ವಿಶ್ವ ಶೂಟಿಂಗ್: ಭಾರತದ ಸರ್ವಾಧಿಕ ಪದಕ ದಾಖಲೆ
Team Udayavani, Sep 15, 2018, 6:00 AM IST
ಚಾಂಗ್ವಾನ್ (ದಕ್ಷಿಣ ಕೊರಿಯಾ): ಐಎಸ್ಎಸ್ಎಫ್ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಭಾರತ ಹಿರಿಯರ ಶೂಟಿಂಗ್ ತಂಡಕ್ಕೆ ಗುರುಪ್ರೀತ್ ಸಿಂಗ್ ಬೆಳ್ಳಿ ನಗು ಮೂಡಿಸಿದ್ದಾರೆ. ಇದೇ ವೇಳೆ ಕೂಟದ ಅಂತಿಮ ದಿನವೂ ಭಾರತ ಕಿರಿಯರು ಮಿಂಚಿದರು.
ಕೊನೆಯ ದಿನದ ಅಂತ್ಯಕ್ಕೆ 11 ಚಿನ್ನ, 9 ಬೆಳ್ಳಿ ಹಾಗೂ 7 ಕಂಚಿನ ಪದಕ ಸೇರಿದಂತೆ ಒಟ್ಟಾರೆ 27 ಪದಕ ಬಾಚಿಕೊಂಡು ಭಾರತ ಹಿಂದಿನ ಎಲ್ಲ ಕೂಟಗಳಿಗಿಂತಲೂ ಸರ್ವ ಶ್ರೇಷ್ಠ ಪ್ರದರ್ಶನ ನೀಡಿತು. ಒಟ್ಟಾರೆ ಕೂಟಕ್ಕೆ ತೆರೆಬಿದ್ದಿತ್ತು. ಮುಂದೆ ಭಾರತೀಯರು ಯೂತ್ ಒಲಿಂಪಿಕ್ಸ್ ಗೇಮ್ಸ್ ಶೂಟಿಂಗ್ಗೆ ಸಿದ್ಧವಾಗಬೇಕಿದೆ. ಇದಾದ ಬಳಿಕ 2019 ಫೆಬ್ರವರಿಯಲ್ಲಿ ವಿಶ್ವಕಪ್ ಶೂಟಿಂಗ್ ಗುಂಪು 1ರಲ್ಲಿ ಸ್ಪರ್ಧೆ ನಡೆಯಲಿದೆ. 2020ರ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವಲ್ಲಿ ಕೂಟ ಪ್ರಮುಖವಾಗಿದ್ದು ಭಾರತೀಯರು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಗುರುಪ್ರೀತ್ಗೆ ಬೆಳ್ಳಿ: ಹಿರಿಯರ ವಿಭಾಗದ ಸ್ಟಾಂಡರ್ಡ್ ಪಿಸ್ತೂಲ್ ವಿಭಾಗದಲ್ಲಿ ಮಾಜಿ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಗುರುಪ್ರೀತ್ ಒಟ್ಟು 579 ಅಂಕ ಕಲೆ ಹಾಕಿ ಬೆಳ್ಳಿ ಗೆದ್ದರು. ಹಿರಿಯರ ತಂಡದ ಸ್ಪರ್ಧಿಗಳ ಕಳಪೆ ಪ್ರದರ್ಶನದ ನಡುವೆಯೂ ಇವರು ಬೆಳ್ಳಿ ಗೆದ್ದದ್ದು ವಿಶೇಷವಾಗಿತ್ತು. ಆದರೆ ಗುರುಪ್ರೀತ್ (560), ಅಮನ್ಪ್ರೀತ್ ಸಿಂಗ್(560), ಲಂಡನ್ ಒಲಿಂಪಿಕ್ಸ್ ಬೆಳ್ಳಿ ವಿಜೇತ ವಿಜಯ್ ಕುಮಾರ್ (560) ಅಂಕ ಒಳಗೊಂಡ ತಂಡ ಸೋಲುಂಡು ನಿರಾಸೆ ಅನುಭವಿಸಿತು.
ಕಿರಿಯರ ಸ್ವರ್ಣ ಯುಗ: ಕಿರಿಯರ ವಿಭಾಗದಲ್ಲಿ ಭಾರತೀಯರ ಚಿನ್ನದ ಪಾರಮ್ಯ ಮತ್ತೆ ಮುಂದುವರಿಯಿತು. ಕೂಟದ ಆರಂಭದಿಮದಲೂ ಕಿರಿಯರ ವಿಭಾಗದ ಶೂಟರ್ಗಳು ಪದಕಗಳ ಮಳೆಯನ್ನೇ ಸುರಿಸಿದ್ದರು. ಕೊನೆಯ ದಿನವೂ ಅಂತಹುದೇ ಸಾಧನೆ ಮುಂದುವರಿಯಿತು. 25 ಮೀ. ಸ್ಟಾಂಡರ್ಡ್ ಪಿಸ್ತೂಲ್ ವಿಭಾಗದಲ್ಲಿ ವಿಜಯವೀರ್ ಸಿಧು ಚಿನ್ನದ ಪದಕ ಪಡೆದುಕೊಂಡರು. ಇದಕ್ಕೂ ಮೊದಲು ಇವರನ್ನು ಒಳಗೊಂಡ ತಂಡವು ಚಿನ್ನದ ಪದಕ ಪಡೆದಿತ್ತು. ವಿಜಯವೀರ್ ಸಿಧು (564 ಅಂಕ), ರಾಜ್ಕನ್ವರ್ ಸಿಂಗ್ ಸಿಧು (564) ಹಾಗೂ ಆದರ್ಶ್ ಸಿಂಗ್ (559) ಅಂಕಗಳಿಸಿ ತಂಡವು ಚಿನ್ನ ಕೊರಳಿಗೇರಿಸಿಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.