Irani Cup 2024: ಮುಂಬಯಿಗೆ ಲೀಡ್… 274 ರನ್ ಮುನ್ನಡೆ
Team Udayavani, Oct 4, 2024, 11:07 PM IST
ಲಕ್ನೋ: ಶೇಷಭಾರತ ವಿರುದ್ಧ ಒಟ್ಟು 274 ರನ್ ಮುನ್ನಡೆ ಸಾಧಿಸಿರುವ ಮುಂಬೈ, ಗೆಲುವಿನ ಬಲವಾದ ಭರವಸೆ ಹೊಂದಿದೆ. ಒಂದು ವೇಳೆ ಶನಿವಾರ ಮುಂಬೈ ಬೇಗನೇ ಆಲೌಟಾದರೆ, ಶೇಷಭಾರತಕ್ಕೂ ಗೆಲುವಿನ ಅವಕಾಶವಿದೆ. ಹೀಗಾಗಿ ಫಲಿತಾಂಶ ರೋಚಕ ಘಟ್ಟಕ್ಕೆ ತಲುಪಿದೆ. ಮುಂಬೈನ 537 ರನ್ನುಗಳಿಗೆ ದಿಟ್ಟ ರೀತಿಯಲ್ಲೇ ಜವಾಬು ನೀಡಿದ ಶೇಷ ಭಾರತ, 4ನೇ ದಿನದಾಟದಲ್ಲಿ 416ಕ್ಕೆ ಆಲೌಟ್ ಆಯಿತು. ನಾಯಕ ಅಭಿಮನ್ಯು ಈಶ್ವರನ್ 191 ರನ್, ಧ್ರುವ ಜುರೆಲ್ 93 ರನ್ ಬಾರಿಸಿದರು. 121 ರನ್ 1ನೇ ಇನಿಂಗ್ಸ್ ಮುನ್ನಡೆ ಸಾಧಿಸಿದ ಮುಂಬೈ ದ್ವಿತೀಯ ಇನಿಂಗ್ಸ್‌ನಲ್ಲಿ ಕುಸಿದು 6ಕ್ಕೆ 153 ರನ್ ಮಾಡಿದೆ.
ಸಂಕ್ಷಿಪ್ತ ಸ್ಕೋರ್: ಮುಂಬೈ 1ನೇ ಇನಿಂಗ್ಸ್ 537 ಮತ್ತು 2ನೇ ಇನಿಂಗ್ಸ್ 153/6 (ಪೃಥ್ವಿ ಶಾ 76, ಸಾರಾಂಶ್ 67ಕ್ಕೆ 4, ಮಾನವ್ 40ಕ್ಕೆ 2). ಶೇಷಭಾರತ 1ನೇ ಇನಿಂಗ್ಸ್ 416 (ಈಶ್ವರನ್ 191, ಜುರೆಲ್ 93, ತನುಷ್101ಕ್ಕೆ 3, ಮುಲಾನಿ 122ಕ್ಕೆ 3).
ನಾಯಕನ ಮ್ಯಾರಥಾನ್ ಇನ್ನಿಂಗ್ಸ್
ಆರಂಭಕಾರ ಅಭಿಮನ್ಯು ಮಿಥುನ್ 292 ಎಸೆತಗಳಿಂದ ನಾಯಕನ ಇನ್ನಿಂಗ್ಸ್ ಕಟ್ಟಿದರು. ಅವರ 191 ರನ್ನುಗಳ ಮ್ಯಾರಥಾನ್ ಇನ್ನಿಂಗ್ಸ್ ಒಂದು ಸಿಕ್ಸರ್ ಹಾಗೂ 16 ಬೌಂಡರಿಗಳನ್ನು ಒಳಗೊಂಡಿತ್ತು. ಜುರೆಲ್ 93 ರನ್ನಿಗೆ 121 ಎಸೆತಗಳನ್ನು ಎದುರಿಸಿದರು. ಸಿಡಿಸಿದ್ದು 13 ಬೌಂಡರಿ ಹಾಗೂ ಒಂದು ಸಿಕ್ಸರ್. ಇವರಿಬ್ಬರ ಜತೆಯಾಟದಲ್ಲಿ 5ನೇ ವಿಕೆಟಿಗೆ 165 ರನ್ ಒಟ್ಟುಗೂಡಿತು. ಆದರೆ ಇಬ್ಬರೂ 3 ರನ್ ಅಂತರದಲ್ಲಿ ಪೆವಿಲಿಯನ್ ಸೇರಿಕೊಂಡ ಬಳಿಕ ಶೇಷ ಭಾರತದ ಹೋರಾಟ ಕೊನೆಗೊಂಡಿತು.
ಒಂದು ಹಂತದಲ್ಲಿ 4ಕ್ಕೆ 393 ರನ್ ಮಾಡಿ ಮುನ್ನಡೆಯ ಸೂಚನೆ ನೀಡಿದ್ದ ಶೇಷ ಭಾರತ, ಕೇವಲ 23 ರನ್ ಅಂತರದಲ್ಲಿ 6 ವಿಕೆಟ್ ಉದುರಿಸಿಕೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.