ಐಎಸ್‌ಎಲ್: ಪುಣೆ ಕೋಚ್‌ಗೆ 5 ಲಕ್ಷ ರೂ. ದಂಡ, 4 ಪಂದ್ಯ ನಿಷೇಧ
Team Udayavani, Dec 29, 2017, 6:05 AM IST
ಪುಣೆ: ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ನಲ್ಲಿ ಪುಣೆ ಸಿಟಿ ತಂಡದ ತರಬೇತುದಾರರಾಗಿರುವ ರ್‍ಯಾಂಕೊ ಪಾಪೊವಿಚ್‌ರಿಗೆ 4 ಪಂದ್ಯಗಳ ನಿಷೇಧ ಹಾಗೂ 5 ಲಕ್ಷ ರೂ. ದಂಡ ವಿಧಿಸಲಾಗಿದೆ.
ಪುಣೆ ಮತ್ತು ಗೋವಾ ತಂಡದ ಪಂದ್ಯಾನಂತರ ತರಬೇತುದಾರ ಪಾಪೊವಿಚ್ ಅವರು ರೆಫರಿ ಮೇಲೆ ತೀವ್ರ ವಾಗ್ಧಾಳಿ ನಡೆಸಿದ್ದರು. ರೆಫರಿ ಅವರು ಪಂದ್ಯದ ವೇಳೆ ನಮ್ಮ ಆಟಗಾರರನ್ನು ಅನಗತ್ಯವಾಗಿ ಪಂದ್ಯದಿಂದ ಹೊರಕಳುಹಿಸಿದರು. ಗೋವಾ ಆಟಗಾರರನ್ನು ಹಾಗೆಯೇ ಉಳಿಸಿಕೊಂಡರು. ಏನು ಇಲ್ಲಿ ಒಬ್ಬೊಬ್ಬರಿಗೆ ಒಂದು ನಿಯಮವೇ? ಎನ್ನುವುದು ಪಾಪೊವಿಚ್ ಆಕ್ಷೇಪ. ಅಷ್ಟಲ್ಲದೇ ಗೋವಾ ಆಟಗಾರ ಅಹ್ಮದ್ ಜಾಹೊರನ್ನು ಪಂದ್ಯದ ಮಧ್ಯಭಾಗದಲ್ಲೇ ಮೈದಾನದಿಂದ ಹೊರಕಳುಹಿಸಬೇಕಾಗಿತ್ತು ಎಂದು ಆಕ್ಷೇಪಿಸಿದರು. ಇದೆಲ್ಲವೂ ಐಎಸ್‌ಎಲ್ ನಿಯಮಗಳಿಗೆ ವಿರುದ್ಧವಾಗಿರುವುದರಿಂದ ದಂಡ ವಿಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?