ರಾಜಸ್ಥಾನ – ಕೊಲ್ಕತ್ತಾ ಮುಖಾಮುಖಿ: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರಾಯಲ್ಸ್
Team Udayavani, Sep 30, 2020, 7:02 PM IST
ದುಬಾಯಿ: ಈ ಬಾರಿಯ IPL T20 ಕೂಟದ 12ನೇ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ.
ರಾಜಸ್ಥಾನ ರಾಯಲ್ಸ್ ಹಾಗೂ ಕೊಲ್ಕೊತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಇಂದಿನ ಪಂದ್ಯ ನಡೆಯಲಿದೆ.
ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಕಪ್ತಾನ ದಿನೇಶ್ ಕಾರ್ತಿಕ್ ಅವರು ರಾಜಸ್ಥಾನ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದ್ದಾರೆ.
ಇದು ಸಣ್ಣ ಅಂಗಳವಲ್ಲ!
ಆದರೆ ಇಲ್ಲೊಂದು ಸಂಗತಿ ಇದೆ. ರಾಜಸ್ಥಾನ್ ತನ್ನ ಎರಡೂ ಪಂದ್ಯಗಳನ್ನು ಆಡಿದ್ದು ಶಾರ್ಜಾದಲ್ಲಿ. ಇದು ಯುಎಇಯ ಅತೀ ಸಣ್ಣ ಅಂಗಳ. ಬೌಂಡರಿ ಅಂತರವೂ ಚಿಕ್ಕದು. ಹೀಗಾಗಿ ಬಾರಿಸಿದ್ದೆಲ್ಲ ಬೌಂಡರಿ, ಸಿಕ್ಸರ್ ಆಗಿ ಪರಿವರ್ತನೆಗೊಳ್ಳುತ್ತದೆ. ಅಲ್ಲಿನದೇ ರೀತಿಯಲ್ಲಿ ತಮಾಷೆಯಾಗಿ ಹೇಳಬೇಕೆಂದರೆ, ಶಾರ್ಜಾದಲ್ಲಿ ಬಾರಿಸಿದ ಚೆಂಡು ದುಬಾಯಿಗೋ, ಅಬುಧಾಬಿಗೋ ಹೋಗಿ ಬೀಳುತ್ತದೆ! ಆದರೆ ರಾಜಸ್ಥಾನ್ ಮೊದಲ ಸಲ ಶಾರ್ಜಾದ ಆಚೆ ಆಡಲಿಳಿ ಯುತ್ತದೆ. ಹೀಗಾಗಿ ದುಬಾೖ ಅಂಗಳ ಸ್ಮಿತ್ ಪಡೆಗೆ ನಿಜವಾದ ಅಗ್ನಿಪರೀಕ್ಷೆ. ಇಲ್ಲಿಯೂ ಸ್ಫೋಟಕ ಆಟವಾಡಿದರೆ ರಾಜಸ್ಥಾನ್ ನಿಜಕ್ಕೂ ಗ್ರೇಟ್ ಎನಿಸಲಿದೆ.
ಇದನ್ನೂ ಓದಿ: ಕಾರ್ತಿಕ್ ಬಳಗಕ್ಕೆ ಕಾದಿದೆ ರಾಜಸ್ಥಾನ್ ಟೆಸ್ಟ್
ರಕ್ಷಣಾತ್ಮಕ ಆಟ ನಡೆಯದು
ಕೋಲ್ಕತಾ ಕೂಡ ಬಿಗ್ ಹಿಟ್ಟರ್‌ಗಳನ್ನು ಹೊಂದಿದೆ. ಶುಭಮನ್ ಗಿಲ್, ಆ್ಯಂಡ್ರೆ ರಸೆಲ್, ಸುನೀಲ್ ನಾರಾಯಣ್, ಮಾರ್ಗನ್ ಬಲವನ್ನು ಹೊಂದಿದೆ. ಆದರೆ ಇವರು ರಕ್ಷಣಾತ್ಮಕ ಆಟವನ್ನು ಬದಲಿಸಿ ಮುನ್ನುಗ್ಗಿ ಬಾರಿಸ ಬೇಕಾದುದು ಅನಿವಾರ್ಯ. ಇವರಲ್ಲಿ ಇಬ್ಬರಾದರೂ ಸಿಡಿದು ನಿಲ್ಲುವುದು ಮುಖ್ಯ. ಹಾಗೆಯೇ ಕಾರ್ತಿಕ್ ಕಪ್ತಾನನ ಆಟ ಆಡುವುದೂ ಅಗತ್ಯ. ರಾಜಸ್ಥಾನ್‌ನಂತೆ ಕೆಕೆಆರ್ ಕೂಡ ಇದೇ ಮೊದಲ ಸಲ ದುಬಾೖಯಲ್ಲಿ ಆಡುತ್ತಿದೆ. ಈ ಸಾಲಿನ ಎರಡೂ ಸೂಪರ್ ಓವರ್ ಪಂದ್ಯಗಳಿಗೆ ಸಾಕ್ಷಿಯಾದ ಸ್ಟೇಡಿಯಂ ಇದಾಗಿದೆ. ಇಲ್ಲಿ 5 ಪಂದ್ಯಗಳು ನಡೆದಿದ್ದು, ಎಲ್ಲದರಲ್ಲೂ ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳೇ ಗೆಲುವು ಕಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.