IPL: ಹೈದರಾಬಾದ್‌ಗೆ ನೋಲಾಸ್ ಗೆಲುವು: ಟ್ರ್ಯಾವಿಸ್ ಹೆಡ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ
Team Udayavani, May 9, 2024, 6:00 AM IST
ಹೈದರಾಬಾದ್: ಟ್ರ್ಯಾವಿಸ್ ಹೆಡ್ ಅವರ ಸ್ಫೋಟಕ ಆಟ ಮತ್ತು ತಂಡದ ಶಿಸ್ತುಬದ್ಧ ಬೌಲಿಂಗ್ ನಿರ್ವಹಣೆಯಿಂದಾಗಿ ಸನ್‌ರೈಸರ್ ಹೈದರಾಬಾದ್ ತಂಡವು ಬುಧವಾರದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 10 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ.
ಈ ಗೆಲುವಿನಿಂದ ಹೈದರಾಬಾದ್ ತಂಡವು ಒಟ್ಟಾರೆ 14 ಅಂಕ ಸಂಪಾದಿಸಿದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದು ಪ್ಲೇ ಆಫ್ಗೆ ತೇರ್ಗಡೆಯ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿತು. ಸೋತ ಲಕ್ನೋ ತಂಡ 12 ಅಂಕ ಹೊಂದಿದ್ದು ಐದನೇ ಸ್ಥಾನದಲ್ಲಿದೆ.
ಗೆಲ್ಲಲು 166 ರನ್ ತೆಗೆಯುವ ಸವಾಲು ಪಡೆದ ಹೈದರಾಬಾದ್ ತಂಡವು ಟ್ರ್ಯಾವಿಸ್ ಹೆಡ್ ಮತ್ತು ಅಭಿಷೇಕ್ ಅವರ ಸಿಡಿಲಬ್ಬರದ ಆಟದಿಂದಾಗಿ ಕೇವಲ 9.4 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 167 ರನ್ ಗಳಿಸಿ ಜಯಭೇರಿ ಬಾರಿಸಿತು.
ಹೈದರಾಬಾದ್ ತಂಡವು ಆರಂಭದಿಂದಲೇ ಭರ್ಜರಿ ಯಾಗಿ ಆಡಿತು. ಇನ್ನಿಂಗ್ಸ್ ಆರಂಭಿಸಿದ ಟ್ರ್ಯಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದರು. ಆರು ಓವರ್ ಮುಗಿದಾಗ ತಂಡದ ಮೊತ್ತ ನೂರು ದಾಟಿತ್ತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಹೆಡ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಆಬಳಿಕವೂ ಬಿರುಸಿನ ಆಟವಾಡಿದ ಅವರು 89 ರನ್ ಗಳಿಸಿ ಅಜೇಯರಾಗಿ ಉಳಿದರು. 30 ಎಸೆತ ಎದುರಿಸಿದ ಅವರು 8 ಬೌಂಡರಿ ಮತ್ತು 8 ಸಿಕ್ಸರ್ ಸಿಡಿಸಿದರು. ಅವರಿಗೆ ಉಪಯುಕ್ತ ಬೆಂಬಲ ನೀಡಿದ ಅಭಿಷೇಕ್ 19 ಎಸೆತಗಳಿಂದ ಅರ್ಧಶತಕ ಪೂರೈಸಿದರು. ಅಂತಿಮವಾಗಿ 28 ಎಸೆತಗಳಿಂದ 75 ರನ್ ಗಳಿಸಿ ಅಜೇಯರಾಗಿ ಉಳಿದರು. 8 ಬೌಂಡರಿ ಮತ್ತು 6 ಸಿಕ್ಸರ್ ಹೊಡೆದರು.
ರನ್ನಿಗಾಗಿ ಒದ್ದಾಟ
ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ಲಕ್ನೋ ತಂಡ ಆರಂಭದಲ್ಲಿ ರನ್ ಗಳಿಸಿಲು ಒದ್ದಾಡಿತು. ಪವರ್ ಪ್ಲೇಯಲ್ಲಿ ತಂಡ ಎರಡು ವಿಕೆಟಿಗೆ 27 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಹೈದರಾಬಾದ್ ತಂಡದ ನಿಖರ ದಾಳಿಯಿಂದಾಗಿ ಲಕ್ನೋ ಆಟಗಾರರು ರನ್ ಗಳಿಸಲು ಒದ್ದಾಡಿದರು. ಮೊಹ್ಸಿನ್ ಖಾನ್ ಬದಲಿಗೆ ಬಂದ ಕಾಕ್ ಮಿಂಚಲು ವಿಫಲರಾದರು. ನಾಯಕ ರಾಹುಲ್, ಸ್ಟೋಯಿನಿಸ್, ಕೃಣಾಲ್ ಪಾಂಡ್ಯ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾದರು. ಇದರಿಂದಾಗಿ ತಂಡ 66 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು.
