ಅಟ್ಲಾಂಟಾ ಪ್ರಶಸ್ತಿ ಕಾಯ್ದುಕೊಂಡ ಇಸ್ನರ್
Team Udayavani, Jul 31, 2018, 10:34 AM IST
ಅಟ್ಲಾಂಟಾ: ಅಮೆರಿಕದ ಜಾನ್ ಇಸ್ನರ್ “ಅಟ್ಲಾಂಟಾ ಓಪನ್’ ಟೆನಿಸ್ ಪ್ರಶಸ್ತಿಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಸತತ 2ನೇ ವರ್ಷವೂ ತಮ್ಮದೇ ದೇಶದ ಎದುರಾಳಿ ರಿಯಾನ್ ಹ್ಯಾರಿಸನ್ ಅವರನ್ನು ಮಣಿಸಿ ಈ ಸಾಧನೆಗೈದರು.
33ರ ಹರೆಯದ ಜಾನ್ ಇಸ್ನರ್ ರವಿವಾರ ರಾತ್ರಿಯ ಪ್ರಶಸ್ತಿ ಕಾಳಗದಲ್ಲಿ 5-7, 6-3, 6-4 ಅಂತರದ ಜಯ ಸಾಧಿಸಿದರು. ಮೊದಲ ಸೆಟ್ ಗೆದ್ದಾಗ ಹ್ಯಾರಿಸನ್ ಸೇಡು ತೀರಿಸಿಕೊಳ್ಳಬಹುದೆಂಬ ನಿರೀಕ್ಷೆ ಮೂಡಿತ್ತು. ಆದರೆ ಅವರಿಗೆ ಮತ್ತೆ ಅದೃಷ್ಟ ಕೈಕೊಟ್ಟಿತು.
2 ಗಂಟೆಗಳ ಕಾಲ ಸಾಗಿದ ಈ ಕಾದಾಟದಲ್ಲಿ ಜಾನ್ ಇಸ್ನರ್ 21 ಏಸ್ ಸಿಡಿಸುವುದರ ಜತೆಗೆ, ಶೇ. 75ರಷ್ಟು ಫಸ್ಟ್ ಸರ್ವ್ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಇತ್ತ 8ನೇ ಶ್ರೇಯಾಂಕದ ಹ್ಯಾರಿಸನ್ ತಮ್ಮ 2ನೇ ಎಟಿಪಿ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರು.
ಇದು ಜಾನ್ ಇಸ್ನರ್ ಪಾಲಾಗುತ್ತಿರುವ 5ನೇ ಅಟ್ಲಾಂಟಾ ಓಪನ್ ಪ್ರಶಸ್ತಿ. 2013ರಿಂದ ಮೊದಲ್ಗೊಂಡು ಹ್ಯಾಟ್ರಿಕ್ ಸಾಧಿಸಿದ ಇಸ್ನರ್, ಕಳೆದ ವರ್ಷ ಮತ್ತೆ ಟ್ರೋಫಿ ಎತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ
Syed Modi International: ಫೇವರಿಟ್ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ
Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.