ಸ್ಟೇಡಿಯಂಗೆ ಬಂದು ಫ‌ುಟ್‌ಬಾಲ್‌ ಪಂದ್ಯ ಕಣ್ತುಂಬಿಕೊಂಡ ಇರಾನ್‌ ವನಿತೆಯರು!

ತೆರವುಗೊಂಡಿತು 40 ವರ್ಷಗಳ ನಿಷೇಧ

Team Udayavani, Oct 11, 2019, 7:50 PM IST

IRAN-WOMENS

ಟೆಹ್ರಾನ್‌: ಟೆಹ್ರಾನ್‌ನ “ಆಜಾದಿ ಸ್ಟೇಡಿಯಂ’ನಲ್ಲಿ ಗುರುವಾರ ಹಬ್ಬದ ವಾತಾವರಣ. ಸಾವಿರಾರು ಇರಾನ್‌ ಮಹಿಳೆಯರು ರಾಷ್ಟ್ರಧ್ವಜವನ್ನು ಹೊದ್ದುಕೊಂಡು ತಮ್ಮ ದೇಶದ ಫ‌ುಟ್‌ಬಾಲ್‌ ತಂಡವನ್ನು ಹುರಿದುಂಬಿಸಿ ಸಂಭ್ರಮಿಸುತ್ತಿದ್ದರು. ಅವರ ಈ ಖುಷಿಗೆ ವಿಶೇಷ ಕಾರಣವಿದ್ದಿತ್ತು. ಹಲವು ದಶಕಗಳ ಬಳಿಕ ಇರಾನ್‌ ಮಹಿಳೆಯರಿಗೆ ಸ್ಟೇಡಿಯಂಗೆ ಹೋಗಿ ಮುಕ್ತವಾಗಿ ಪಂದ್ಯವನ್ನು ವೀಕ್ಷಿಸುವ ಅವಕಾಶ ದೊರೆತಿತ್ತು!

ಕೆಲವರು ಹಸಿರು, ಬಿಳಿ ಮತ್ತು ಕೆಂಪು ಬಣ್ಣದ ಧ್ವಜವನ್ನು ಹೊದ್ದುಕೊಂಡರೆ, ಕೆಲವರು ಧ್ವಜದ ಬಣ್ಣವನ್ನು ಮುಖದಲ್ಲಿ ಚಿತ್ರಿಸಿಕೊಂಡಿದ್ದರು. ಇದು ಫ‌ುಟ್‌ಬಾಲ್‌ನ ಮಹಿಳಾ ಅಭಿಮಾನಿಗಳಿಗೆ ಸಿಕ್ಕಿರುವ ಅಪೂರ್ವ ಗೆಲುವು ಎನ್ನುವುದನ್ನು ಅವರ ನಗುವೇ ಸಾರುತ್ತಿತ್ತು. ಇರಾನ್‌ ತಂಡ ಗೋಲು ಬಾರಿಸಿದಾಗಲೆಲ್ಲ ಮಹಿಳೆಯರ ಸಂಭ್ರಮದ ಕೂಗು ಮುಗಿಲು ಮುಟ್ಟುತ್ತಿತ್ತು!

40 ವರ್ಷಗಳ ನಿಷೇಧ
ಸಂಪ್ರದಾಯವಾದಿ ದೇಶವಾದ ಇರಾನಿನ ಧಾರ್ಮಿಕ ಮುಖಂಡರು ಸುಮಾರು 40 ವರ್ಷಗಳ ಹಿಂದೆ, ಮಹಿಳೆಯರು ಫ‌ುಟ್‌ಬಾಲ್‌ ಮತ್ತು ಇನ್ನಿತರ ಆಟಗಳನ್ನು ನೋಡಬಾರದು ಎಂದು ಫ‌ತ್ವಾ ಹೊರಡಿಸಿದ್ದರು. ಚಡ್ಡಿ, ಟಿ-ಶರ್ಟ್‌ ಧರಿಸಿ ಆಡುವ ಪುರುಷರ ದೇಹಗಳನ್ನು ಮಹಿಳೆಯರು ನೋಡಬಾರದು ಎನ್ನುವುದೇ ಈ ಫ‌ತ್ವಾ ಹಿಂದಿದ್ದ ತರ್ಕ.

ಕಳೆದ ವರ್ಷ ಸಹಾರ್‌ ಖೋಡಯರಿಯ ಎಂಬ ಯುವತಿ ಯುವಕನಂತೆ ವೇಷ ಧರಿಸಿ ಫ‌ುಟ್‌ಬಾಲ್‌ ಪಂದ್ಯ ವೀಕ್ಷಿಸಲು ಹೋಗಿ ಸಿಕ್ಕಿ ಬಿದ್ದಿದ್ದಳು. ಈ ತಪ್ಪಿಗೆ ಜೈಲು ಶಿಕ್ಷೆಯಾಗಬಹುದು ಎಂದು ಹೆದರಿ ಆಕೆ ನ್ಯಾಯಾಲಯದಲ್ಲೇ ಆತ್ಮಾಹುತಿ ಮಾಡಿಕೊಂಡ ಘಟನೆಯೂ ಸಂಭವಿಸಿತ್ತು.

ಫಿಫಾ ಎಚ್ಚರಿಕೆ
ಈ ಘಟನೆಯ ಬಳಿಕ ಎಚ್ಚೆತ್ತ ಫಿಫಾ ಮಹಿಳೆಯರಿಗೆ ಯಾವುದೇ ನಿರ್ಬಂಧವಿಲ್ಲದೆ ಫ‌ುಟ್‌ಬಾಲ್‌ ವೀಕ್ಷಿಸಲು ಅವಕಾಶ ನೀಡಬೇಕು, ಇದಕ್ಕೆ ತಪ್ಪಿದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿತ್ತು. ವಿಶ್ವ ಫ‌ುಟ್‌ಬಾಲ್‌ ಕೂಟದಿಂದ ಬಹಿಷ್ಕಾರಕ್ಕೆ ಒಳಗಾಗುವ ಭೀತಿಯಲ್ಲಿದ್ದ ಇರಾನ್‌, ಕಡೆಗೂ ಮಹಿಳೆಯರಿಗೆ ಫ‌ುಟ್‌ಬಾಲ್‌ ವೀಕ್ಷಿಸಲು ಅನುಮತಿ ನೀಡಿತು. ಇದರ ಪರಿಣಾಮವೆಂಬಂತೆ, ಗುರುವಾರ ಮೊದಲ ಬಾರಿಗೆ ಮಹಿಳೆಯರು ಸ್ಟೇಡಿಯಂ ಮುಗಿಬಿದ್ದು ಸಂಭ್ರಮಿಸಿದರು.
2022ರ ವಿಶ್ವಕಪ್‌ಗಾಗಿ ಇರಾನ್‌ ಮತ್ತು ಕಾಂಬೊಡಿಯ ನಡುವೆ ನಡೆದ ಅರ್ಹತಾ ಪಂದ್ಯ ಮಹಿಳೆಯರ ಹೋರಾಟಕ್ಕೆ ದಕ್ಕಿದ ಗೆಲುವಿಗೆ ಸಾಕ್ಷಿಯಾಯಿತು. ಸುಮಾರು 4,500 ಮಹಿಳೆಯರು ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ವೀಕ್ಷಿಸಿದರು. ಈ ಪಂದ್ಯವನ್ನು ಇರಾನ್‌ 14-0 ಭಾರೀ ಅಂತರದಲ್ಲಿ ಜಯಿಸಿದೆ.

ಟಾಪ್ ನ್ಯೂಸ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.