ಇದು ಮೆಸ್ಸಿ, ರೊನಾಲ್ಡೊ ಸ್ಟೋರಿ ಅಲ್ಲ…ನಮ್ಮ ಸುನೀಲ್ ಚೆಟ್ರಿ ಯಶೋಗಾಥೆ
ಭಾರತೀಯ ಫುಟ್ಬಾಲಿಗನಿಗೆ ಫಿಫಾ ವಿಶೇಷ ಗೌರವ; ಮೂರು ಕಂತುಗಳಲ್ಲಿ "ಕ್ಯಾಪ್ಟನ್ ಫೆಂಟಾಸ್ಟಿಕ್' ಸಾಕ್ಷ್ಯಚಿತ್ರ
Team Udayavani, Sep 29, 2022, 7:40 AM IST
ಹೊಸದಿಲ್ಲಿ: “ನಿಮಗೆಲ್ಲ ರೊನಾಲ್ಡೊ ಮತ್ತು ಮೆಸ್ಸಿ ಬಗ್ಗೆ ಗೊತ್ತೇ ಇದೆ. ಆದರೆ ಈಗ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಸಕ್ರಿಯರಾಗಿರುವ ಆಟಗಾರರಲ್ಲಿ ಮೂರನೇ ಅತ್ಯಧಿಕ ಗೋಲು ಬಾರಿಸಿರುವ ಆಟಗಾರನ ಬಗ್ಗೆ ತಿಳಿದುಕೊಳ್ಳುವ ಸಮಯ…’ ಎಂದು ಸಾರುವ ಮೂಲಕ ಜಾಗತಿಕ ಫುಟ್‌ಬಾಲ್‌ನ ಆಡಳಿತ ಸಂಸ್ಥೆ “ಫಿಫಾ’ ಭಾರತೀಯ ತಂಡದ ನಾಯಕ ಸುನೀಲ್ ಚೆಟ್ರಿ ಅವರಿಗೆ ವಿಶೇಷ ಗೌರವವೊಂದನ್ನು ಸಲ್ಲಿಸಿದೆ.
ಸುನೀಲ್ ಚೆಟ್ರಿ ಕುರಿತ 3 ಕಂತುಗಳ “ಕ್ಯಾಪ್ಟನ್ ಫೆಂಟಾಸ್ಟಿಕ್’ ಎಂಬ ಸಾಕ್ಷ್ಯಚಿತ್ರವನ್ನು ಫಿಫಾ ತಯಾರಿಸಿದ್ದು, ಇದನ್ನು “ಫಿಫಾ+’ನಲ್ಲಿ ವೀಕ್ಷಿಸಬಹುದಾಗಿದೆ.
ಸಾಕ್ಷ್ಯಚಿತ್ರದ ಮೊದಲ ಸರಣಿಯು ಸುನೀಲ್ ಚೆಟ್ರಿ ಅವರ ಫುಟ್‌ಬಾಲ್ ಬದುಕಿನ ಆರಂಭ, 20ನೇ ವರ್ಷದಲ್ಲಿ ಭಾರತೀಯ ತಂಡಕ್ಕೆ ಪದಾರ್ಪಣೆ ಮಾಡಿದ ದಿನಗಳು, ಆತ್ಮೀಯರ ಹಾಗೂ ಸಹ ಆಟಗಾರರ ಪ್ರಶಂಸೆಗಳನ್ನು ಒಳಗೊಂಡಿದೆ.
ದ್ವಿತೀಯ ಸರಣಿಯಲ್ಲಿ ಸುನೀಲ್ ಚೆಟ್ರಿ ರಾಷ್ಟ್ರೀಯ ತಂಡದ ಪರ ತೋರ್ಪಡಿಸಿದ ಅದ್ಭುತ ಆಟ, ವಿಶ್ವದ ಅಗ್ರಮಾನ್ಯ ಕ್ಲಬ್‌ಗಳ ಪರ ಆಡುವ ಕನಸು ಮತ್ತು ಇದು ನನಸಾದ ಬಗೆಗಿನ ಸುಂದರ ಚಿತ್ರಣವಿದೆ. ಅಂತಿಮ ಕಂತಿನಲ್ಲಿ ಚೆಟ್ರಿ ಜಾಗತಿಕ ಫುಟ್‌ಬಾಲ್ ಹಾಗೂ ವೈಯಕ್ತಿಕ ಬದುಕಿನಲ್ಲಿ ಏರಿದ ಎತ್ತರವನ್ನು ಚಿತ್ರಿಸಲಾಗಿದೆ.
131 ಪಂದ್ಯ, 84 ಗೋಲು
ಭಾರತದಲ್ಲಿ ಕ್ರಿಕೆಟ್‌ಗೆ ಇರುವಷ್ಟು ಜನಪ್ರಿಯತೆ ಫುಟ್‌ಬಾಲ್‌ಗೆ ಇಲ್ಲ. ಆದರೆ ಸುನೀಲ್ ಚೆಟ್ರಿ ಹೆಸರು ಕೇಳಿದೊಡನೆ ದೇಶದ ಕ್ರೀಡಾಭಿಮಾನಿಗಳು ರೋಮಾಂಚನಗೊಳ್ಳುತ್ತಾರೆ. ಸಮಕಾಲೀನ ಫುಟ್‌ಬಾಲ್‌ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಧಿಕ ಗೋಲು ಬಾರಿಸಿರುವ ಸಾಧಕ ಈ ಸುನೀಲ್ ಚೆಟ್ರಿ. ರೊನಾಲ್ಡೊ 117, ಮೆಸ್ಸಿ 90 ಗೋಲು ಹೊಡೆದರೆ, ಚೆಟ್ರಿ ಸಿಡಿಸಿದ್ದು 84 ಗೋಲು.
ಚೆಟ್ರಿ 2005ರಲ್ಲಿ ಮೊದಲ ಸಲ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಈವರೆಗೆ ಆಡಿದ ಪಂದ್ಯಗಳ ಸಂಖ್ಯೆ 131. ಮಂಗಳವಾರ ವಿಯೆಟ್ನಾಂ ವಿರುದ್ಧ ಆಡಿದ ಪಂದ್ಯವೂ ಇದರಲ್ಲಿ ಸೇರಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.