ಈ ಹಂತದಲ್ಲಿ ನಿಕೋಲಾಸ್ ಪೂರಣ್ ಅವರನ್ನು ಸೇರಿಕೊಂಡ ಆಯುಷ್ ಬದೋನಿ ತಾಳ್ಮೆಯಿಂದ ಆಡಿ ತಂಡವನ್ನು ಆಧರಿಸಿದರು. ಇದರಿಂದಾಗಿ ತಂಡ ಉತ್ತಮ ಮೊತ್ತ ದಾಖಲಿಸಲು ಸಾಧ್ಯವಾಯಿತು. ಅವರಿಬ್ಬರು ಮುರಿಯದ ಐದನೇ ವಿಕೆಟಿಗೆ 99 ರನ್ನುಗಳ ಜತೆಯಾಟ ನಡೆಸಿದ್ದರಿಂದ ಲಕ್ನೋದ ಮೊತ್ತ 165 ತಲಪುವಂತಾಯಿತು. ಪೂರಣ್ 26ಎಸೆತಗಳಿಂದ 48 ರನ್ ಗಳಿಸಿದರೆ ಬದೋನಿ 30 ಎಸೆತಗಳಿಂದ 55 ರನ್ ಗಳಿಸಿ ಅಜೇಯರಾಗಿ ಉಳಿದರು.
ಬಿಗು ದಾಳಿ ಸಂಘಟಿಸಿದ ಭುವನೇಶ್ವರ್ ತನ್ನ ನಾಲ್ಕು ಓವರ್‌ಗಳ ದಾಳಿಯಲ್ಲಿ ಕೇವಲ 12 ರನ್ ನೀಡಿ ಎರಡು ವಿಕೆಟ್ ಹಾರಿಸಿದರು.
ಸ್ಕೋರ್ ಪಟ್ಟಿ
ಲಕ್ನೋ ಸೂಪರ್ ಜೈಂಟ್ಸ್
ಕೆಎಲ್ ರಾಹುಲ್ ಸಿ ನಟರಾಜನ್ ಬಿ ಕಮಿನ್ಸ್ 29
ಕ್ವಿಂಡನ್ ಡಿ ಕಾಕ್ ಸಿ ನಿತೀಶ್ ಬಿ ಕುಮಾರ್ 2
ಮಾರ್ಕಸ್ ಸ್ಟೋಯಿನಿಸ್ ಸಿ ಸನ್ವಿರ್ ಬಿ ಕುಮಾರ್ 3
ಕೃಣಾಲ್ ಪಾಂಡ್ಯ ರನೌಟ್ 24
ನಿಕೋಲಾಸ್ ಪೂರಣ್ ಔಟಾಗದೆ 48
ಆಯುಷ್ ಬದೋನಿ ಔಟಾಗದೆ 55
ಇತರ: 4
ಒಟ್ಟು (20 ಓವರ್‌ಗಳಲ್ಲಿ ನಾಲ್ಕು ವಿಕೆಟಿಗೆ) 165
ವಿಕೆಟ್ ಪತನ: 1-13, 2-21, 3-57, 4-66
ಬೌಲಿಂಗ್:
ಭುವನೇಶ್ವರ್ ಕುಮಾರ್ 4-0-12-2
ಪ್ಯಾಟ್ ಕಮಿನ್ಸ್ 4-0-47-1
ಶಾಬಾಜ್ ಅಹ್ಮದ್ 2-0-9-0
ವಿಜಯಕಾಂತ್ ವಿಯಾಸ್ಕಾಂತ್ 4-0-27-0
ಜೈದೇವ್ ಉನಾದ್ಕತ್ 2-0-19-0
ಟಿ. ನಟರಾಜನ್ 4-0-50-0
ಸನ್‌ರೈಸರ್ ಹೈದರಾಬಾದ್
ಅಭಿಷೇಕ್ ಶರ್ಮ ಔಟಾಗದೆ 75
ಟ್ರ್ಯಾವಿಸ್ ಹೆಡ್ ಔಟಾಗದೆ 89
ಇತರ: 3
ಒಟ್ಟು (9.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ) 167
ಬೌಲಿಂಗ್:
ಕೃಷ್ಣಪ್ಪ ಗೌತಮ್ 2-0-29-0
ಯಶ್ ಥಾಕೂರ್ 2.4-0-47-0
ರವಿ ಬಿಷ್ಣೋಯಿ 2-0-34-0
ನವೀನ್ ಉಲ್ ಹಕ್ 2-0-37-0
ಆಯುಷ್ ಬದೋನಿ 1-0-19-0
ಪಂದ್ಯಶ್ರೇಷ್ಠ: ಟ್ರ್ಯಾವಿಸ್ ಹೆಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
MUST WATCH
ಹೊಸ ಸೇರ್ಪಡೆ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Bengaluru: ಉದ್ಯೋಗ, ಹೂಡಿಕೆ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಸೆರೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.