ಸ್ವಹಿತಾಸಕ್ತಿ ಸಂಘರ್ಷದಲ್ಲಿ ಸಿಲುಕಿದ್ದಾರಾ ನಾಯಕ ವಿರಾಟ್ ಕೊಹ್ಲಿ?
Team Udayavani, Jan 7, 2021, 4:00 PM IST
ಮುಂಬೈ: ಸ್ವಹಿತಾಸಕ್ತಿ ಪ್ರಕರಣಗಳು ಭಾರತೀಯ ಕ್ರಿಕೆಟ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಬಿರುಗಾಳಿಯೆಬ್ಬಿಸುತ್ತ ಬಂದಿವೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನೂ ಇದು ಬಿಟ್ಟಿಲ್ಲ. ಈ ವಿವಾದಕ್ಕೆ ಹೊಸಸೇರ್ಪಡೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ.
ಬೆಂಗಳೂರು ಮೂಲದ ಸ್ಟಾರ್ಟಪ್ ಗ್ಯಾಲಕ್ಟಸ್ ಫನ್‌ವೇರ್ ಟೆಕ್ನಾಲಜಿ ಪ್ರೈವೇಟ್ ಲಿ.ನಲ್ಲಿ 2019ರಲ್ಲಿ ಹೂಡಿಕೆ ಮಾಡಿದ್ದಾರೆ. ಆ ಕಂಪನಿಯ ಕ್ರೀಡಾಆ್ಯಪ್ “ಮೊಬೈಲ್ ಪ್ರೀಮಿಯರ್ ಲೀಗ್’ನ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾರೆ. ಎಂಪಿಎಲ್ ಭಾರತ ಕ್ರಿಕೆಟ್ ತಂಡದ ಕಿಟ್ ಪ್ರಾಯೋಜಕನಾಗಿರುವುದರಿಂದ ಕೊಹ್ಲಿ ಸ್ವಹಿತಾಸಕ್ತಿ ಸಂಘರ್ಷದ ಸಮಸ್ಯೆ ಎದುರಿಸುತ್ತಿದ್ದಾರೆಂದು ಮೂಲಗಳು ಹೇಳಿವೆ.
ಇಲ್ಲಿ ಇನ್ನೊಂದು ಸಮಸ್ಯೆಯಿದೆ. 2020 ನವೆಂಬರ್‌ನಲ್ಲಿ ಎಂಪಿಎಲ್ ಭಾರತ ಕ್ರಿಕೆಟ್ ತಂಡದ ಕಿಟ್ ಪ್ರಾಯೋಜಕ ಸಂಸ್ಥೆಯಾಗಿ ಆಯ್ಕೆಯಾಗಿದೆ. ಅದೇ ಸಂಸ್ಥೆಗೆ ಕೊಹ್ಲಿ ಜಾಹೀರಾತು ನೀಡುತ್ತಿರುವುದರಿಂದ ಸ್ವಹಿತಾಸಕ್ತಿ ಸಂಘರ್ಷದ ಆರೋಪ ಕೇಳಿಬಂದಿದೆ.
ಮೂಲಗಳು ಹೇಳುವುದೇನು?: ಕೊಹ್ಲಿ 2019 ಫೆಬ್ರವರಿಯಲ್ಲಿ ಹೂಡಿಕೆ ಮಾಡಿದ ಪರಿಣಾಮ, ಅವರು 33.32 ಲಕ್ಷ ರೂ. ಮೌಲ್ಯದ ಡಿಬೆಂಚರ್‌ಗಳನ್ನು ಪಡೆದಿದ್ದಾರೆ. ಇದರ ಪರಿಣಾಮ 10 ವರ್ಷಗಳ ನಂತರ ಕೊಹ್ಲಿ ಕಂಪನಿಯ ಶೇ.0.051 ಷೇರುಗಳನ್ನು ಪಡೆಯಲಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ:ಸಿಡ್ನಿ ಟೆಸ್ಟ್: ಪುರುಷರ ಪಂದ್ಯಕ್ಕೆ ವನಿತಾ ಫೋರ್ತ್ ಅಂಪಾಯರ್!
ಸ್ವಹಿತಾಸಕ್ತಿ ಅನ್ವಯಿಸಲ್ಲ: ಕಾರ್ನರ್ ಸ್ಪೋರ್ಟ್ ಸಿಇಒ ಅಮಿತ್ ಅರುಣ್ ಸಜ್ಡೆ ಪ್ರಕಾರ, ಕೊಹ್ಲಿಗೆ ಯಾವುದೇ ಸ್ವಹಿತಾಸಕ್ತಿ ಸಮ ಸ್ಯೆಯಿಲ್ಲ. ಅವರು ಯಾವ ಕಂಪನಿಯಲ್ಲಿ ಹೂಡಿಕೆ ಮಾಡುವುದಕ್ಕೆ ಬೇಕಾದರೂ ಸ್ವತಂತ್ರರು. ಸಜ್ಡೆ ಲೆಕ್ಕಾಚಾರದಲ್ಲಿ ನೋಡಿದಾಗ ಕೊಹ್ಲಿಗೆ ಹೂಡಿಕೆ ಮಾಡುವುದಕ್ಕೆ ಅಧಿಕಾರವಿದೆ. ಆದರೆ ಸ್ವಹಿತಾಸಕ್ತಿ ನಿಯಮಗಳ ಪ್ರಕಾರ ನೋಡಿದರೆ, ಬಿಸಿಸಿಐ ಕಿಟ್ ಪ್ರಾಯೋಜಕ ಕಂಪನಿಗೆ ತಾನೇ ಜಾಹೀರಾತು ನೀಡುವುದು, ಅದರ ಮೂಲ ಕಂಪನಿಯಲ್ಲಿ ಷೇರು ಹೊಂದಿರುವುದು ಸ್ವಹಿತಾಸಕ್ತಿ ಸಂಘರ್ಷವೆನಿಸಿಕೊಳ್ಳುತ್ತದೆ. ಇಲ್ಲಿ ಕೊಹ್ಲಿ ತನ್ನ ಕಂಪನಿಯನ್ನು ಬೆಳೆಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪವೂ ಜೀವ ಪಡೆದುಕೊಳ್ಳುವ ಸಾಧ್ಯತೆಯಿದೆ.
ಗಂಗೂಲಿಗೂ ಸಮಸ್ಯೆ: ಬಿಸಿಸಿಐ ಅಧ್ಯಕ್ಷ ಗಂಗೂಲಿ ಮೈ11ಸರ್ಕಲ್ ಬೆಟ್ಟಿಂಗ್ ಆ್ಯಪ್‌ಗೆ ಜಾಹೀರಾತುದಾರ. ಇನ್ನೊಂದುಕಡೆ ಡ್ರೀಮ್11 ಆ್ಯಪ್ ಐಪಿಎಲ್‌ಗೆ ಶೀರ್ಷಿಕೆ ಪ್ರಾಯೋಜಕ! ಇದು ಸ್ವಹಿತಾಸಕ್ತಿ ಎಂಬ ಆರೋಪಗಳು ಕೇಳಿಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.