ಚೆನ್ನೈ ಸೂಪರ್ ಕಿಂಗ್ಸ್ ಗೆ ನೆಟ್ ಬೌಲರ್ ಆಗಿ ಸೇರಿದ ಐರ್ಲೆಂಡ್ ತಂಡದ ಪ್ರಮುಖ ಬೌಲರ್
Team Udayavani, Mar 8, 2022, 11:26 AM IST
ಮುಂಬೈ: ಇನ್ನು ಕೆಲವೇ ವಾರಗಳಲ್ಲಿ ಆರಂಭವಾಗಲಿರುವ ಐಪಿಎಲ್ ಕೂಟಕ್ಕೆ ತಂಡಗಳು ತಯಾರಿ ಆರಂಭಿಸಿವೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ಅಭ್ಯಾಸದಲ್ಲಿ ತೊಡಗಿದ್ದು, ಇದೀಗ ಅಂತಾರಾಷ್ಟ್ರೀಯ ಬೌಲರ್ ಒಬ್ಬ ನೆಟ್ ಬೌಲರ್ ಆಗಿ ಸೇರಿಕೊಂಡಿದ್ದಾರೆ.
ಐರ್ಲೆಂಡ್ ನ ವೇಗಿ ಜೋಶ್ ಲಿಟಲ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡ ನೆಟ್ ಬೌಲರ್ ಆಗಿ ಕೂಡಿಕೊಂಡಿದ್ದಾರೆ. “ಮುಂಬರುವ ಐಪಿಎಲ್ನ ಆರಂಭಿಕ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಅವಕಾಶ ಪಡೆದ ಜೋಶ್ ಲಿಟಲ್ ಗೆ ಅಭಿನಂದನೆಗಳು. ಸಿಎಸ್ಕೆ ಗೆ ನೆಟ್ ಬೌಲರ್ ಆಗಿ ಅದ್ಭುತ ಅನುಭವ ಪಡೆಯಲಿದ್ದಾರೆ” ಎಂದು ಕ್ರಿಕೆಟ್ ಐರ್ಲೆಂಡ್ ಟ್ವೀಟ್ ಮಾಡಿದೆ.
22 ವರ್ಷದ ಜೋಶ್ ಲಿಟಲ್ ಇದುವರೆಗೆ ಐರ್ಲೆಂಡ್ ಪರವಾಗಿ 19 ಏಕದಿನ ಮತ್ತು 24 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಮತ್ತು ಟಿ20 ಮಾದರಿಯಲ್ಲಿ ಕ್ರಮವಾಗಿ 30 ಮತ್ತು 31 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:ಪಾಕಿಸ್ಥಾನದಲ್ಲೂ ವಿರಾಟ್ ಜಪ; ರಾವಲ್ಪಿಂಡಿಯಲ್ಲಿ ಗಮನಸೆಳೆದ ಅಭಿಮಾನಿಯ ಪೋಸ್ಟರ್
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸದ್ಯ ಲಭ್ಯವಿರುವ ಆಟಗಾರರೊಂದಿಗೆ ಸೂರತ್ ನ ಲಾಲ್ ಭಾಯ್ ಕಾಂಟ್ರಾಕ್ಟರ್ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.