ಕುಸಿದ ಬಂಗಾಲಕ್ಕೆ ಈಶ್ವರನ್ ನೆರವು
Team Udayavani, Dec 8, 2017, 1:15 PM IST
ಜೈಪುರ: ಅಭಿಮನ್ಯು ಈಶ್ವರನ್ ಅವರ ಆಕರ್ಷಕ ಶತಕದಿಂದಾಗಿ ಬಂಗಾಲ ತಂಡವು ಗುಜರಾತ್ ತಂಡದೆದುರು ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆರಂಭಿಕ ಕುಸಿತದಿಂದ ಪಾರಾಗಿದೆ. ಅವರು ಅನುಸ್ತುಪ್ ಮಜುಂದಾರ್ ಜತೆ 5ನೇ ವಿಕೆಟಿಗೆ 175 ರನ್ನುಗಳ ಜತೆಯಾಟ ದಲ್ಲಿ ಪಾಲ್ಗೊಂಡರು. ಇದರಿಂದಾಗಿ ಬಂಗಾಲ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟಿಗೆ 261 ರನ್ ಪೇರಿಸಿತು.
ಇಲ್ಲಿನ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ ಗುಜರಾತ್ ಭರ್ಜರಿ ಲಾಭ ಪಡೆಯಿತು. ಲೀಗ್ ಹಂತದಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಗುಜರಾತ್ ಕ್ವಾರ್ಟರ್‌ಫೈನಲ್‌ನಲ್ಲೂ ಮೇಲುಗೈ ಸಾಧಿಸಲು ಪ್ರಯತ್ನಿಸಿತು. ಈಶ್ವರ್ ಚೌಧರಿ ಮತ್ತು ಚಿಂತನ್ ಗಾಜ ಅವರ ದಾಳಿಗೆ ತತ್ತರಿಸಿದ ಬಂಗಾಲ 59 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಒದ್ದಾಡಿತು. ನಾಯಕ ಮನೋಜ್ ತಿವಾರಿ ಸಹಿತ ಔಟಾದ ನಾಲ್ವರೂ ಎರಡಂಕೆಯ ಮೊತ್ತ ಗಳಿಸಲು ವಿಫಲರಾಗಿದ್ದರು.
ಈಶ್ವರನ್ ಶತಕ: ಒಂದು ಕಡೆಯಿಂದ ವಿಕೆಟ್ ಉರುಳುತ್ತಿದ್ದರೂ ಛಲದಿಂದ ಆಡಿದ ಆರಂಭಿಕ ಈಶ್ವರನ್ ಅವರು ಮಜುಂದಾರ್ ಜತೆ ಐದನೇ ವಿಕೆಟಿಗೆ 175 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಕುಸಿದ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು. ಸುಮಾರು ಆರು ತಾಸು ಆಡವಾಡಿದ ಈಶ್ವರನ್ 246 ಎಸೆತ ಎದುರಿಸಿದರಲ್ಲದೇ 17 ಬೌಂಡರಿ ಬಾರಿಸಿದರು. ಇದು ಅವರ ಪ್ರಥಮ ದರ್ಜೆ ಕ್ರಿಕೆಟಿನ ಆರನೇ ಶತಕವಾಗಿದೆ.
ಆದರೆ ಅವರಿಬ್ಬರು 8 ಓವರ್‌ಗಳ ಅಂತರದಲ್ಲಿ ಔಟಾದ ಕಾರಣ ಬಂಗಾಲ ಮತ್ತೆ ಕುಸಿತ ಕಾಣುವ ಭೀತಿಗೆ ಒಳಗಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikhar Dhawan: ನೇಪಾಳದಲ್ಲಿ ಟಿ20 ಕ್ರಿಕೆಟ್ ಲೀಗ್ ಆಡಲಿದ್ದಾರೆ ಶಿಖರ್ ಧವನ್
Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.