IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Team Udayavani, Apr 27, 2024, 6:13 AM IST

1—ewqewqe

ಲಕ್ನೋ: ಅಗ್ರಸ್ಥಾನದಲ್ಲಿ ಹಾರಾಡುತ್ತಿರುವ ರಾಜಸ್ಥಾನ್‌ ರಾಯಲ್ಸ್‌ ಮತ್ತು ಯಾವುದೇ ಸವಾಲಿಗೂ ದಿಟ್ಟ ಉತ್ತರ ನೀಡಬಲ್ಲ ಆತ್ಮವಿಶ್ವಾಸ ಹೊಂದಿರುವ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳು ಶನಿವಾರ ಮುಖಾಮುಖಿಯಾಗಲಿವೆ. ಇದನ್ನು ಬಲಿಷ್ಠರ ನಡುವಿನ ಸೆಣಸಾಟ ಎನ್ನಲಡ್ಡಿಯಿಲ್ಲ.

ಸಂಜು ಸ್ಯಾಮ್ಸನ್‌ ಸಾರಥ್ಯದ ರಾಜಸ್ಥಾನ್‌ ಎಂಟ ರಲ್ಲಿ ಏಳನ್ನು ಗೆದ್ದು ತನ್ನ ಪ್ಲೇ ಆಫ್ ಮಾರ್ಗವನ್ನು ಸುಗಮಗೊಳಿಸಿದೆ. ಇನ್ನೊಂದು ಪಂದ್ಯ ಗೆದ್ದರೆ ಇದು ಅಧಿಕೃತಗೊಳ್ಳಲಿದೆ. ಇನ್ನೊಂದೆಡೆ ಕೆ.ಎಲ್‌. ರಾಹುಲ್‌ ನಾಯಕತ್ವದ ಲಕ್ನೋ 8 ಪಂದ್ಯಗಳಲ್ಲಿ ಐದನ್ನು ಗೆದ್ದಿದೆ. 10 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಮೊದಲ ಸುತ್ತಿನಲ್ಲಿ ಅನುಭವಿಸಿದ ಸೋಲಿಗೆ ತವರಲ್ಲಿ ಸೇಡು ತೀರಿಸಬೇಕಾದ ಸವಾಲು ಲಕ್ನೋ ಮುಂದಿದೆ.
ರಾಜಸ್ಥಾನ್‌ ಈ ಬಾರಿಯ ಏಕೈಕ ಸೋಲನ್ನು ಗುಜರಾತ್‌ ವಿರುದ್ಧ ಅನುಭವಿಸಿತ್ತು. ಅನಂತರ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿದೆ. ಕೊನೆಯ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿ 9 ವಿಕೆಟ್‌ಗಳ ಜಯಭೇರಿ ಮೊಳಗಿಸಿತ್ತು. ಯಶಸ್ವಿ ಜೈಸ್ವಾಲ್‌ ಶತಕ ಬಾರಿಸಿ ಅಬ್ಬರಿಸಿದ್ದರು. ಜತೆಗೆ ಬಟ್ಲರ್‌, ಸ್ಯಾಮ್ಸನ್‌ ಪ್ರದರ್ಶನವೂ ಅಮೋಘ ಮಟ್ಟದಲ್ಲಿತ್ತು. ಅಸ್ಸಾಮ್‌ನ ಪ್ರತಿಭಾನ್ವಿತ ಬ್ಯಾಟರ್‌ ರಿಯಾನ್‌ ಪರಾಗ್‌ (318 ರನ್‌), ಕೀಪರ್‌ ಧ್ರುವ ಜುರೆಲ್‌, ಶಿಮ್ರನ್‌ ಹೆಟ್‌ಮೈರ್‌, ರೋವ¾ನ್‌ ಪೊವೆಲ್‌ ಅವರನ್ನೊಳಗೊಂಡ ಬಲಿಷ್ಠ ಬ್ಯಾಟಿಂಗ್‌ ಸರದಿ ರಾಜಸ್ಥಾನದ್ದು.
ಮುಂಬೈ ಎದುರು 5 ವಿಕೆಟ್‌ ಉಡಾಯಿಸಿದ ಸಂದೀಪ್‌ ಶರ್ಮ, ಬೌಲ್ಟ್, ಸ್ಪಿನ್‌ ದಿಗ್ಗಜರಾದ ಅಶ್ವಿ‌ನ್‌, ಚಹಲ್‌ ಬೌಲಿಂಗ್‌ ವಿಭಾಗದ ಪ್ರಮುಖರು.

