Irfan Pathan: ಮದುವೆಯಾದ 8 ವರ್ಷದ ಬಳಿಕ ಪತ್ನಿ ಮುಖ ಕಾಣುವ ಫೋಟೋ ಹಂಚಿಕೊಂಡ ಪಠಾಣ್
Team Udayavani, Feb 4, 2024, 10:22 AM IST
ಮುಂಬಯಿ: ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಕ್ರಿಕೆಟ್ ನಿಂದ ದೂರವಾದರೂ, ಕ್ರಿಕೆಟ್ ಅವರಿಂದ ದೂರವಾಗಿಲ್ಲ. ಕಾಮೆಂಟ್ರಿ ಮಾಡುತ್ತಾ, ಲೆಜೆಂಡ್ಸ್ ಕ್ರಿಕೆಟ್ ನಲ್ಲಿ ಅವರು ಕ್ರಿಕೆಟ್ ಆತ್ಮೀಯತೆಯನ್ನು ಬಿಟ್ಟುಕೊಟ್ಟಿಲ್ಲ.
ಇರ್ಫಾನ್ ಪಠಾಣ್ ತಮ್ಮ 8ನೇ ವಿವಾಹ ವಾರ್ಷಿಕೋತ್ಸವ ದಿನವನ್ನು ತನ್ನ ಪತ್ನಿ ಸೈಫ್ ಬೇಗ್ ಅವರೊಂದಿಗೆ ಸರಳಾಗಿ ಆಚರಿಸಿಕೊಂಡಿದ್ದಾರೆ. ವಿಶೇಷವೆಂದರೆ ಇದೇ ಸಂಭ್ರಮದಲ್ಲಿ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಪತ್ನಿಯ ಮುಖವನ್ನು ಅವರು ಬಹಿರಂಗಪಡಿಸಿದ್ದಾರೆ.
“ಈಕೆ ನನ್ನ ಮೂಡ್ ಬೂಸ್ಟರ್, ಹಾಸ್ಯನಟಿ, ತೊಂದರೆ ಕೊಡುವವಳು, ಒಡನಾಡಿ, ನನ್ನ ಮಕ್ಕಳ ತಾಯಿ ಸ್ನೇಹಿತೆ, ನನ್ನ ಪ್ರೀತಿಯ ಹೆಂಡತಿ 8ನೇ ವಿವಾಹ ವಾರ್ಷಿಕದ ಶುಭಾಶಯ” ಎಂದು ಪಠಾಣ್ ಬರೆದುಕೊಂಡಿದ್ದಾರೆ.
ಈ ಹಿಂದೆ ಪಠಾಣ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುತ್ತಿದ್ದರು. ಆದರೆ ಮುಖವನ್ನು ಬಹಿರಂಗಪಡಿಸದ್ದಕ್ಕೆ ಹಲವರು ಟೀಕಿಸಿದ್ದರು.
2014 ರಲ್ಲಿ ಭೇಟಿಯಾದ ಸೈಫ್ ಹಾಗೂ ಪಠಾಣ್, 2016 ರಲ್ಲಿ ವಿವಾಹವಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
Infinite roles mastered by one soul – mood booster, comedian, troublemaker, and the constant companion, friend, and mother of my children. In this beautiful journey, I cherish you as my wife. Happy 8th my love ❤️ pic.twitter.com/qAUW8ndFAJ
— Irfan Pathan (@IrfanPathan) February 3, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
MUST WATCH
ಹೊಸ ಸೇರ್ಪಡೆ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.