ಪತ್ನಿ ಚಿತ್ರ ಪ್ರಕಟಿಸಿ ಬೈಸಿಕೊಂಡ ಇರ್ಫಾನ್!
Team Udayavani, Jul 19, 2017, 4:50 AM IST
ನವದೆಹಲಿ: ಭಾರತ ಕ್ರಿಕೆಟ್ ತಂಡದ ಖ್ಯಾತ ಆಲ್‌ರೌಂಡರ್ ಇರ್ಫಾನ್ ಪಠಾಣ್ ಇಸ್ಲಾಂ ಮೂಲಭೂತವಾದಿಗಳ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಪತ್ನಿ ಸಫಾ ಬೇಗ್ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದೇ ಇದಕ್ಕೆ ಕಾರಣ! ಅಂತಹದ್ದೇನಾಯಿತು ಎಂದು ಕೇಳುತ್ತೀರಾ? ಚಿತ್ರದಲ್ಲಿ ಸಫಾ ಬೇಗ್ ಕೈಗಳು ಕಾಣುತ್ತಿವೆ, ಉಗುರುಗಳಿಗೆ ಬಣ್ಣ ಹಚ್ಚಲಾಗಿದೆ, ಇವೆಲ್ಲ ಇಸ್ಲಾಂಗೆ ವಿರುದ್ಧ ಎಂಬುದೇ ಆಕ್ರೋಶಕ್ಕೆ ಕಾರಣ.
ಅಭಿಮಾನಿಗಳ ವಾದ ಏನು?: ಕೆಲವರು ಬೆರಳಿಗೆ ಬಣ್ಣ ಹಚ್ಚಿದ್ದೀರಲ್ಲ ಇದು ಇಸ್ಲಾಂಗೆ ವಿರುದ್ಧ ಎಂದಿದ್ದಾರೆ. ಇನ್ನು ಕೆಲವರು ಆಕೆ ಕೈ ಕಾಣುವಂತೆ ಬುರ್ಖಾ ಹಾಕಿದ್ದಾರಲ್ಲ ಎಂದು ಆಕ್ಷೇಪಿಸಿದ್ದಾರೆ. ಇನ್ನು ಕೆಲವರು ನಿಮಗೆ ಯಾವುದೇ ಕೆಲಸವಿಲ್ಲದಿರುವುದರಿಂದ ಪತ್ನಿಯನ್ನು ಎಲ್ಲರಿಗೂ ತೋರಿಸುತ್ತಿದ್ದೀರಿ. ಬದಲಿಗೆ ತಂದೆಯ ಯೋಗಕ್ಷೇಮ ನೋಡಿಕೊಳ್ಳಿ ಎಂದು ಟೀಕಿಸಿದ್ದಾರೆ. ಇರ್ಫಾನ್ ಅವರು ಕಳೆದ ವರ್ಷ ಮೆಕ್ಕಾದಲ್ಲಿ ಜೆಡ್ಡಾ ಮೂಲದ ರೂಪದರ್ಶಿ ಸಫಾ ಬೇಗ್‌ರನ್ನು ಮೆಕ್ಕಾದಲ್ಲಿ ವಿವಾಹವಾಗಿದ್ದರು.
ಶಮಿ ವಿರುದ್ಧವೂ ಮುಗಿಬಿದ್ದಿದ್ದರು: ಇದೇ ವರ್ಷ ಕ್ರಿಕೆಟಿಗ ಮೊಹಮ್ಮದ್ ಶಮಿ ತಮ್ಮ ಪತ್ನಿಯ ಜತೆಗಿರುವ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಪ್ರಕಟಿಸಿದ್ದರು. ಆಗಲೂ ವಿವಾದವಾಗಿತ್ತು. ಆ ಚಿತ್ರದಲ್ಲಿ ಶಮಿ ಪತ್ನಿ ಬುರ್ಖಾ ಧರಿಸಿರಲಿಲ್ಲ. ಮುಖ, ತೋಳು, ಭುಜ ಕಾಣುವ ಉಡುಗೆಯನ್ನು ಧರಿಸಿದ್ದರು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಕೆಲವು ಕ್ರಿಕೆಟಿಗರು ಶಮಿ ಬೆಂಬಲಕ್ಕೆ ಬಂದಿದ್ದರು. ಶಮಿ ಈ ಬೆಳವಣಿಗೆಯನ್ನು ತೀವ್ರವಾಗಿ ವಿರೋಧಿಸಿದ್ದರು.
ಸಾನಿಯಾ ಮೇಲೂ ಆಕ್ರೋಶ: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ತಮ್ಮ ಟೆನಿಸ್ ವೃತ್ತಿ ಜೀವನದ ಆರಂಭದಲ್ಲಿ ಭಾರೀ ಟೀಕೆಗೆ ಒಳಗಾಗಿದ್ದರು. ಸಾನಿಯಾ ಪಂದ್ಯದ ವೇಳೆ ಮಿನಿ ಸ್ಕರ್ಟ್ ಧರಿಸಿ ಆಡುತ್ತಿದ್ದರು. ಇದು ಮುಸ್ಲಿಂ ಧರ್ಮಕ್ಕೆ ವಿರೋಧ ಎಂದು ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಆದರೆ ಸಾನಿಯಾ ಇದ್ಯಾವುದಕ್ಕೂ ಕ್ಯಾರೆ ಎನ್ನದೇ ಮಿನಿ ಸ್ಕರ್ಟ್‌ನಲ್ಲಿಯೇ ಆಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.