IPL; ತಂಡಗಳಲ್ಲಿ ಉಳಿದುಕೊಳ್ಳಬಲ್ಲ ಸಂಭಾವ್ಯ ಆಟಗಾರರು ಯಾರ್ಯಾರು?
Team Udayavani, Sep 30, 2024, 7:15 AM IST
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಐಪಿಎಲ್ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅತ್ಯಂತ ಕುತೂಹಲಕ್ಕೆ ಕಾರಣವಾಗಿದ್ದ ಆಟಗಾರರ ಉಳಿಕೆ ನಿಯಮದ ಬಗ್ಗೆ ಇದ್ದ ಪ್ರಶ್ನೆಗಳಿಗೆ ಉತ್ತರ ಲಭಿಸಿದೆ. ಫ್ರಾಂಚೈಸಿಗಳ ಆಗ್ರಹದಂತೆ ಬಿಸಿಸಿಐ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ. ಐವರನ್ನು ನೇರವಾಗಿ ಉಳಿಸಿಕೊಳ್ಳಬಹುದು.
ಇನ್ನೊಬ್ಬರನ್ನು ಹರಾಜಿನಲ್ಲಿ ಆರ್‌ಟಿಎಂ (ರೈಟ್ ಟು ಮ್ಯಾಚ್) ಕಾರ್ಡ್ ಮೂಲಕ ಉಳಿಸಿ ಕೊಳ್ಳಬಹುದಾಗಿದೆ. ಈ ಹಿಂದೆ ನಾಲ್ವರನ್ನು ಉಳಿಸಿಕೊಳ್ಳಲು ಅವಕಾಶವಿತ್ತು. ಅಂದಮಾತ್ರಕ್ಕೆ ಇದು ಹೇಳಿಕೊಳ್ಳುವಷ್ಟು ಸುಲಭವಿಲ್ಲ. ಫ್ರಾಂಚೈಸಿ ಗಳಿಗೆ ಒಟ್ಟು ವೇತನ ಮೊತ್ತ 120 ಕೋಟಿ ಇರಲಿದ್ದು, ಇದರಲ್ಲಿ ಉಳಿಸಿಕೊಳ್ಳುವ ಆಟಗಾರರಿಗಾಗಿಯೇ 75 ಕೋಟಿ ರೂ. ವೆಚ್ಚವಾಗಲಿದೆ. 1, 2 ಮತ್ತು 3ನೇ ಆದ್ಯತೆಯ ಆಟಗಾರರಿಗೆ ಕ್ರಮವಾಗಿ 18, 14, 11 ಕೋಟಿ ರೂ. ನೀಡಬೇಕಾಗುತ್ತದೆ. 4 ಮತ್ತು 5ನೇ ಆಟಗಾರರನ್ನು ಉಳಿಸಿಕೊಳ್ಳಬೇಕಾದರೆ ಮತ್ತೆ 18 ಮತ್ತು 14 ಕೋಟಿ ರೂ. ನೀಡಬೇಕಾಗುತ್ತದೆ! ಹೀಗಾಗಿ ಫ್ರಾಂಚೈಸಿಗಳಿಗೆ ಹರಾಜಿನ ವೇಳೆ ಕಡಿಮೆ ಮೊತ್ತ ಉಳಿಯಲಿದ್ದು, ಇತರ ಆಟಗಾರರ ಖರೀದಿಗೆ ಹೊರೆಯಾಗಲಿದೆ.
ಉಳಿದುಕೊಳ್ಳಬಲ್ಲ ಸಂಭಾವ್ಯ ಆಟಗಾರರು
ಆರ್‌ಸಿಬಿ: ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರಾನ್ ಗ್ರೀನ್, ಯಶ್ ದಯಾಳ್.
ಚೆನ್ನೈ: ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜ, ಶಿವಂ ದುಬೆ, ರಚಿನ್ ರವೀಂದ್ರ, ಮತೀಶ ಪತಿರಣ, ಮಹೇಂದ್ರ ಸಿಂಗ್ ಧೋನಿ.
ಮುಂಬೈ: ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮ, ಜಸ್‌ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಅಂಶುಲ್ ಕಾಂಬೋಜ್.
ರಾಜಸ್ಥಾನ್: ಸಂಜು ಸ್ಯಾಮ್ಸನ್, ಜಾಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಟ್ರೆಂಟ್ ಬೌಲ್ಟ್, ಯಜುವೇಂದ್ರ ಚಹಲ್, ಸಂದೀಪ್ ಶರ್ಮ.
ಕೆಕೆಆರ್: ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಫಿಲ್ ಸಾಲ್ಟ್, ಸುನೀಲ್ ನಾರಾಯಣ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ.
ಗುಜರಾತ್: ಶುಭಮನ್ ಗಿಲ್, ರಶೀದ್ ಖಾನ್, ಡೇವಿಡ್ ಮಿಲ್ಲರ್, ಸಾಯಿ ಸುದರ್ಶನ್, ಮೊಹಮ್ಮದ್ ಶಮಿ, ರಾಹುಲ್ ತೆವಾಟಿಯ.
ಲಕ್ನೋ: ಕೆ.ಎಲ್. ರಾಹುಲ್, ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರಣ್, ರವಿ ಬಿಷ್ಣೋಯಿ, ಮಾರ್ಕಸ್ ಸ್ಟೋಯಿನಿಸ್, ಮಾಯಾಂಕ್ ಯಾದವ್.
ಡೆಲ್ಲಿ: ರಿಷಭ್ ಪಂತ್, ಮಿಚೆಲ್ ಮಾರ್ಷ್, ಹ್ಯಾರಿ ಬ್ರೂಕ್, ಜೇಕ್ ಫ್ರೆàಸರ್ ಮೆಕ್‌ಗರ್ಕ್, ಅಕ್ಷರ್ ಪಟೇಲ್, ಅಭಿಷೇಕ್ ಪೊರೆಲ್.
ಪಂಜಾಬ್: ಮ್ಯಾಥ್ಯೂ ಶಾರ್ಟ್, ಸ್ಯಾಮ್ ಕರನ್, ಅರ್ಷದೀಪ್ ಸಿಂಗ್, ಕಾಗಿಸೊ ರಬಾಡ, ಲಿಯಮ್ ಲಿವಿಂಗ್‌ಸ್ಟೋನ್, ಅಶುತೋಷ್ ಶರ್ಮ.
ಹೈದರಾಬಾದ್: ಪ್ಯಾಟ್ ಕಮಿನ್ಸ್, ಅಭಿಷೇಕ್ ಶರ್ಮ, ಟ್ರ್ಯಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್, ಟಿ. ನಟರಾಜನ್, ನಿತೀಶ್ ಕುಮಾರ್ ರೆಡ್ಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.