ಚೆನ್ನೈಯನ್ನು ಮಣಿಸಿದ ಛಾತಿ
ಲಕ್ನೋ ಹ್ಯಾಟ್ರಿಕ್‌ ಜಯದೊಂದಿಗೆ ಈ ಪಂದ್ಯವನ್ನು ಆಡಲಿಳಿಯುತ್ತಿದೆ. ಹಿಂದಿನ ಪಂದ್ಯದಲ್ಲಿ ಚೆನ್ನೈಯನ್ನು ಅವರದೇ ಅಂಗಳದಲ್ಲಿ ಕೆಡವಿದ ಹೆಗ್ಗಳಿಕೆ ಲಕ್ನೋ ತಂಡದ್ದು. 211 ರನ್ನುಗಳ ಕಠಿನ ಟಾರ್ಗೆಟ್‌ ಪಡೆದಿದ್ದ ಲಕ್ನೋ 4 ವಿಕೆಟ್‌ ನಷ್ಟದಲ್ಲಿ ಇದನ್ನು ಸಾಧಿಸಿತ್ತು. ಕ್ವಿಂಟನ್‌ ಡಿ ಕಾಕ್‌ ಮತ್ತು ರಾಹುಲ್‌ ಬೇಗನೇ ಪೆವಿಲಿಯನ್‌ ಸೇರಿಕೊಂಡರೂ ಮಾರ್ಕಸ್‌ ಸ್ಟೋಯಿನಿಸ್‌ ಸಿಡಿದು ನಿಂತು ಟಿ20 ಕ್ರಿಕೆಟಿನ ಅಸಾಮಾನ್ಯ ಬ್ಯಾಟಿಂಗ್‌ ಪ್ರದರ್ಶಿಸಿದ್ದನ್ನು ಮರೆಯುವಂತಿಲ್ಲ.

ಅರ್ಥಾತ್‌, ಲಕ್ನೋ ನಿರ್ದಿಷ್ಟ ಆಟಗಾರರನ್ನು ಅವಲಂಬಿಸಿರದ ತಂಡ. ನಿಕೋಲಸ್‌ ಪೂರಣ್‌, ದೀಪಕ್‌ ಹೂಡಾ ಮತ್ತಿಬ್ಬರು ಬಿಗ್‌ ಹಿಟ್ಟರ್. ಆದರೆ ದೇವದತ್ತ ಪಡಿಕ್ಕಲ್‌ಗೆ ಇನ್ನೂ ಬ್ಯಾಟಿಂಗ್‌ ಫಾರ್ಮ್ ಕಂಡುಕೊಳ್ಳಲಾಗಿಲ್ಲ! ಆದರೆ ಲಕ್ನೋ ಬೌಲಿಂಗ್‌ ತೀವ್ರ ಘಾತಕವೇನಲ್ಲ. ರಾಜಸ್ಥಾನ್‌ದಷ್ಟು ಬಲಿಷ್ಠವೂ ಅಲ್ಲ.

ಮೊದಲ ಸುತ್ತಿನಲ್ಲಿ…
ಮಾ. 24ರಂದು ಜೈಪುರದಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ರಾಜಸ್ಥಾನ್‌ 20 ರನ್ನುಗಳಿಂದ ಲಕ್ನೋವನ್ನು ಮಣಿಸಿತ್ತು. ರಾಜಸ್ಥಾನ್‌ 4ಕ್ಕೆ 193 ರನ್‌ ಪೇರಿಸಿದರೆ, ಚೇಸಿಂಗ್‌ನಲ್ಲಿ ವಿಫ‌ಲವಾದ ಲಕ್ನೋ 6ಕ್ಕೆ 173 ರನ್‌ ಮಾಡಿ ಹಿಂದುಳಿದಿತ್ತು. ಕಪ್ತಾನನ ಆಟವಾಡಿದ ಸ್ಯಾಮ್ಸನ್‌ ಅಜೇಯ 82 ರನ್‌ ಬಾರಿಸಿದ್ದರು. ಲಕ್ನೋ ನಾಯಕ ರಾಹುಲ್‌ ಕೂಡ ಹಿಂದುಳಿಯಲಿಲ್ಲ. ಅವರದು 58 ರನ್‌ ಕೊಡುಗೆ ಆಗಿತ್ತು. ನಿಕೋಲಸ್‌ ಪೂರಣ್‌ ಔಟಾಗದೆ 64 ರನ್‌ ಹೊಡೆದಿದ್ದರು. ಬೌಲಿಂಗ್‌ನಲ್ಲಿ ಯಾರೂ ಮಿಂಚಿರಲಿಲ್ಲ.

