ಕೈಕೊಟ್ಟ ಬ್ಯಾಟಿಂಗ್ : ನೈಟ್ ರೈಡರ್ಸ್ ವಿರುದ್ಧ 37 ರನ್ನಿನಿಂದ ಸೋತ ರಾಜಸ್ಥಾನ ರಾಯಲ್ಸ್
Team Udayavani, Sep 30, 2020, 11:20 PM IST
ದುಬಾಯಿ: ಕೊಲ್ಕೊತ್ತಾ ನೈಟ್ ರೈಡರ್ಸ್ ನೀಡಿದ 175 ರನ್ ಸವಾಲನ್ನು ಬೆನ್ನತ್ತುವಲ್ಲಿ ಸಂಪೂರ್ಣವಾಗಿ ವಿಫಲವಾದ ರಾಜಸ್ಥಾನ ರಾಯಲ್ಸ್ 37 ರನ್ ಗಳ ಸೋಲನ್ನು ಅನುಭವಿಸಿದೆ.
ಪಂಜಾಬ್ ವಿರುದ್ಧದ ಕಳೆದ ಪಂದ್ಯವನ್ನು ವೀರಾವೇಶದಿಂದ ಗೆದ್ದಿದ್ದ ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್ ಮನ್ ಗಳು ಇಂದು ಮಾತ್ರ ಬ್ಯಾಟಿಂಗ್ ಮರೆತವರಂತೆ ಆಡಿದರು.
ಜಾಸ್ ಬಟ್ಲರ್ (21), ರಾಹುಲ್ ತೆವಾಟಿಯಾ (14) ಮತ್ತು ಟಾಮ್ ಕರನ್ (54*) ಹೊರತುಪಡಿಸಿ ಉಳಿದೆಲ್ಲಾ ಬ್ಯಾಟ್ಸ್ ಮನ್ ಗಳು ಸಿಂಗಲ್ ನಂಬರ್ ಗೇ ಆಟ ಮುಗಿಸಿದರು.
ನಾಯಕ ಸ್ಟೀವನ್ ಸ್ಮಿತ್ (3), ಸಂಜು ಸ್ಯಾಮ್ಸನ್ (8), ರಾಬಿನ್ ಉತ್ತಪ್ಪ (2), ರಿಯಾನ್ ಪರಾಗ್ (1) ಮತ್ತು ಕಳೆದ ಪಂದ್ಯದ ಸೂಪರ್ ಹೀರೋ ರಾಹುಲ್ ತೆವಾಟಿಯಾ (14) ರಾಯಲ್ಸ್ ಬೌಲರ್ ಗಳ ಎದುರು ಸಿಡಿದು ನಿಲ್ಲಲು ವಿಫಲರಾದರು.
ಪ್ರಾರಂಭದಿಂದಲೇ ರಾಯಲ್ಸ್ ದಾಂಢಿಗರನ್ನು ಕಟ್ಟಿಹಾಕುವಲ್ಲಿ ಸಫಲರಾದ ಕೊಲ್ಕೊತ್ತಾ ಬೌಲರ್ ಗಳು ನಿಯಮಿತವಾಗಿ ವಿಕೆಟ್ ಉರುಳಿಸುತ್ತಾ ಹೋದರು. ಇದರಿಂದ ಒತ್ತಡಕ್ಕೆ ಸಿಲುಕಿದ ರಾಯಲ್ಸ್ 88 ರನ್ ಆಗುವಷ್ಟರಲ್ಲಿ 8 ವಿಕೆಟ್ ಗಳನ್ನು ಕಳೆದುಕೊಂಡು ಒಂದು ಹಂತದಲ್ಲಿ 100 ರನ್ನಿನೊಳಗೆ ಆಲೌಟಾಗುವ ಭೀತಿಗೆ ಸಿಲುಕಿತ್ತು.
ಇದನ್ನೂ ಓದಿ: ಕೆಕೆಆರ್ ಎಚ್ಚರಿಕೆ ಆಟ; ರಾಯಲ್ಸ್‌ಗೆ 175 ರನ್ ಗುರಿ
ಬಾಲಂಗೋಚಿಗಳ ನೆರವಿನಿಂದ ತಂಡದ ಮೊತ್ತವನ್ನು ಶತಕದ ಗಡಿ ದಾಟಿಸುವಲ್ಲಿ ಟಾಮ್ ಕರನ್ ಯಶಸ್ವಿಯಾದರು. ಕರನ್ ಅರ್ಧಶತಕ ಬಾರಿಸಿ ಔಟಾಗದೇ ಉಳಿದರು.
ಅಂತಿಮವಾಗಿ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯಿತು.
ರಾಜಸ್ಥಾನ ಪರ ಟಾಮ್ ಕರನ್ ಅವರದ್ದೇ ಟಾಪ್ ಸ್ಕೋರ್ 36 ಎಸೆತಗಳಲ್ಲಿ 54 ರನ್ ಬಾರಿಸಿದ ಕರನ್ 3 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ ಅಜೇಯರಾಗಿ ಉಳಿದರು.
ಕೊಲ್ಕತ್ತಾ ಪರ ಶಿವಂ ಮಾವಿ, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು. ಸುನಿಲ್ ನರೈನ್, ಪ್ಯಾಟ್ ಕಮಿನ್ಸ್ ಹಾಗೂ ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.