ಇರಾನಿ ಕಪ್: ಶೇಷ ಭಾರತವನ್ನು ಹಳಿಗೆ ತಂದ ಸಾಹಾ, ಪೂಜಾರ
Team Udayavani, Jan 24, 2017, 3:45 AM IST
ಮುಂಬಯಿ: ಭಾರತದ ಟೆಸ್ಟ್ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಮತ್ತು ಸದ್ಯ ಟೀಮ್ ಇಂಡಿಯಾದಿಂದ ಬೇರ್ಪಟ್ಟಿರುವ ವೃದ್ಧಿಮಾನ್ ಸಾಹಾ ಸೇರಿಕೊಂಡು “ಇರಾನಿ ಕಪ್’ ಪಂದ್ಯದಲ್ಲಿ ಶೇಷ ಭಾರತವನ್ನು ಹಳಿಗೆ ತಂದಿದ್ದಾರೆ. ತಂಡದ ಗೆಲುವಿನ ಸಾಧ್ಯತೆಯನ್ನು ಉಜ್ವಲಗೊಳಿಸಿದ್ದಾರೆ.
ರಣಜಿ ಚಾಂಪಿಯನ್ ಗುಜರಾತ್ ವಿರುದ್ಧ 132 ರನ್ ಹಿನ್ನಡೆಗೆ ಸಿಲುಕಿದ ಪೂಜಾರ ನೇತೃತ್ವದ ಶೇಷ ಭಾರತ 379 ರನ್ನುಗಳ ಕಠಿನ ಗುರಿ ಪಡೆದಿದ್ದು, 4ನೇ ದಿನದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 266 ರನ್ ಪೇರಿಸಿದೆ. ಸಾಹಾ 123 ಹಾಗೂ ಪೂಜಾರ 83 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ತಂಡಕ್ಕೆ ಆಶಾಕಿರಣ ವಾಗಿದ್ದಾರೆ. 63ಕ್ಕೆ 4 ವಿಕೆಟ್ ಉದುರಿಸಿಕೊಂಡು ತಂಡ ತೀವ್ರ ಸಂಕಟದಲ್ಲಿದ್ದಾಗ ಜತೆಗೂಡಿದ ಇವರು ಮುರಿಯದ 5ನೇ ವಿಕೆಟಿಗೆ ಈಗಾಗಲೇ 203 ರನ್ ಪೇರಿಸಿದ್ದಾರೆ.
ಮಂಗಳವಾರ ಪಂದ್ಯದ ಅಂತಿಮ ದಿನ. ಸಾಹಾ-ಪೂಜಾರ ಸಾಹಸದಿಂದ ಸಮೀಕರಣ ಸರಳಗೊಂಡಿದ್ದು, ಉಳಿದ 6 ವಿಕೆಟ್ ನೆರವಿನಿಂದ 113 ರನ್ ಗಳಿಸಬೇಕಿದೆ.
ಸಹಾಯಕ್ಕೆ ನಿಂತ ಪೂಜಾರ, ಸಾಹಾ
ರೆಸ್ಟ್ ಆಫ್ ಇಂಡಿಯಾದ ದ್ವಿತೀಯ ಸರದಿಯ ಆರಂಭ ಕೂಡ ಶೋಚನೀಯವಾಗಿತ್ತು. ಅಖೀಲ್ ಹೆರ್ವಾಡ್ಕರ್ (20), ಅಭಿನವ್ ಮುಕುಂದ್ (19), ಕರುಣ್ ನಾಯರ್ (7) ಮತ್ತು ಮನೋಜ್ ತಿವಾರಿ (7) ಬೇಗನೇ ಆಟ ಮುಗಿಸಿ ಪೆವಿಲಿಯನ್ ಸೇರಿಕೊಂಡರು. ಆಗ ಗುಜರಾತ್ ಸ್ಪಷ್ಟ ಗೆಲುವು ಸಾಧಿಸುವ ಎಲ್ಲ ಸೂಚನೆ ಲಭಿಸಿದ್ದು ಸುಳ್ಳಲ್ಲ. ಆದರೆ 5ನೇ ವಿಕೆಟಿಗೆ ಜತೆಗೂಡಿದ ಪೂಜಾರ-ಸಾಹಾ ಗುಜರಾತ್ ದಾಳಿಯನ್ನು ಮೆಟ್ಟಿ ನಿಂತರು.
