IPL : ಪ್ರಮುಖ ಆಟಗಾರರನ್ನು ವಿನಿಮಯ ಮಾಡಿಕೊಂಡ ಲಕ್ನೋ, ರಾಜಸ್ಥಾನ್
ಆಸ್ಟ್ರೇಲಿಯ ವಿರುದ್ಧದ ಟಿ 20 ಸರಣಿ ಭಾಗವಾಗಿರುವ ವೇಗಿ
Team Udayavani, Nov 22, 2023, 6:20 PM IST
ಹೊಸದಿಲ್ಲಿ: ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಬುಧವಾರ (ನ 22) ಅವೇಶ್ ಖಾನ್ ಮತ್ತು ದೇವದತ್ ಪಡಿಕ್ಕಲ್ ಅವರಿಗಾಗಿ ನೇರ ವಿನಿಮಯ ಒಪ್ಪಂದವನ್ನು ಮಾಡಿಕೊಂಡಿವೆ. 2024 ರ ಪಂದ್ಯಾವಳಿಯಲ್ಲಿ ಪಡಿಕ್ಕಲ್ ಅವರು ಸೂಪರ್ ಜೈಂಟ್ಸ್ ಫ್ರಾಂಚೈಸ್‌ನ ಭಾಗವಾಗಲು ಸಿದ್ಧರಾಗಿದ್ದು ಅವೇಶ್ ರಾಯಲ್ಸ್ ತಂಡಕ್ಕೆ ಸೇರಲಿದ್ದಾರೆ. ಈ ಬೆಳವಣಿಗೆಯನ್ನು ಲಕ್ನೋ ಸೂಪರ್ ಜೈಂಟ್ಸ್ ಮ್ಯಾನೇಜ್‌ಮೆಂಟ್ ಕ್ರಿಕ್‌ಬಜ್‌ಗೆ ದೃಢಪಡಿಸಿದೆ.
ಇದು ಪಡಿಕ್ಕಲ್ ಅವರ ಮೂರನೇ ಐಪಿಎಲ್ ಫ್ರಾಂಚೈಸಿಯಾಗಿದ್ದು, ಆರ್ ಆರ್ ನೊಂದಿಗಿನ ತನ್ನ ಆಟದ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಆರಂಭಿಕ ಬ್ಯಾಟ್ಸ್ ಮ್ಯಾನ್ ಆಗಿ ತನ್ನ ಐಪಿಎಲ್ ವೃತ್ತಿಜೀವನದ ಗಮನಾರ್ಹ ಆರಂಭದ ನಂತರ, ಎಡಗೈ ಬ್ಯಾಟ್ಸ್ ಮ್ಯಾನ್ ಆರ್ ಆರ್ ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಉತ್ಸಾಹವಿಲ್ಲದ ಆಟ ಪ್ರದರ್ಶಿಸಿದ್ದರು.
ಅವೇಶ್ 2022 ರಲ್ಲಿ ಎಲ್‌ಎಸ್‌ಜಿಗೆ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಹೊರಹೊಮ್ಮಿದ್ದರು. ಅವರು ನವದೀಪ್ ಸೈನಿ, ಕುಲದೀಪ್ ಸೇನ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಇತರ ದೇಶೀಯ ವೇಗಿಗಳಿಂದ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ.
ಅವೇಶ್ ಗುರುವಾರ ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧದ ಟಿ 20 ಸರಣಿಯ ಭಾರತ ತಂಡದ ಭಾಗವಾಗಿದ್ದಾರೆ. ಅವೇಶ್ ಅವರನ್ನು ಸೂಪರ್ ಜೈಂಟ್ಸ್ 2022 ರಲ್ಲಿ 10 ಕೋಟಿ ರೂ.ಗೆ (US$ 1.2 ಮಿಲಿಯನ್ ) ಮೆಗಾ ಹರಾಜಿನಲ್ಲಿ ಖರೀದಿಸಿತ್ತು. ರಾಯಲ್ಸ್, ಏತನ್ಮಧ್ಯೆ ಪಡಿಕ್ಕಲ್‌ಗಾಗಿ 7.75 ಕೋಟಿ ರೂ. (US$ 945,000) ಪಾವತಿಸಿತ್ತು. ಈ ವರ್ಷ ಇಬ್ಬರೂ ಆಟಗಾರರನ್ನು ಆಯಾ ಫ್ರಾಂಚೈಸಿಗಳು ಉಳಿಸಿಕೊಂಡಿದ್ದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.