ಐಪಿಎಲ್ ವೀಕ್ಷಿಸಿದ್ದ ಬಾಲಕ ಈಗ ಐಪಿಎಲ್ ಕ್ರಿಕೆಟಿಗ
Team Udayavani, Jan 29, 2018, 6:50 AM IST
ಮೊಹಾಲಿ: ಅಪ್ಪ-ಅಮ್ಮನ ಜತೆಗೆ ಮೊಹಾಲಿಯಲ್ಲಿ ಐಪಿಎಲ್ ಮೊದಲ ಆವೃತ್ತಿ ಪಂದ್ಯವೊಂದನ್ನು ವೀಕ್ಷಿಸಿದ್ದ ಹುಡುಗನೊಬ್ಬ ಇಂದು ಸ್ವತಃ ಐಪಿಎಲ್ ಆಟಗಾರನಾಗಿ 1.8 ಕೋಟಿ ರೂ.ಗೆ ಹರಾಜಾಗಿದ್ದಾರೆ. ಅವರು ಬೇರ್ಯಾರೂ ಅಲ್ಲ. ಭಾರತ ಕಿರಿಯರ ಕ್ರಿಕೆಟ್ ತಂಡದ ಆಟಗಾರ ಶುಭ್ಮನ್ ಗಿಲ್ (18 ವರ್ಷ). ಅವರನ್ನು ಕೆಕೆಆರ್ ತಂಡ ಖರೀದಿಸಿದೆ.
2008ರಲ್ಲಿ ಶುಮ್ಮನ್ಗೆ 8 ವರ್ಷ. ಆಗ ಅವರು ತಮ್ಮ ತಂದೆ ಲಕ್ವಿಂದರ್ ಸಿಂಗ್ ಮತ್ತು ತಾಯಿ ಸೆರಾತ್ ಗಿಲ್ ಜತೆಗೂಡಿ ಮೊಹಾಲಿಯ ಪಿಸಿಎ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತು ಕಿಂಗ್ಸ್ ಇಲೆವೆನ್ ಪಂಜಾಬ್ – ಮುಂಬೈ ಇಂಡಿಯನ್ಸ್ ನಡುವಿನ ಸೆಣಸಾಟವನ್ನು ವೀಕ್ಷಿಸಿದ್ದರು. ಇಂದು ಅದೇ ಆಟಗಾರ ತಂಡವೊಂದಕ್ಕೆ ಕೋಟಿ ರೂ.ಗೆ ಮಾರಾಟಗೊಂಡು ಅಚ್ಚರಿ ಮೂಡಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.