ಎಪ್ರಿಲ್ 2ರಿಂದ ಐಪಿಎಲ್ ಆರಂಭ?
ಚೆನ್ನೈಯಲ್ಲಿ ಮೊದಲ ಪಂದ್ಯ, ಜನವರಿಯಲ್ಲಿ ಮೆಗಾ ಹರಾಜು ಸಾಧ್ಯತೆ
Team Udayavani, Nov 25, 2021, 5:38 AM IST
ಹೊಸದಿಲ್ಲಿ: ಮುಂದಿನ ವರ್ಷದ 15ನೇ ಐಪಿಎಲ್ ಎಪ್ರಿಲ್ 2ರಂದು ಚೆನ್ನೈಯಲ್ಲಿ ಆರಂಭಗೊಳ್ಳುವ ಸಾಧ್ಯತೆ ಇದೆ.
ಈ ಕುರಿತು ಬಿಸಿಸಿಐ ಈಗಾಗಲೇ ಪಾಲುದಾರರಿಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.ಹಾಗೆಯೇ ಜನವರಿಯಲ್ಲಿ ಮೆಗಾ ಹರಾಜು ನಡೆಯುವ ಬಗ್ಗೆಯೂ ವರದಿಯಾಗಿದೆ.
2022ರ ಐಪಿಎಲ್‌ನಲ್ಲಿ 10 ತಂಡಗಳು ಆಡಲಿದ್ದು, ಒಟ್ಟು 74 ಪಂದ್ಯಗಳು ನಡೆಯಲಿವೆ. 60 ದಿನಗಳ ಕಾಲ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಆಂತರಿಕ ಸಭೆಯಲ್ಲಿ ಚರ್ಚಿಸಿದೆ. ಈ ಲೆಕ್ಕಾಚಾರದ ಪ್ರಕಾರ ಜೂನ್ ಮೊದಲ ವಾರಾಂತ್ಯದಲ್ಲಿ ಫೈನಲ್ ಪಂದ್ಯ ನಡೆಯಬೇಕಿದೆ.
ಈಗಿನ ನಿಯಮದ ಪ್ರಕಾರ ಪ್ರತೀ ತಂಡ ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡುತ್ತಿತ್ತು. ಇದರಲ್ಲಿ 7 ಪಂದ್ಯಗಳನ್ನು ತವರಿನ ಅಂಗಳದಲ್ಲಿ, 7 ಪಂದ್ಯಗಳನ್ನು ತವರಿನಾಚೆಯ ಸ್ಟೇಡಿಯಂನಲ್ಲಿ ನಡೆಯುತ್ತಿದ್ದವು. ಮುಂದಿನ ವರ್ಷವೂ ಇದೇ ಮಾದರಿಯಲ್ಲಿ ಪಂದ್ಯಗಳು ನಡೆಯಬಹುದು.
ಇದನ್ನೂ ಓದಿ:ಸ್ವೀಡನ್‌ನ ಮೊದಲ ಮಹಿಳಾ ಪ್ರಧಾನಿ ಮ್ಯಾಗ್ಡಲೀನಾ
ಸುಳಿವು ನೀಡಿದ ಜಯ್ ಶಾ
ಇತ್ತೀಚೆಗಷ್ಟೇ ಚೆನ್ನೈಯಲ್ಲಿ ನಡೆದ ಸಿಎಸ್‌ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಮುಂದಿನ ವರ್ಷದ ಐಪಿಎಲ್ ಸಂಪೂರ್ಣವಾಗಿ ಭಾರತದಲ್ಲೇ ನಡೆಯಲಿದೆ ಎಂದಿದ್ದರು.
“ಚಿಪಾಕ್‌ನಲ್ಲಿ ಸಿಎಸ್‌ಕೆ ಪಂದ್ಯವನ್ನು ನೋಡಲು ನೀವೆಲ್ಲರೂ ಕಾತರರಾಗಿದ್ದೀರಿ ಎಂದು ನನಗೆ ತಿಳಿದಿದೆ. ಆ ಕ್ಷಣಕ್ಕೆ ಹೆಚ್ಚು ಕಾಯಬೇಕಿಲ್ಲ. ಐಪಿಎಲ್‌ನ 15ನೇ ಸೀಸನ್ ಭಾರತದಲ್ಲೇ ನಡೆಯಲಿದೆ ಮತ್ತು ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ ಇದು ಹಿಂದೆಂದಿಗಿಂತಲೂ ಹೆಚ್ಚು ರೋಚಕವಾಗಿರಲಿದೆ.
ಮುಂದಿನ ದಿನಗಳಲ್ಲಿ ಮೆಗಾ ಹರಾಜು ನಡೆಯಲಿದೆ. ಹೊಸ ಸಂಯೋಜನೆ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರದೂ’ ಎಂದು ಜಯ್ ಶಾ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.