ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಮೇಲೆ ಗಮನ
ಐಪಿಎಲ್: ರಾಯಲ್ ಚಾಲೆಂಜರ್ ಬೆಂಗಳೂರು -ಸನ್‌ರೈಸರ್ ಹೈದರಾಬಾದ್
Team Udayavani, May 8, 2022, 7:35 AM IST
ಮುಂಬಯಿ: ರಾಯಲ್ ಚಾಲೆಂಜರ್ ಬೆಂಗಳೂರು ತಂಡವು ರವಿವಾರದ ಆರಂಭಿಕ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಈ ಪಂದ್ಯದ ವೇಳೆ ಎಲ್ಲರ ಗಮನ ವಿಶ್ವ ಕ್ರಿಕೆಟ್‌ನ ಇಬ್ಬರು ಬ್ಯಾಟಿಂಗ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಅವರ ಪ್ರದರ್ಶನದ ಕಡೆಗೆ ಇರಲಿದೆ.
ಸದ್ಯ ಸಾಗುತ್ತಿರುವ ಐಪಿಎಲ್‌ನಲ್ಲಿ ಕೊಹ್ಲಿ ಮತ್ತು ವಿಲಿಯಮ್ಸನ್ ಅವರು ಬ್ಯಾಟಿಂಗ್‌ನಲ್ಲಿ ಒದ್ದಾಡುತ್ತಿದ್ದಾರೆ. ಕೊಹ್ಲಿ ಆಡಿದ 11 ಪಂದ್ಯಗಳಿಂದ 21.60 ಸರಾಸರಿಯಲ್ಲಿ ಕೇವಲ 216 ರನ್ ಗಳಿಸಿದ್ದರೆ ಹೈದರಾಬಾದ್ ನಾಯಕ ಆಡಿದ 10 ಪಂದ್ಯಗಳಿಂದ 22.11 ಸರಾಸರಿಯಲ್ಲಿ 199 ರನ್ ಗಳಿಸಿದ್ದಾರೆ. ಇಬ್ಬರೂ ಬ್ಯಾಟಿಂಗ್ ದಿಗ್ಗಜರು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ಅಸಮರ್ಥರಾಗಿ ನಿರಾಶೆಗೊಳಿಸಿದ್ದಾರೆ. ಇದೀಗ ಅವರಿಬ್ಬರ ಮುಖಾಮುಖೀಯ ಈ ಪಂದ್ಯದಲ್ಲಿ ಅವರ ಬ್ಯಾಟಿಂಗ್ ವೈಭವದ ಮೇಲೆ ಎಲ್ಲರ ಗಮನ ಕೇಂದ್ರಿಕೃತವಾಗಿದೆ.
ಗುಜರಾತ್ ವಿರುದ್ಧದ ಪಂದ್ಯದಲ್ಲಿ ತನ್ನ ಮೊದಲ ಅರ್ಧಶತಕ ಬಾರಿಸಿದ ಕೊಹ್ಲಿ ಫಾರ್ಮ್ ಗೆ ಮರಳಿರುವ ಸೂಚನೆ ನೀಡಿದ್ದರು. ಆದರೆ ಮುಂದಿನ ಚೆನ್ನೈ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯಲ್ಲಿ ಆಡಿ ನಿರಾಶೆಗೊಳಿಸಿದರು. ಆರಂಭದಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದರೂ ಆಬಳಿಕ ಬಹಳಷ್ಟು ನಿಧಾನಗತಿಯಲ್ಲಿ ಆಡಿದ್ದರು. ತಂಡ ಸದಸ್ಯ ಮ್ಯಾಕ್ಸ್‌ವೆಲ್ ರನೌಟ್‌ಗೆ ಕಾರಣರಾಗಿದ್ದ ಅವರು 33 ಎಸೆತಗಳಿಂದ 30 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ವಿಲಿಯಮ್ಸನ್ ಸ್ಥಿರವಾಗಿ ರನ್ ಗಳಿಸುತ್ತಿದ್ದರೂ ಅದನ್ನು ದೊಡ್ಡ ಮೊತ್ತಕ್ಕೆ ಕೊಂಡೊಯ್ಯಲು ವಿಫಲರಾಗುತ್ತಿದ್ದಾರೆ. ಅವರು ಇನ್ನಷ್ಟು ಆಕ್ರಮಣಕಾರಿಯಾಗಿ ಆಡಬೇಕಾದ ಅಗತ್ಯವಿದೆ. ಹೈದರಾಬಾದ್‌ನ ಮುಖ್ಯ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮತ್ತೆ ಗಾಯಗೊಂಡಿದ್ದಾರೆ. ಡೆತ್ ಓವರ್ ವೇಳೆ ತಂಡದ ಯಶಸ್ವಿ ಬೌಲರ್ ಟಿ. ನಟರಾಜನ್ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಬ್ಬರು ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ.
ಪ್ರಮುಖ ಬೌಲರ್‌ಗಳ ಗಾಯದ ಸಮಸ್ಯೆ ಜತೆ ವಿವಿಧ ಕಾರಣಗಳಿಂದಾಗಿ ಹೈದರಾಬಾದ್ ತಂಡವು ಇದàಇಗ ಸತತ ಮೂರು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಈ ಮೊದಲು ತಂಡವು ಸತತ ಐದು ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಅಚ್ಚರಿ ಮೂಡಿಸಿತ್ತು.
ಈ ಹಿಂದಿನ ಪಂದ್ಯದಿಂದ ಕೈಬಿಟ್ಟಿದ್ದ ಮಾರ್ಕೊ ಜಾನ್ಸೆನ್ ಅವರನ್ನು ಆರ್‌ಸಿಬಿ ವಿರುದ್ಧ ಆಡಿರುವ ಸಾಧ್ಯತೆಯಿದೆ. ಜಾನ್ಸೆನ್ ಈ ಹಿಂದಿನ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಭಾರೀ ಯಶಸ್ಸು ಸಾಧಿಸಿದ್ದರು ಎಂದು ಟಾಮ್ ಮೂಡಿ ಹೇಳಿದ್ದಾರೆ.
ವೇಗಿ ಉಮ್ರಾನ್ ಮಲಿಕ್ ತಂಡದಲ್ಲಿರುವುದು ಪ್ಲಸ್ ಪಾಯಿಂಟ್ ಆಗಿದೆ. ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ ಅಭಿಷೇಕ್ ಶರ್ಮ, ಐಡೆಲ್ ಮಾರ್ಕ್‌ರಮ್, ನಿಕೋಲಾಸ್ ಪೂರಣ್ ಉತ್ತಮ ಫಾರ್ಮ್ ನಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.