10 ಮೀ. ಏರ್ ರೈಫಲ್ ಫೈನಲ್ ತಲುಪಲು ಭಾರತ ವಿಫಲ
Team Udayavani, Feb 26, 2019, 12:30 AM IST
ಹೊಸದಿಲ್ಲಿ: ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ ಪಂದ್ಯಾವಳಿಯ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯ ಫೈನಲ್ ತಲುಪಲು ಭಾರತ ವಿಫಲವಾಗಿದೆ.
ಸೋಮವಾರದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ದಿವ್ಯಾಂಶ್ ಸಿಂಗ್ ಪನ್ವಾರ್, ರವಿಕುಮಾರ್ ಮತ್ತು ದೀಪಕ್ ಕುಮಾರ್ 12ರ ಆಚೆಯ ಸ್ಥಾನ ಪಡೆದು ಕೂಟದಿಂದ ನಿರ್ಗಮಿಸಿದರು.ವಿಶ್ವಕಪ್ ಪದಕ ವಿಜೇತ ಖ್ಯಾತಿಯ ರವಿಕುಮಾರ್ 627 ಅಂಕಗಳಿಗೆ ತೃಪ್ತರಾದರು. ದೀಪಕ್ 624.3 ಮತ್ತು ದಿವ್ಯಾಂಶ್ 627.2 ಅಂಕಗಳನ್ನಷ್ಟೇ ಪಡೆದು ಫೈನಲ್ ರೇಸ್ನಿಂದ ಹೊರಬಿದ್ದರು. ಹೀಗಾಗಿ ಈ ಮೂರೂ ಮಂದಿ ಟೋಕಿಯೊ ಒಲಿಂಪಿಕ್ಸ್ ಅರ್ಹತೆಗಾಗಿ ಮುಂದಿನ ವಿಶ್ವಕಪ್ ತನಕ ಕಾಯಬೇಕಿದೆ.
ರವಿವಾರ 50 ಮೀ. ರೈಫಲ್ 3 ಪೊಸಿಶನ್ನಲ್ಲಿ ಚಿನ್ನದ ಪದಕ ಜಯಿಸಿದ ಹಂಗೇರಿಯ ಪೀಟರ್ ಸಿದಿ ಮತ್ತು ಇಸ್ವಾನ್ ಪೆನಿ ಅವರೂ ಅರ್ಹತಾ ಸುತ್ತಿನಲ್ಲೇ ನಿರ್ಗಮಿಸಿದರು. ರಶ್ಯದ ಸಗೇìಯಿ ಕಮೆನ್ಸ್ಕಿ ಚಿನ್ನ (249.9), ಚೀನದ ಯುಕುನ್ ಲಿಯು ಬೆಳ್ಳಿ (247.0) ಮತ್ತು ಝಿಚೆಂಗ್ ಹುಯಿ ಕಂಚಿನ ಪದಕ ಗೆದ್ದರು (225.9).
ಸತತ 2 ದಿನ ಬಂಗಾರದ ಪದಕ ಗೆದ್ದ ಭಾರತಕ್ಕೆ ಸೋಮವಾರ ನಿರಾಸೆಯ ದಿನವಾಗಿ ಪರಿಣಮಿಸಿತು. ಕಳೆದೆರಡು ದಿನ ಅಪೂರ್ವಿ ಚಾಂಡೇಲ ಮತ್ತು ಸೌರಭ್ ಚೌಧರಿ ಚಿನ್ನದ ಬೇಟೆಯಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.