ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್: ಮೈರಾಜ್‌ಗೆ ಸ್ಕೀಟ್ ಗೋಲ್ಡ್
Team Udayavani, Jul 18, 2022, 11:07 PM IST
ಚಾಂಗ್ವನ್: ಭಾರತದ ಹಿರಿಯ ಶೂಟರ್ ಮೈರಾಜ್ ಅಹ್ಮದ್ ಖಾನ್ ಸೋಮವಾರ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನೂತನ ಮೈಲುಗಲ್ಲು ನೆಟ್ಟರು. ವಿಶ್ವಕಪ್ ಶೂಟಿಂಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಕೀಟ್ ವಿಭಾಗದಲ್ಲಿ ದೇಶಕ್ಕೆ ಚಿನ್ನದ ಪದಕವನ್ನು ತಂದಿತ್ತರು.
ಉತ್ತರ ಪ್ರದೇಶದ 46 ವರ್ಷದ ಮೈರಾಜ್ ಖಾನ್ 37 ಅಂಕಗಳ ಸಾಧನೆಯೊಂದಿಗೆ ಚಿನ್ನಕ್ಕೆ ಗುರಿ ಇರಿಸಿದರು. ಕೊರಿಯಾದ ಮಿನ್ಸು ಕಿಮ್ (36 ಅಂಕ) ಅವರನ್ನು ಒಂದೇ ಅಂಕದ ಅಂತರದಲ್ಲಿ ಹಿಮ್ಮೆಟ್ಟಿಸಿದರು. ಕಂಚಿನ ಪದಕ ಬ್ರಿಟನ್‌ನ ಬೆನ್ ಲೆವ್ಲಿನ್ (26 ಅಂಕ) ಪಾಲಾಯಿತು. ಎರಡು ಬಾರಿಯ ಒಲಿಂಪಿಯನ್ ಆಗಿರುವ ಮೈರಾಜ್ ಖಾನ್ 2016ರ ರಿಯೋ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕದೊಂದಿಗೆ ಮಿಂಚಿದ್ದರು.
ವನಿತೆಯರಿಗೆ ಕಂಚು
ದಿನದ ಇನ್ನೊಂದು ಸ್ಪರ್ಧೆಯಲ್ಲಿ ಅಂಜುಮ್ ಮೌದ್ಗಿಲ್, ಆಶಿ ಚೌಕ್ಸೆ ಮತ್ತು ಸಿಫ್ಟ್ ಕೌರ್ ಸಮ್ರಾ ಅವರನ್ನೊಳಗೊಂಡ ವನಿತಾ ತಂಡ 50 ಮೀ. ರೈಫಲ್ 3 ಪೊಸಿಶನ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿತು.
ಭಾರತ ಒಟ್ಟು 13 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ (5 ಚಿನ್ನ, 5 ಬೆಳ್ಳಿ, 3 ಕಂಚು).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.