ಅಭ್ಯಾಸ ಪಂದ್ಯದಲ್ಲಿ ಭಾರತ ಮೇಲುಗೈ
Team Udayavani, Aug 20, 2019, 5:27 AM IST
ಕೂಲಿಜ್ (ಆ್ಯಂಟಿಗುವಾ): ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾರತದ ಬೌಲರ್ಗಳು ಬಿಗಿಯಾದ ದಾಳಿ ಸಂಘಟಿಸಿದ್ದಾರೆ. ಭಾರತ 5 ವಿಕೆಟಿಗೆ 297 ರನ್ ಪೇರಿಸಿ ಡಿಕ್ಲೇರ್ ಮಾಡಿದ ಬಳಿಕ, ವೆಸ್ಟ್ ಇಂಡೀಸ್ ಎ ತಂಡವನ್ನು 56.1 ಓವರ್ಗಳಲ್ಲಿ 181ಕ್ಕೆ ಆಲೌಟ್ ಮಾಡಿದೆ.
ಇಶಾಂತ್ ಶರ್ಮ, ಉಮೇಶ್ ಯಾದವ್ ಮತ್ತು ಕುಲದೀಪ್ ಯಾದವ್ ತಲಾ 3 ವಿಕೆಟ್ ಉರುಳಿಸಿದರು.
3ನೇ ದಿನದಾಟದಲ್ಲಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಭಾರತ, ಭೋಜನ ವಿರಾಮದ ವೇಳೆ 5 ವಿಕೆಟಿಗೆ 174 ರನ್ ಗಳಿಸಿದೆ. ಆರಂಭಿಕನಾಗಿ ಇಳಿದ ಅಜಿಂಕ್ಯ ರಹಾನೆ 54, ವನ್ಡೌನ್ನಲ್ಲಿ ಬಂದ ಹನುಮ ವಿಹಾರಿ 64 ರನ್ ಬಾರಿಸಿ ಮಿಂಚಿದರು. ಮಾಯಾಂಕ್ ಅಗರ್ವಾಲ್ (13), ರಿಷಭ್ ಪಂತ್ (19) ಮತ್ತು ರವೀಂದ್ರ ಜಡೇಜ (9) ಬೇಗನೇ ಔಟಾದರು.
ಸೋಮವಾರ ಪಂದ್ಯದ ಅಂತಿಮ ದಿನವಾಗಿದ್ದು ಭಾರತ ಮುಂಬರುವ ಟೆಸ್ಟ್ ಸರಣಿಗೆ ಬ್ಯಾಟಿಂಗ್ ತಾಲೀಮು ನಡೆಸುವ ಯೋಜನೆಯಲ್ಲಿದೆ. ಸರಣಿಯ ಮೊದಲ ಟೆಸ್ಟ್ ಪಂದ್ಯ ಆ. 22ರಿಂದ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.