ಟಾಪ್ ನ್ಯೂಸ್

NZ vs ENG Test: ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ಗೆ 423 ರನ್‌ ಜಯಭೇರಿ

Winter Session: ಸೋಮವಾರ 14.18 ಗಂಟೆ ಕಲಾಪ: ನೂತನ ದಾಖಲೆ

Winter Session: ಸೋಮವಾರ 14.18 ಗಂಟೆ ಕಲಾಪ: ನೂತನ ದಾಖಲೆ

ಕೆಳಮನೆಯಲ್ಲಿ ಕರ್ನಾಟಕ ಭೂ ಕಂದಾಯ ಮಸೂದೆ ಅಂಗೀಕಾರ

ಕೆಳಮನೆಯಲ್ಲಿ ಕರ್ನಾಟಕ ಭೂ ಕಂದಾಯ ಮಸೂದೆ ಅಂಗೀಕಾರ

Assembly Session: 5,317 ಕೋಟಿ ರೂ. ಧನ ವಿನಿಯೋಗ ಮಸೂದೆಗೆ ಒಪ್ಪಿಗೆ

Assembly Session: 5,317 ಕೋಟಿ ರೂ. ಧನ ವಿನಿಯೋಗ ಮಸೂದೆಗೆ ಒಪ್ಪಿಗೆ

Karnataka ಅಂತರ್ಜಲ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್‌ ಅಂಗೀಕಾರ

Karnataka ಅಂತರ್ಜಲ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್‌ ಅಂಗೀಕಾರ

Yashpal Suvarna: ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರಿಗೆ ವಿಶೇಷ ಅನುದಾನಕ್ಕೆ ಮನವಿ

Yashpal Suvarna: ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರಿಗೆ ವಿಶೇಷ ಅನುದಾನಕ್ಕೆ ಮನವಿ

Winter Session: ಉತ್ತರ ಚರ್ಚೆಯಲ್ಲಿ ಇಲ್ಲಗಳದೇ ಸದ್ದು !

Winter Session: ಉತ್ತರ ಚರ್ಚೆಯಲ್ಲಿ ಇಲ್ಲಗಳದೇ ಸದ್ದು !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NZ vs ENG Test: ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ಗೆ 423 ರನ್‌ ಜಯಭೇರಿ

1-ewqewq

T20; ವೆಸ್ಟ್‌ ಇಂಡೀಸ್‌ ಎದುರು ಬಾಂಗ್ಲಾದೇಶ ಗೆಲುವಿನ ಆರಂಭ

1-arg

T20I;ಡಬಲ್‌ ಹ್ಯಾಟ್ರಿಕ್‌ ಸಾಧನೆ ಮೆರೆದ ಆರ್ಜೆಂಟೀನಾದ ಫೆನೆಲ್‌

1-gukesh

Gukesh Dommaraju; ಚದುರಂಗ ಚಾಂಪಿಯನ್‌ ಗೆ ತವರೂರು ಚೆನ್ನೈಯಲ್ಲಿ ಭವ್ಯ ಸ್ವಾಗತ

1-mahe

MAHE;ಅ.ಭಾ.ಅಂತರ್‌ ವಿ.ವಿ. ವನಿತಾ ಟೆನಿಸ್‌: ಒಸ್ಮಾನಿಯಾ ವಿ.ವಿ. ಚಾಂಪಿಯನ್‌

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

NZ vs ENG Test: ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ಗೆ 423 ರನ್‌ ಜಯಭೇರಿ

Winter Session: ಸೋಮವಾರ 14.18 ಗಂಟೆ ಕಲಾಪ: ನೂತನ ದಾಖಲೆ

Winter Session: ಸೋಮವಾರ 14.18 ಗಂಟೆ ಕಲಾಪ: ನೂತನ ದಾಖಲೆ

ಕೆಳಮನೆಯಲ್ಲಿ ಕರ್ನಾಟಕ ಭೂ ಕಂದಾಯ ಮಸೂದೆ ಅಂಗೀಕಾರ

ಕೆಳಮನೆಯಲ್ಲಿ ಕರ್ನಾಟಕ ಭೂ ಕಂದಾಯ ಮಸೂದೆ ಅಂಗೀಕಾರ

Assembly Session: 5,317 ಕೋಟಿ ರೂ. ಧನ ವಿನಿಯೋಗ ಮಸೂದೆಗೆ ಒಪ್ಪಿಗೆ

Assembly Session: 5,317 ಕೋಟಿ ರೂ. ಧನ ವಿನಿಯೋಗ ಮಸೂದೆಗೆ ಒಪ್ಪಿಗೆ

Karnataka ಅಂತರ್ಜಲ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್‌ ಅಂಗೀಕಾರ

Karnataka ಅಂತರ್ಜಲ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್‌ ಅಂಗೀಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.