್ರಾಂಚೈಸಿಗಳಿಗೆ 6 ಆಟಗಾರರ ಉಳಿಕೆಗೆ ಅವಕಾಶವಿದ್ದು, ಇಷ್ಟೇ ದೇಶೀಯ, ವಿದೇಶೀಯ ಆಟಗಾರರನ್ನು ಉಳಿಸಿಕೊಳ್ಳಬೇಕೆ ನ್ನುವ ನಿರ್ಬಂಧ ಇಲ್ಲ. ಫ್ರಾಂಚೈಸಿಗಳು ಬೇಕಾದರೆ ಮೂರು ದೇಶೀಯ, 3 ವಿದೇಶೀಯರನ್ನೂ ಆಯ್ಕೆ ಮಾಡಬಹುದು. ಈ ಅನುಪಾತವನ್ನು ಬದಲಿಸಲೂಬಹುದು.

ಧೋನಿ ಉಳಿಸಿಕೊಳ್ಳಲು ಅವಕಾಶ

ಫ್ರಾಂಚೈಸಿಗಳು ಆರು ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಸಲಾಗಿದೆ ಮತ್ತು ಅವರಲ್ಲಿ ಒಬ್ಬರನ್ನು ಅನ್‌ಕ್ಯಾಪ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಅದೇ ಸಮಯದಲ್ಲಿ ನಿಯಮ ಬದಲಾವಣೆ ಮಾಡಿರುವ ಬಿಸಿಸಿಐ, ನಿವೃತ್ತಿ ಹೊಂದಿದ ಅಥವಾ ಭಾರತದ ಆಡುವ ಬಳಗದ ಭಾಗವಾಗಿರದ ಅಥವಾ ಕಳೆದ ಐದು ವರ್ಷಗಳಿಂದ ಬಿಸಿಸಿಐ ಒಪ್ಪಂದವನ್ನು ಹೊಂದಿರದ ಭಾರತೀಯ ಆಟಗಾರರಿಗೆ ಅನ್‌ಕ್ಯಾಪ್ಡ್ ಆಟಗಾರನಾಗಿ ಆಡಲು ಅವಕಾಶ ನೀಡಲಾಗಿದೆ. ಹೀಗಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ಎಂ.ಎಸ್ ಧೋನಿಯವರನ್ನು ಅನ್‌ ಕ್ಯಾಪ್ಡ್‌ ಕೋಟಾದಲ್ಲಿ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶವಿದೆ.

ಆಡಲ್ಲ ಎಂದರೆ 2 ವರ್ಷ ನಿಷೇಧ

ಯಾವುದೇ ಆಟಗಾರ ಐಪಿಎಲ್‌ ಹರಾಜಿಗೆ ನೋಂದಣಿ ಮಾಡಿಕೊಂಡು, ಆಯ್ಕೆಯೂ ಆಗಿ, ಕೂಟಕ್ಕೂ ಮುನ್ನ ಆಡಲ್ಲ ಎಂದರೆ, ಮುಂದಿನ 2 ಕೂಟಗಳಲ್ಲಿ ಪಾಲ್ಗೊಳ್ಳುವಂತಿಲ್ಲ.

ವಿದೇಶೀಯರಿಗೆ ನೋಂದಣಿ ಕಡ್ಡಾಯ

ಐಪಿಎಲ್‌ನಲ್ಲಿ ಆಡಬಯಸುವ ವಿದೇಶೀಯರು ಇನ್ನು ಬೃಹತ್‌ (ಮೆಗಾ) ಹರಾಜಿನಲ್ಲಿ ತಮ್ಮ ಹೆಸರನ್ನು ಸೇರಿಸಬೇಕು. ಇಲ್ಲವಾದರೆ ಪ್ರಸಕ್ತ ಐಪಿಎಲ್‌ ಮುಗಿದ ಬಳಿಕ ನಡೆಯುವ ಕಿರು ಹರಾಜಿನಲ್ಲಿ ಅವರು ಪಾಲ್ಗೊಳ್ಳಲು ಅವಕಾಶವಿಲ್ಲ.

ಟಾಪ್ ನ್ಯೂಸ್

3-sedam

Sedam: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ; ಆರೋಪಿ ಬಂಧನ

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

2-mng-kbc

Mangaluru: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI: ಇಂದು ಬಿಸಿಸಿಐ ವಾರ್ಷಿಕ ಸಭೆ

BCCI: ಇಂದು ಬಿಸಿಸಿಐ ವಾರ್ಷಿಕ ಸಭೆ

028

IPL players: ಐಪಿಎಲ್‌ ಆಟಗಾರರಿಗೆ ಬಂಪರ್‌ ಸಂಭಾವನೆ

1-reee

Vinoo Mankad Trophy: ರಾಜ್ಯ ತಂಡಕ್ಕೆ ಬ್ರಹ್ಮಾವರದ ರೋಹಿತ್‌

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

3-sedam

Sedam: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ; ಆರೋಪಿ ಬಂಧನ

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

2-mng-kbc

Mangaluru: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.