ಮೊದಲ ಇನ್ನಿಂಗ್ಸ್‌ನಲ್ಲಿ ಗರಿಷ್ಠ 86 ರನ್ ಬಾರಿಸಿದ್ದ ಪೂಜಾರ ಮತ್ತೂಮ್ಮೆ ನಾಯಕನ ಆಟವಾಡಿದ್ದು, 181 ಎಸೆತಗಳಿಂದ 83 ರನ್ ಮಾಡಿ ಕ್ರೀಸಿಗೆ ಅಂಟಿಕೊಂಡಿದ್ದಾರೆ. ಇದರಲ್ಲಿ 10 ಬೌಂಡರಿ ಸೇರಿದೆ. ಸಾಹಾ ಪ್ರಥಮ ಇನ್ನಿಂಗ್ಸ್
ನಲ್ಲಿ ಕೇವಲ 5 ರನ್ ಮಾಡಿದ್ದರು. ಆದರೆ ಸೋಮವಾರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, 214 ಎಸೆತ ಎದುರಿಸಿ 123 ರನ್ ಮಾಡಿದ್ದಾರೆ. ಇದರಲ್ಲಿ 16 ಬೌಂಡರಿ, 3 ಸಿಕ್ಸರ್ ಸೇರಿದೆ.
ಇದು ಶೇಷ ಭಾರತ ತಂಡದ ಕೊನೆಯ ಬ್ಯಾಟಿಂಗ್ ಸ್ಪೆಷಲಿಸ್ಟ್ ಜೋಡಿ ಎನಿಸಿದೆ. ಇವರನ್ನು ಬೇಗನೇ ಔಟ್ ಮಾಡಿದರಷ್ಟೇ ಗುಜ ರಾತ್ ಗೆಲುವು ಕಾಣಬಹುದು. ಬ್ಯಾಟಿಂಗಿಗೆ ಬರಬೇಕಾದವರು ಕುಲದೀಪ್ ಯಾದವ್, ಶಾಬಾಜ್ ನದೀಂ, ಪಂಕಜ್ ಸಿಂಗ್, ಸಿದಾ§ರ್ಥ ಕೌಲ್ ಮತ್ತು ಮೊಹಮ್ಮದ್ ಸಿರಾಜ್. ಇವರಲ್ಲಿ ಸಿರಾಜ್ ಹೊರತುಪಡಿಸಿ ಮೊದಲ ಇನ್ನಿಂಗ್ಸಿನಲ್ಲಿ ಯಾರೂ ಕ್ಲಿಕ್ ಆಗಿರಲಿಲ್ಲ.
3ನೇ ದಿನದ ಅಂತ್ಯಕ್ಕೆ 8ಕ್ಕೆ 227 ರನ್ ಗಳಿಸಿದ್ದ ಗುಜರಾತ್, ಸೋಮವಾರ ಬ್ಯಾಟಿಂಗ್ ಮುಂದುವರಿಸಿ 246ಕ್ಕೆ ಆಲೌಟ್ ಆಯಿತು.
ಸಂಕ್ಷಿಪ್ತ ಸ್ಕೋರ್
ಗುಜರಾತ್-358 ಮತ್ತು 246 (ಪಾಂಚಾಲ್ 73, ಗಾಂಧಿ 70, ಪಾರ್ಥಿವ್ 32, ನದೀಂ 64ಕ್ಕೆ 4, ಕೌಲ್ 70ಕ್ಕೆ 3, ಸಿರಾಜ್ 39ಕ್ಕೆ 2). ಶೇಷ ಭಾರತ-226 ಮತ್ತು 4 ವಿಕೆಟಿಗೆ 266 (ಸಾಹಾ ಬ್ಯಾಟಿಂಗ್ 123, ಪೂಜಾರ ಬ್ಯಾಟಿಂಗ್ 83, ಹಾರ್ದಿಕ್ ಪಟೇಲ್ 59ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.