ಕೋಚ್ ಆಯ್ಕೆಯಲ್ಲಿ ಸಣ್ಣತನ ತೋರಲಾಗಿದೆ: ಇರ್ಫಾನ್ ಪಠಾಣ್ ಗಂಭೀರ ಆರೋಪ
Team Udayavani, Jul 16, 2023, 11:32 AM IST
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್, ಮಾಜಿ ಹಿರಿಯ ಕ್ರಿಕೆಟಿಗ ಕಿರಣ್ ಮೋರೆ ವಿರುದ್ಧ ಬಲವಾದ ಆರೋಪ ಮಾಡಿದ್ದಾರೆ. ಬರೋಡ ರಣಜಿ ತಂಡಕ್ಕೆ ನೂತನ ಕೋಚ್ ಆಯ್ಕೆ ಮಾಡುವಾಗ ಮೋರೆ, ಸಣ್ಣತನ ತೋರಿದ್ದಾರೆಂದು ಬರೋಡ ಕ್ರಿಕೆಟ್ ಸಂಸ್ಥೆಗೆ ಇರ್ಫಾನ್ ಮೈಲ್ ಮಾಡಿದ್ದಾರೆ.
ಸ್ಥಳೀಯ ಮಾಜಿ ಕ್ರಿಕೆಟಿಗ ಕಾನರ್ ವಿಲಿಯಮ್ಸ್ರನ್ನು ತಂಡಕ್ಕೆ ಕೋಚ್ ಮಾಡಲು ಇರ್ಫಾನ್ ಶಿಫಾರಸು ಮಾಡಿದ್ದರು. ಆದರೆ ಮೋರೆ ಅದನ್ನು ಒಪ್ಪಲಿಲ್ಲ. ತನಗೆ ವಿಲಿಯಮ್ಸ್ ಹೆಲೋ ಹೇಳಲಿಲ್ಲವೆಂಬ ಕಾರಣವನ್ನಿಟ್ಟುಕೊಂಡು ಮೋರೆ, ವಿಲಿಯಮ್ಸ್ಗೆ ಕೋಚ್ ಸ್ಥಾನ ತಪ್ಪಿಸಿದ್ದಾರೆ. ಇದು ಬರೋಡ ಕ್ರಿಕೆಟ್ ಸಂಸ್ಥೆಯ ಅಧಃಪತನದ ಸಂಕೇತ ಎಂದು ಕಠಿಣವಾಗಿ ಹೇಳಿದ್ದಾರೆ.
ಸದ್ಯ ಬರೋಡ ಸಂಸ್ಥೆ ಮುಂದಿನ ರಣಜಿ ಋತುವಿಗೆ ಮುಕುಂದರ್ ಪರ್ಮಾರ್ರನ್ನು ಕೋಚ್ ಆಗಿ ಆಯ್ಕೆ ಮಾಡಿದೆ. ಅವರು ಗುಜರಾತ್ ಮಾಜಿ ಬ್ಯಾಟರ್ ಆಗಿ ಹೆಸರು ಮಾಡಿದ್ದಾರೆ.
ಈ ವಿವಾದಕ್ಕೆ ಸಂಬಂಧಪಟ್ಟಂತೆ ಇರ್ಫಾನ್ ಪಠಾಣ್ ಆಗಲೀ, ಕಿರಣ್ ಮೋರೆಯಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬರೋಡ ಕ್ರಿಕಟ್ ಸಂಸ್ಥೆಯ ಅಭಿಪ್ರಾಯವೇನು ಎಂದೂ ಗೊತ್ತಾಗಿಲ್ಲ. ಆದರೆ ಇದು ಭಾರತ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.